ಬೆಂಗಳೂರು; ರಾಜಧಾನಿ ಬೆಂಗಳೂರಿನಲ್ಲಿ ಮಾರಕ ಕೊರೋನಾ ವೈರಸ್ನಿಂದ ಮೃತಪಡುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಚಿತಾಗಾರದಲ್ಲಿ ಶವ ಸಂಸ್ಕಾರಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರಿನ ಬನಶಂಕರಿ, ಸುಂಕದಕಟ್ಟೆ , ಕಲ್ಲಹಳ್ಳಿ, ಹೆಬ್ಬಾಳ , ಕೂಡ್ಲು ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಯುತ್ತಿವೆ. ನಗರದ ಪ್ರತಿ ಚಿತಾಗಾರಕ್ಕೂ ಏಳರಿಂದ ಹತ್ತು ಮೃತದೇಹಗಳನ್ನು ಕಳುಹಿಸಲು ಬಿಬಿಎಂಪಿ ವ್ಯವಸ್ಥೆ ಮಾಡಿದೆ. ಅದರಂತೆ ಚಿತಾಗಾರದಲ್ಲಿ ಒಂದು ಮೃತ ದೇಹ ಸುಡಲು 1 ರಿಂದ 2 ಗಂಟೆ ಸಮಯ ಬೇಕು. ಹೀಗಾಗಿ ಶವ ಸಂಸ್ಕಾರ ತಡವಾಗುವುದರಿಂದ ಮೃತರ ಸಂಬಂಧಿಕರು ಎಲ್ಲರೂ ಕಾಯಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಚಿತಾಗಾರದಲ್ಲಿ ಶವಸಂಸ್ಕಾರಕ್ಕೆ ಮೃತದೇಹಗಳನ್ನು ತಂದ ಆ್ಯಂಬುಲೆನ್ಸ್ಗಳು ಸಾಲಿನಲ್ಲಿ ಕಾದು ನಿಂತಿವೆ.
ಆರೋಗ್ಯಾಧಿಕಾರಿಗಳ ಸಮ್ಮುಖದಲ್ಲಿ ಮೃತದೇಹಗಳ ಅಂತ್ಯ ಸಂಸ್ಕಾರ ನಡೆಯುತ್ತಿದೆ. ಆದರೆ, ದಿನಪೂರ್ತಿ ಸ್ಮಶಾನದಲ್ಲಿ ಇರಲು ಆರೋಗ್ಯಾಧಿಕಾರಿಗಳಿಗೂ ಭಯ ಕಾಡಲಾರಂಭಿಸಿದೆ.
ಇದನ್ನು ಓದಿ: BBMP Commissioner: ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್ ವರ್ಗಾವಣೆ; ಮಂಜುನಾಥ್ ಪ್ರಸಾದ್ ನೂತನ ಆಯುಕ್ತ
ಕೋವಿಡ್ನಿಂದ ಮೃತಪಟ್ಟವರ ಮುಖವನ್ನು ಕೊನೆಯದಾಗಿ ನೋಡಲು ಸಂಬಂಧಿಕರು ಕಡ್ಡಾಯವಾಗಿ ಚಿತಾಗಾರದ ಪ್ರವೇಶದ್ವಾರದಲ್ಲಿ ಪಿಪಿಇ ಕಿಟ್ ಧರಿಸಿ ಬರಬೇಕು. ಪಿಪಿಇ ಕಿಟ್ ಧರಿಸದಿದ್ದರೆ ಮುಖ ನೋಡಲು ಅವಕಾಶವಿಲ್ಲ. ಈ ಮೊದಲು ಕೋವಿಡ್ನಿಂದ ಮೃತಪಟ್ಟವರ ಮೃತದೇಹದ ಮುಂದೆ ಕರ್ಪೂರ ಹಚ್ಚಿ ಪೂಜೆ ಮಾಡಲು ಅವಕಾಶವಿತ್ತು. ಈಗ ಕರ್ಪೂರ ಹಚ್ಚುವುದಕ್ಕೂ ನಿರ್ಬಂಧ ವಿಧಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ