Second Phase Lockdown: 2ನೇ ಹಂತದ ಲಾಕ್​ಡೌನ್​ ವಿಸ್ತರಣೆ; ಪೊಲೀಸ್ ಸಿಬ್ಬಂದಿಗೆ ಮತ್ತಷ್ಟು ಸೂಚನೆಗಳನ್ನು ನೀಡಿದ ಕಮಿಷನರ್ ಭಾಸ್ಕರ್ ರಾವ್

Lockdown Extension: ಎರಡನೇ ಹಂತದ ವಿಸ್ತರಣೆಯ ಲಾಕ್​ಡೌನ್​ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಪೊಲೀಸ್ ಇಲಾಖೆ ಸಕಲ ರೀತಿಯಲ್ಲೂ ಸಜ್ಜಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಸಿಬ್ಬಂದಿಗೆ ಇಂದು ಕೆಲವು ಸೂಚನೆಗಳನ್ನು ನೀಡಿದ್ದಾರೆ. 

ಪೊಲೀಸ್ ಆಯುಕ್ತ​​ ಭಾಸ್ಕರ್ ರಾವ್

ಪೊಲೀಸ್ ಆಯುಕ್ತ​​ ಭಾಸ್ಕರ್ ರಾವ್

  • Share this:
    ಬೆಂಗಳೂರು: ಕೊರೋನಾ ನಿಯಂತ್ರಣ ಸಲುವಾಗಿ ಹೇರಲಾಗಿದ್ದ 21 ದಿನಗಳ ಲಾಕ್​ಡೌನ್ ನಾಳೆಗೆ ಮುಕ್ತಾಯಗೊಳ್ಳಲಿದೆ. ಆದರೂ ಮಾರಕ ಸೋಂಕು ಹತೋಟಿಗೆ ಬಾರದ ಕಾರಣಕ್ಕೆ ಲಾಕ್​ಡೌನ್​ ಈ ತಿಂಗಳ ಕೊನೆಯವರೆಗೂ ವಿಸ್ತರಣೆಯಾಗುವುದು ಬಹುತೇಕ ಖಚಿತವಾಗಿದೆ. 

    ಎರಡನೇ ಹಂತದ ವಿಸ್ತರಣೆಯ ಲಾಕ್​ಡೌನ್​ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಪೊಲೀಸ್ ಇಲಾಖೆ ಸಕಲ ರೀತಿಯಲ್ಲೂ ಸಜ್ಜಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಸಿಬ್ಬಂದಿಗೆ ಇಂದು ಕೆಲವು ಸೂಚನೆಗಳನ್ನು ನೀಡಿದ್ದಾರೆ.

    • ಎಲ್ಲಾ ಸಿಬ್ಬಂದಿಗಳು ಒಳ್ಳೆಯ ಕೆಲಸ ಮಾಡಿ, ಎಲ್ಲರ ಕಡೆಯಿಂದ ಪ್ರಶಂಸೆ ಪಡೆದಿದ್ದೇವೆ.

    • ಇನ್ನು ಉಳಿದ ದಿನಗಳಲ್ಲಿ ಕೂಡ ನಾವು ಹೀಗೆ ಕೆಲಸ‌ ಮಾಡಬೇಕು, ಸಾರ್ವಜನಿಕರಿಗೆ ಸಮಸ್ಯೆ ಆಗಬಾರದು.

    • ಮಾಧ್ಯಮದವರಿಗೆ, ಹಣ್ಣು ತರಕಾರಿ, ದಿನಸಿ ತರುವವರಿಗೆ ಸಮಸ್ಯೆ ಮಾಡಬಾರದು.

    • ಗೂಡ್ಸ್ ವಾಹನಗಳಿಗೆ ಯಾವುದೇ ತೊಂದರೆ ಆಗಬಾರದು, ಖಾಲಿ ವಾಹನ ಇರಲಿ, ತುಂಬಿದ ವಾಹನ ಇರಲಿ. ಅವರಿಗೆ ಸಮಸ್ಯೆ ಮಾಡಬಾರದು.

    • ಮಾರ್ಕೆಟ್​ಗಳಿಗೆ ಬರುವ ಹಮಾಲಿಗಳಿಗೆ ತೊಂದರೆ ಕೊಡಬಾರದು.

    • ಕೆಲವರು ಪಾಸ್ ಇಲ್ಲದೆ ತುರ್ತಾಗಿ ಓಡಾಡಬೇಕಾಗಿರುತ್ತೆ, ಅಂತಾ ಸಮಯದಲ್ಲಿ ಸಾಮಾಜ್ಯಜ್ಞಾನ ಬಳಸಿ ನಿರ್ಧಾರ ಕೈಗೊಳ್ಳಬೇಕು. ಗರ್ಭಿಣಿಯರು, ಅನಾರೋಗ್ಯಕ್ಕೆ ಒಳಗಾದವರು ಬಂದಾಗ ಸಹನೆಯಿಂದ ಮಾತನಾಡಿಸಿ ಸಹಾಯ ಮಾಡಿ.

    • ಎಟಿಎಂ ಕೆಲಸದವರಿಗೆ, ಸರ್ಕಾರಿ ಅಧಿಕಾರಿಗಳು, ಪ್ರವೈಟ್ ಸೆಕ್ಯೂರಿಟಿ ಎಸೆನ್ಸಿಯಲ್ ಸರ್ವಿಸ್ ಅವರಿಗೆ ತೊಂದರೆ ಕೊಡಬಾರದು.

    • ನಕಲಿ‌ ಪಾಸ್ ಮಾಡಿಕೊಂಡು ಓಡಾಡುವರ ವಿರುದ್ದ ಸೂಕ್ತ ಕ್ರಮ‌ ಜರುಗಿಸಿ. ಹಾಗೂ ಲಾಕ್ ಡೌನ್ ಮುಗಿದ ಬಳಿಕ ವಾಹನ ವಾಪಸ್ ನೀಡಲು ದಾಖಲಾತಿಗಳನ್ನು ಮಾಡಿಕೊಳ್ಳಿ.

    • ಸಾರ್ವಜನಿಕರಿಗೆ ನಮ್ಮ‌ ಮೇಲೆ ನೀರಿಕ್ಷೆ ಇದೆ. ನೀವು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದೀರ. ನಿಮ್ಮ ಆರೋಗ್ಯ ಕಾಪಾಡಿಕೊಂಡು ಕೆಲಸ ಮಾಡಿ.


    ಇದನ್ನು ಓದಿ: ಲಾಕ್​ಡೌನ್ ಬಗ್ಗೆ ನಾಳೆ ಬೆಳಿಗ್ಗೆ 10ಕ್ಕೆ ಪ್ರಧಾನಿ ಮೋದಿ ಭಾಷಣ; ಏನೇನು ಹೇಳಬಹುದು?
    First published: