HOME » NEWS » Coronavirus-latest-news » BENGALURU CORONAVIRUS BANGALORE BELLANDURU APARTMENT COMPLEX SEALED AFTER 10 PEOPLE INFECTED COVID 19 VIRUS SCT

Bengaluru Coronavirus: ಬೆಂಗಳೂರಿನಲ್ಲಿ ಹೆಚ್ಚಿದ ಕೊರೋನಾ ಕೇಸ್; ಬೆಳ್ಳಂದೂರಿನ ಅಪಾರ್ಟ್​ಮೆಂಟ್ ಸೀಲ್​ಡೌನ್

Bangalore Covid-19 Cases: ಕೆಲವು ದಿನಗಳ ಹಿಂದೆ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಅಪಾರ್ಟ್​ಮೆಂಟ್​ನಲ್ಲಿ 113 ಜನರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಬೆಳ್ಳಂದೂರಿನ ಅಂಬಲಿಪುರದಲ್ಲಿರುವ ಮತ್ತೊಂದು ಅಪಾರ್ಟ್​ಮೆಂಟ್​ನಲ್ಲಿ 10 ಜನರಿಗೆ ಕೊರೋನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಸೀಲ್​ಡೌನ್ ಮಾಡಲಾಗಿದೆ.

Sushma Chakre | news18-kannada
Updated:February 23, 2021, 2:22 PM IST
Bengaluru Coronavirus: ಬೆಂಗಳೂರಿನಲ್ಲಿ ಹೆಚ್ಚಿದ ಕೊರೋನಾ ಕೇಸ್; ಬೆಳ್ಳಂದೂರಿನ ಅಪಾರ್ಟ್​ಮೆಂಟ್ ಸೀಲ್​ಡೌನ್
ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್​
  • Share this:
ಬೆಂಗಳೂರು (ಫೆ. 23): ದೇಶಾದ್ಯಂತ ಹಲವೆಡೆ ಮತ್ತೆ ಕೊರೋನಾ ಕೇಸ್​ಗಳು ಹೆಚ್ಚಾಗುತ್ತಿದ್ದು, ನೆರೆಯ ರಾಜ್ಯವಾದ ಮಹಾರಾಷ್ಟ್ರ, ಕೇರಳದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಇದರ ನಡುವೆ ಬೆಂಗಳೂರಿನಲ್ಲೂ ಕೊರೋನಾ ಕೇಸ್​ಗಳು ಹೆಚ್ಚುತ್ತಿದ್ದು, ಸಿಲಿಕಾನ್ ಸಿಟಿ ಮತ್ತೆ ಕೊರೋನಾ ಹಾಟ್​ಸ್ಪಾಟ್​ ಆಗಲಿದೆಯಾ? ಎಂಬ ಆತಂಕ ಸೃಷ್ಟಿಸಿದೆ. ಮಹಾರಾಷ್ಟ್ರದ ಬಳಿಕ ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಒಂದೇ ಅಪಾರ್ಟ್​ಮೆಂಟ್​ನಲ್ಲಿ 10 ಜನರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದರಿಂದ ಅಪಾರ್ಟ್​ಮೆಂಟ್ ಕಾಂಪ್ಲೆಕ್ಸ್​ ಅನ್ನೇ ಸೀಲ್​ಡೌನ್ ಮಾಡಲಾಗಿದೆ.

ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಅಪಾರ್ಟ್​ಮೆಂಟ್​ನಲ್ಲಿ 113 ಜನರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಅದಾದ ಬಳಿಕ ಇದೀಗ ಬೆಳ್ಳಂದೂರಿನ ಅಂಬಲಿಪುರದಲ್ಲಿರುವ ಮತ್ತೊಂದು ಅಪಾರ್ಟ್​ಮೆಂಟ್​ನಲ್ಲಿ 10 ಜನರಿಗೆ ಕೊರೋನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಬೆಳ್ಳಂದೂರು ಅಪಾರ್ಟ್​ಮೆಂಟ್ ಅನ್ನು ಸೀಲ್​ಡೌನ್ ಮಾಡಿದ್ದಾರೆ.

ಬೆಳ್ಳಂದೂರು ವಾರ್ಡ್‌ನ ಅಂಬಲಿಪುರದ ಎಸ್‌ಜೆಆರ್‌ ವಾಟರ್‌ಮಾರ್ಕ್ ಅಪಾರ್ಟ್‌ಮೆಂಟ್‌ನಲ್ಲಿ ಫೆ. 15ರಂದು ಓರ್ವ ವ್ಯಕ್ತಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಅದಾದ ಬಳಿಕ ಇದುವರೆಗೂ ಆ ಪಾರ್ಟ್​ಮೆಂಟ್​ನ 10 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.

ಫೆ. 15ರಿಂದ 22ರೊಳಗೆ ಅಪಾರ್ಟ್​ಮೆಂಟ್​ನ 10 ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ಅಪಾರ್ಟ್​ಮೆಂಟ್​ನ 9 ಬ್ಲಾಕ್​ಗಳನ್ನು ಕಂಟೇನ್​ಮೆಂಟ್​ ಜೋನ್​ಗಳೆಂದು ಘೋಷಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ. ಬೆಳ್ಳಂದೂರಿನ ಈ ಅಪಾರ್ಟ್​ಮೆಂಟ್​ನಲ್ಲಿ ಒಟ್ಟು 1,500 ಜನರು ವಾಸವಾಗಿದ್ದು, ಈಗಾಗಲೇ 500 ಜನರನ್ನು ಪರೀಕ್ಷೆ ಮಾಡಲಾಗಿದೆ. ಪ್ರಸ್ತುತ ಸೋಂಕು ದೃಢಪಟ್ಟಿರುವ 10 ಮಂದಿಯಲ್ಲಿ ಐವರು 60 ವರ್ಷ ಮೇಲ್ಪಟ್ಟವರಾಗಿದ್ದಾರೆ. ಸೋಂಕಿತರೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದರವನ್ನು ಹೋಮ್ ಐಸೋಲೇಷನ್ ಮಾಡಲಾಗಿದೆ. ಕೇರಳಕ್ಕೆ ಪ್ರವಾಸ ಹೋಗಿ ಬಂದ ವ್ಯಕ್ತಿಯೊಬ್ಬರಿಂದ ಅಪಾರ್ಟ್​ಮೆಂಟ್​ನಲ್ಲಿ ಸೋಂಕು ಹರಡಿದೆ ಎನ್ನಲಾಗಿದೆ.

ಇದನ್ನೂ ಓದಿ: Chikkaballapur Blast: ಚಿಕ್ಕಬಳ್ಳಾಪುರದ ಜಿಲೆಟಿನ್ ಸ್ಫೋಟ ದುರಂತಕ್ಕೆ ಸಚಿವ ಸುಧಾಕರ್ ನೇರ ಹೊಣೆ; ಕಾಂಗ್ರೆಸ್ ಆರೋಪ

ಕೆಲವು ದಿನಗಳ ಹಿಂದಷ್ಟೇ ಬೊಮ್ಮನಹಳ್ಳಿಯ ಬಿಳೇಕಹಳ್ಳಿ ಬಳಿ ಇರುವ ಎಸ್​ಎನ್​ಎನ್​ ರಾಜ್ ಲೇಕ್ ವ್ಯೂ ಅಪಾರ್ಟ್​ಮೆಂಟ್​ನಲ್ಲಿ 113 ಜನರಿಗೆ ಕೊರೋನಾ ಸೋಂಕು ಹರಡಿದ್ದರಿಂದ ಅದನ್ನು ಸೀಲ್​ಡೌನ್ ಮಾಡಲಾಗಿತ್ತು. ಅದಾದ ಬಳಿಕ ಕಂಟೇನ್​ಮೆಂಟ್ ಜೋನ್ ಎಂದು ಘೋಷಣೆಯಾಗಿ, ಸೀಲ್​ಡೌನ್ ಆಗುತ್ತಿರುವ ಬೆಂಗಳೂರಿನ ಎರಡನೇ ಅಪಾರ್ಟ್​ಮೆಂಟ್ ಇದಾಗಿದೆ.
ಕೇರಳ ಮತ್ತು ಮಹಾರಾಷ್ಟ್ರದ ಬಳಿಕ ಅತ್ಯಧಿಕ ಕೊರೋನಾ ಕೇಸ್​ಗಳಿರುವ ಮೂರನೇ ರಾಜ್ಯ ಕರ್ನಾಟಕವಾಗಿದೆ. ಹೀಗಾಗಿ, ರಾಜ್ಯದಲ್ಲಿ ಹೆಚ್ಚಿನ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗಿದೆ. ಸದ್ಯಕ್ಕೆ ರಾಜ್ಯದಲ್ಲಿ ಲಾಕ್​ಡೌನ್ ಇಲ್ಲ ಎಂದು ಈಗಾಗಲೇ ಹೇಳಲಾಗಿದ್ದು, ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೊರೋನಾ ಕೇಸ್​ಗಳು ಮತ್ತೊಮ್ಮೆ ಆತಂಕ ಸೃಷ್ಟಿಸಿವೆ.
Published by: Sushma Chakre
First published: February 23, 2021, 2:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories