ಕೊರೋನಾ ತಂದ ಸಂಕಷ್ಟ; ಬೀದಿಗೆ ಬಿದ್ದ ಕ್ಯಾಬ್ ಚಾಲಕರ ಬದುಕು, ಕಾರಿನಲ್ಲಿ ಮಾಸ್ಕ್, ತರಕಾರಿ ಮಾರಾಟ

ರಾಜ್ಯಕ್ಕೆ ಕೊರೋನಾ ಲಗ್ಗೆ ಇಟ್ಟ ಬಳಿಕ ಕ್ಯಾಬ್ ಓಡಿಸುವುದೇ ಕಷ್ಟವಾಗಿದೆಯಂತೆ. ಲಾಕ್ ಡೌನ್ ವೇಳೆ ಕೆಲಸವಿರಲಿಲ್ಲ. ಲಾಕ್ ಡೌನ್ ಬಳಿಕ ಬರುವ ಎಲ್ಲ ಕಸ್ಟಮರ್ ಗಳು ಅಸ್ಪತ್ರೆಗೆ ಹೋಗುವಂತಹವರು. ಆದರೆ ಕೊರೋನಾ ಭೀತಿಯಿಂದ ಅಸ್ಪತ್ರೆ ಕಡೆ ಕಾರು ಚಲಾಯಿಸಲು ಭಯವಾಗಿ ಕ್ಯಾಬ್ ಚಾಲನೆಯನ್ನೇ ಬಿಟ್ಟು ಈಗ ಹೊಸ ವ್ಯಾಪಾರಕ್ಕೆ ಕೈ ಹಾಕಿದ್ದಾರಂತೆ.

ಕಾರಿನಲ್ಲಿ ಮಾಸ್ಕ್, ಫೇಸ್ ಶೀಲ್ಡ್ ಮಾರಾಟ.

ಕಾರಿನಲ್ಲಿ ಮಾಸ್ಕ್, ಫೇಸ್ ಶೀಲ್ಡ್ ಮಾರಾಟ.

  • Share this:
ಬೆಂಗಳೂರು; ಮಹಾಮಾರಿ ಕೊರೋನಾ ಜನರ ಆರೋಗ್ಯದ ಮೇಲಷ್ಟೆ ಅಲ್ಲದೆ ಅವರ ಬದುಕಿನ ಮೇಲು ದೊಡ್ಡ ಬರೆ ಎಳೆದಿದೆ. ಪ್ರಮುಖವಾಗಿ ಬಡವರು ಮತ್ತು ಮಧ್ಯಮ ವರ್ಗದ ಜನರ ಬೆನ್ನು ಮೂಳೆ ಮುರಿದ ಕೊರೋನಾ ದಿನಕ್ಕೆ ಐನೂರು, ಸಾವಿರ ದುಡಿಯುತ್ತಿದ್ದವರಿಗೆ ಈಗ ಜೀವನ ನಿರ್ವಹಣೆಯೇ ಹೊರೆ ಎನ್ನುವಂತೆ ಮಾಡಿದೆ‌. ಅದರಲ್ಲೂ ಕ್ಯಾಬ್ ಚಾಲಕರ ಕಷ್ಟ ದೇವರಿಗೆ ಪ್ರೀತಿ ಎನ್ನುವಂತಾಗಿದೆ.

ನಗರದಲ್ಲಿ ಕ್ಯಾಬ್ ಓಡಿಸಿಕೊಂಡು ಜೀವನ ನಡೆಸುತ್ತಿದ್ದ ಚಾಲಕರು ಈಗ ವೃತ್ತಿಯನ್ನೇ ಬಿಡುವ ಸ್ಥಿತಿಗೆ ತಲುಪಿದ್ದಾರೆ. ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಲವು ಕಂಪನಿಗಳು ಕೊರೋನಾ ಎಫೆಕ್ಟ್ ನಿಂದ ಬಾಗಿಲು ಹಾಕಿವೆ. ಎಷ್ಟೋ ಮಂದಿ ಬೆಂಗಳೂರು ತೊರೆದು ತಮ್ಮ ಊರುಗಳಿಗೆ ಹೊರಟು ಹೋಗಿದ್ದಾರೆ. ಬೆಂಗಳೂರನ್ನೇ ನಂಬಿಕೊಂಡು ಸಾಲಸೋಲ ಮಾಡಿ ಕ್ಯಾಬ್ ಖರೀದಿಸಿದ್ದ ಚಾಲಕರು ಈಗ ಕಾರು ಓಡಿಸಲಾಗದೇ ಹೊಸ ವ್ಯಾಪಾರದತ್ತ ಮುಖ ಮಾಡಿದ್ದಾರೆ. ತಮಗೆ ಜೀವನದ ಆಧಾರವಾದ ಕಾರಿನಲ್ಲಿ ಮಾಸ್ಕ್, ಫೇಸ್ ಶೀಲ್ಡ್, ಸ್ಯಾನಿಟೈಸರ್ ಮತ್ತು ತರಕಾರಿ ಇಟ್ಟುಕೊಂಡು ರಸ್ತೆ ಬದಿ ವ್ಯಾಪಾರ ಮಾಡಲು ಮುಂದಾಗಿದ್ದಾರೆ.

ಮೊದಲು ಓಲಾ, ಉಬರ್, ಖಾಸಗಿ ಕಂಪನಿಗಳಿಗೆ ಕ್ಯಾಬ್ ಅಟ್ಯಾಚ್ ಮಾಡಿಸಿ ಪ್ರತಿ ತಿಂಗಳು 40-50 ಸಾವಿರ ದುಡಿಯುತ್ತಿದ್ದರು. ಬಂದ ಹಣದಲ್ಲಿ ಕಾರಿನ ಲೋನ್, ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ, ಮನೆ ಖರ್ಚು ವೆಚ್ಚಗಳನ್ನು ಸರಿದೂಗಿಸಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ಓಲಾ, ಉಬರ್ ಸೇರಿ ಎಲ್ಲೂ ಬಾಡಿಗೆ ಸಿಗದೇ ಜೀವನ ನಿರ್ವಹಣೆಗಾಗಿ ಮಾಸ್ಕ್, ಪೇಸ್ ಶೀಲ್ಡ್ ಮತ್ತು ಸ್ಯಾನಿಟೈಸರ್ ಮಾರಾಟ ಮಾಡಲು ಮುಂದಾಗಿದ್ದಾರೆ.

ಇದನ್ನು ಓದಿ: ಕೊರೋನಾ ಬಂದರೆ ಹೆದರುವ ಅಗತ್ಯವಿಲ್ಲ; ಕೊಡಗಿನಲ್ಲಿ ಗುಣಮುಖರಾದ ವ್ಯಕ್ತಿಯ ಆತ್ಮಸ್ಥೈರ್ಯದ ನುಡಿ

ದಿನಕ್ಕೆ ಹತ್ತಿಪ್ಪತ್ತು ಮಾಸ್ಕ್, ಫೇಸ್ ಶೀಲ್ಡ್ ಮಾರಾಟ ಮಾಡಿ ಬಂದ ಹಣದಲ್ಲಿ ಸಂಸಾರದ ಬಂಡಿ ಎಳೆಯಬೇಕಾಗಿದೆ ಎಂದು ನೋವಿನಲ್ಲಿ ಹೇಳುತ್ತಾರೆ ಕ್ಯಾಬ್ ಚಾಲಕ ಬಸವ. ರಾಜ್ಯಕ್ಕೆ ಕೊರೋನಾ ಲಗ್ಗೆ ಇಟ್ಟ ಬಳಿಕ ಕ್ಯಾಬ್ ಓಡಿಸುವುದೇ ಕಷ್ಟವಾಗಿದೆಯಂತೆ. ಲಾಕ್ ಡೌನ್ ವೇಳೆ ಕೆಲಸವಿರಲಿಲ್ಲ. ಲಾಕ್ ಡೌನ್ ಬಳಿಕ ಬರುವ ಎಲ್ಲ ಕಸ್ಟಮರ್ ಗಳು ಅಸ್ಪತ್ರೆಗೆ ಹೋಗುವಂತಹವರು. ಆದರೆ ಕೊರೋನಾ ಭೀತಿಯಿಂದ ಅಸ್ಪತ್ರೆ ಕಡೆ ಕಾರು ಚಲಾಯಿಸಲು ಭಯವಾಗಿ ಕ್ಯಾಬ್ ಚಾಲನೆಯನ್ನೇ ಬಿಟ್ಟು ಈಗ ಹೊಸ ವ್ಯಾಪಾರಕ್ಕೆ ಕೈ ಹಾಕಿದ್ದಾರಂತೆ. ಶಿವಮೊಗ್ಗ ಮೂಲದ ಚಾಲಕ ಬಸವ ಮಾಸ್ಕ್, ಸ್ಯಾನಿಟೈಸರ್ ಮತ್ತು ಫೇಸ್ ಶೀಲ್ಡ್ ಮಾರಾಟ ಮಾಡಿ ದಿನಕ್ಕೆ 300 ರೂಪಾಯಿ ದುಡಿಯುತ್ತಿದ್ದು ಬಂದ ಹಣದಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳನ್ನ ಪೋಷಿಸಬೇಕಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
Published by:HR Ramesh
First published: