HOME » NEWS » Coronavirus-latest-news » BENGALURU LAWYERS MAKING ARRANGEMENTS FOR IMMIGRANTS TO REACH THEIR NATIVE GNR

ವಲಸೆ ಕಾರ್ಮಿಕರ ಸಹಾಯಕ್ಕೆ ಬಂದ ಲಾಯರ್ಸ್ - ರೈಲು ಬಸ್ಸು ಬಿಟ್ಟು ವಿಮಾನದಲ್ಲಿ ಊರು ಸೇರ್ತಿದ್ದಾರೆ ವಲಸಿಗರು

ಬೆಂಗಳೂರಿನಲ್ಲಿರುವ ಖ್ಯಾತ ವಕೀಲ ಸಿ.ಕೆ ನಂದಕುಮಾರ್ ಕೂಡಾ ಈ ಅದ್ಭುತ ಕೆಲಸ ಮಾಡುತ್ತಿರುವ ಹಳೆ ವಿದ್ಯಾರ್ಥಿಗಳ ಗುಂಪಿನಲ್ಲಿದ್ದಾರೆ. ಅನೇಕ ಕಾರ್ಮಿಕರು ಜೀವನದಲ್ಲಿ ವಿಮಾನವನ್ನೇ ನೋಡದಿರೋದ್ರಿಂದ ಅದ್ರಲ್ಲಿ ಪ್ರಯಾಣಿಸೋಕೆ ಭಯಪಟ್ಟು ಇಲ್ಲೇ ಉಳಿಯಲು ಪ್ರಯತ್ನಿಸಿದ ಸಾಕಷ್ಟು ಉದಾಹರಣೆಗಳು ಅವರ ಮುಂದಿದೆ.

news18-kannada
Updated:June 3, 2020, 9:30 PM IST
ವಲಸೆ ಕಾರ್ಮಿಕರ ಸಹಾಯಕ್ಕೆ ಬಂದ ಲಾಯರ್ಸ್ - ರೈಲು ಬಸ್ಸು ಬಿಟ್ಟು ವಿಮಾನದಲ್ಲಿ ಊರು ಸೇರ್ತಿದ್ದಾರೆ ವಲಸಿಗರು
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಜೂ.03): ವಲಸೆ ಕಾರ್ಮಿಕರು ತಂತಮ್ಮ ಊರುಗಳಿಗೆ, ಮನೆಗಳಿಗೆ ಸೇರಿಕೊಳ್ಳೋಕೆ ಈ ಕೊರೋನಾ ಲಾಕ್​​ಡೌನ್ ಸಂದರ್ಭದಲ್ಲಿ ಅದೆಷ್ಟು ಕಷ್ಟ ಪಡ್ತಿದ್ದಾರೆ ಅನ್ನೋದನ್ನ ನಾವೆಲ್ಲರೂ ನೋಡುತ್ತಲೇ ಇದ್ದೀವಿ. ರೈಲುಗಳು, ಬಸ್ಸು-ಲಾರಿಗಳು, ಕೊನೆಗೆ ನಡೆದೇ ನೂರಾರು ಕಿಲೋಮೀಟರ್ ತಲುಪೋಕೂ ಅವ್ರು ರೆಡಿಯಾಗ್ಬಿಟ್ಟಿದ್ದಾರೆ. ಆದ್ರೆ ಅವರ ಕಷ್ಟಗಳನ್ನ ಅಕ್ಷರಶಃ ಗಾಳಿಗೆ ತೂರಿ ಅವರನ್ನು ಮನೆಗೆ ಮರಳಿಸುವ ಕೆಲಸ ಮಾಡ್ತಿದ್ದಾರೆ ನ್ಯಾಷನಲ್ ಲಾ ಸ್ಕೂಲ್ ನ ಕೆಲವು ಹಳೇ ವಿದ್ಯಾರ್ಥಿಗಳು.

ಹೌದು, ವಲಸೆ ಕಾರ್ಮಿಕರಿಗೆ ನಾವೆಲ್ಲಾ ಸೇರಿ ಏನಾದ್ರೂ ಮಾಡ್ಬೇಕಲ್ಲಾ ಅಂತ ಈ ಗೆಳೆಯರೆಲ್ಲಾ ಮಾತಾಡಿಕೊಂಡ್ರಂತೆ. ಎಲ್ಲರೂ ಬೇರೆ ಬೇರೆ ಕಡೆಗಳಲ್ಲಿ ತಂತಮ್ಮ ಕೆಲಸ, ವ್ಯವಹಾರಗಳನ್ನ ಮಾಡಿಕೊಂಡಿರೋ ಇವ್ರು ತಮ್ಮ ಕಾಂಟ್ಯಾಕ್ಟ್ ಗಳನ್ನು ಬಳಸಿ ವಲಸೆ ಕಾರ್ಮಿಕರನ್ನು ಮನೆ ತಲುಪಿಸೋ ಕೆಲಸ ಮಾಡ್ತಿದ್ದಾರೆ. ಒಂದು ವಿಮಾನದ ಅಷ್ಟೂ 180 ಸೀಟುಗಳನ್ನು ಬುಕ್ ಮಾಡಿ ಅದ್ರಲ್ಲಿ ವಲಸೆ ಕಾರ್ಮಿಕರನ್ನು ಕಳಿಸುವ ಕೆಲಸ ಸದ್ದಿಲ್ಲದೇ ನಡೆಯುತ್ತಿದೆ.

ಈಗಾಗಲೇ 3 ಬಾರಿ ಮುಂಬೈನಿಂದ ಬೇರೆ ನಗರಗಳಿಗೆ ಈ ರೀತಿಯ ಟ್ರಿಪ್​​ಗಳನ್ನು ಯಶಸ್ವಿಯಾಗಿ ಆಯೋಜಿಸಿರೋ ಈ ತಂಡ ನಾಳೆ ಮೊದಲ ಬಾರಿಗೆ ಬೆಂಗಳೂರಿನಿಂದ ಛತ್ತಿಸಗಡದ ರಾಯಪುರಕ್ಕೆ ವಲಸೆ ಕಾರ್ಮಿಕರನ್ನು ಕಳಿಸಲು ರೆಡಿಯಾಗಿದೆ. ನಾಳೆ ಮುಂಜಾನೆ 8 ಗಂಟೆಗೆ ಹೊರಡಲಿರುವ ಚಾರ್ಟರ್ಡ್ ಫ್ಲೈಟ್ ನಲ್ಲಿ 180 ವಲಸೆ ಕಾರ್ಮಿಕರು ತಮ್ಮ ಜೀವಮಾನದ ಮೊಟ್ಟಮೊದಲ ವಿಮಾನ ಪ್ರಯಾಣವನ್ನು ಮಾಡಲಿದ್ದಾರೆ.

ಈ ಕಾರ್ಮಿಕರನ್ನು ವಿವಿಧ ಸಂಘ ಸಂಸ್ಥೆಗಳ ಮೂಲಕ ಸಂಪರ್ಕಿಸಲಾಗಿದೆ. ಅವರ ವೈದ್ಯಕೀಯ ಪರೀಕ್ಷೆಗಳು, ದಾಖಲೆಗಳು ಎಲ್ಲವನ್ನೂ ಹೊಂದಿಸುವುದು ಮಾತ್ರವಲ್ಲ. ಅವರಿರುವ ಊರು-ಹಳ್ಳಿಗಳಿಂದ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅವರನ್ನು ಕರೆದುಕೊಂಡು ಬರುವುದು ಕೂಡಾ ಸವಾಲಿನ ಕೆಲಸವೇ.

ದೂರದೂರಿನಲ್ಲಿ ಇರುವವರನ್ನು ಒಂದು ದಿನ ಮುಂಚಿತವಾಗಿಯೇ ಕರತಂದು ಅವರಿಗೆ ಊಟ-ವಸತಿ ವ್ಯವಸ್ಥೆ ಮಾಡಲಾಗಿದೆ. ನಾಳೆ ಬೆಳಗ್ಗಿನ 8 ಗಂಟೆಯ ವಿಮಾನ ಈ ಎಲ್ಲಾ 180 ವಲಸೆ ಕಾರ್ಮಿಕರನ್ನು ಮನೆ ತಲುಪಿಸಲಿದೆ. ಅಂದ್ಹಾಗೆ ಒಂದು ಬಾರಿ ಈ ರೀತಿಯ ಟ್ರಿಪ್​​ಗೆ ತಗಲುವ ವೆಚ್ಚ 14 ರಿಂದ 18 ಲಕ್ಷ ರೂಪಾಯಿಗಳು. ಅನೇಕ ದಾನಿಗಳು ಖುಷಿಯಿಂದಲೇ ಇವರ ಈ ಕೆಲಸಕ್ಕೆ ಸಹಾಯ ಮಾಡಿವೆ.

ರೈಲುಗಳನ್ನು ಬದಲಿಸಿಕೊಂಡು, ಎಲ್ಲಿ ಹೋಗಬೇಕು, ಯಾರನ್ನು ಸಂಪರ್ಕಿಸಬೇಕು ತಿಳಿಯದೇ, ಭಾಷೆಯೇ ಬರದೆ ಹಸಿದುಕೊಂಡೇ ದಿನ ಕಳೆಯುತ್ತಿರುವ ಲೆಕ್ಕವಿಲ್ಲದಷ್ಟು ವಲಸಿಗರು ನಮ್ಮ ಸುತ್ತಮುತ್ತ ಇದ್ದಾರೆ. ಅವರಲ್ಲಿ ಕೆಲವರ ಕಷ್ಟಗಳನ್ನಾದ್ರೂ ಸ್ವಲ್ಪ ಕಡಿಮೆ ಮಾಡುವ ಪ್ರಯತ್ನ ಇವರದ್ದು.

ಬೆಂಗಳೂರಿನಲ್ಲಿರುವ ಖ್ಯಾತ ವಕೀಲ ಸಿ.ಕೆ ನಂದಕುಮಾರ್ ಕೂಡಾ ಈ ಅದ್ಭುತ ಕೆಲಸ ಮಾಡುತ್ತಿರುವ ಹಳೆ ವಿದ್ಯಾರ್ಥಿಗಳ ಗುಂಪಿನಲ್ಲಿದ್ದಾರೆ. ಅನೇಕ ಕಾರ್ಮಿಕರು ಜೀವನದಲ್ಲಿ ವಿಮಾನವನ್ನೇ ನೋಡದಿರೋದ್ರಿಂದ ಅದ್ರಲ್ಲಿ ಪ್ರಯಾಣಿಸೋಕೆ ಭಯಪಟ್ಟು ಇಲ್ಲೇ ಉಳಿಯಲು ಪ್ರಯತ್ನಿಸಿದ ಸಾಕಷ್ಟು ಉದಾಹರಣೆಗಳು ಅವರ ಮುಂದಿದೆ.ಇದುವರಗೆ ವಲಸಿಗರನ್ನು ಏರ್ ಲಿಫ್ಟ್ ಮಾಡಿದ ಕಡೆಗಳಲೆಲ್ಲಾ ಸರ್ಕಾರಗಳು ಮತ್ತು ಅಧಿಕಾರಿಗಳು ಇವರಿಗೆ ನೀಡಿದ ಬೆಂಬಲ ಮತ್ತು ಸಹಕಾರವನ್ನೂ ಅವರು ಸ್ಮರಿಸಿದ್ದಾರೆ. ದಿನ, ವಾರ, ತಿಂಗಳುಗಟ್ಟಲೆ ತಮ್ಮೂರಿಗೆ ಮರಳೋಕೆ ಕಾಯುತ್ತಿರೋ ಅಸಂಖ್ಯಾತ ಜನರ ನಡುವೆ ಕೆಲವರನ್ನಾದ್ರೂ ಕೆಲವೇ ಗಂಟೆಗಳಲ್ಲಿ ಅವರ ಮನೆಗೆ ತಲುಪಿಸೋ ಅಸಾಮಾನ್ಯ ಪ್ರಯತ್ನ ಇವರದ್ದು.
First published: June 3, 2020, 9:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading