HOME » NEWS » Coronavirus-latest-news » BENGALURU BBMP BUDGET 2020 BANGALORE BBMP PRESENTED BUDGET FY 2020 21 THROUGH VIDEO CONFERENCE TODAY IN BENGALURU MAK

BBMP Budget 2020-21: ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಬಿಎಂಪಿ ಬಜೆಟ್; ಸಂಪನ್ಮೂಲ ಸುಧಾರಣೆಗೆ ಕ್ರಮ, ವೈದ್ಯಕೀಯ-ಶಿಕ್ಷಣ ಕ್ಷೇತ್ರಕ್ಕೆ ಒತ್ತು

Bruhat Bengaluru Mahanagara Palike Budget 2020: ಬರೋಬ್ಬರಿ 10,899.23 ಕೋಟಿ ಮೊತ್ತದ ಬೃಹತ್ ಬಜೆಟ್ ಮಂಡಿಸಲಾಗಿದ್ದು, ಬಜೆಟ್‌ನಲ್ಲಿ ವೈದ್ಯಕೀಯ ಮತ್ತು ಶಿಕ್ಷಣ ವಿಭಾಗದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಅಲ್ಲದೆ, ಬಜೆಟ್‌ಗೆ ಅಗತ್ಯವಾದ ಹಣದ ಕ್ರೂಢೀಕರಣ ಮತ್ತು ಸಂಪನ್ಮೂಲ ಸುಧಾರಣೆಗೂ ಈ ಬಜೆಟ್‌ನಲ್ಲಿ ಸೂಕ್ತ ಕ್ರಮವನ್ನು ರೂಪಿಸಲಾಗಿದೆ.

MAshok Kumar | news18-kannada
Updated:April 20, 2020, 2:06 PM IST
BBMP Budget 2020-21: ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಬಿಎಂಪಿ ಬಜೆಟ್; ಸಂಪನ್ಮೂಲ ಸುಧಾರಣೆಗೆ ಕ್ರಮ, ವೈದ್ಯಕೀಯ-ಶಿಕ್ಷಣ ಕ್ಷೇತ್ರಕ್ಕೆ ಒತ್ತು
ಬೆಂಗಳೂರು ಮಹಾನಗರ ಪಾಲಿಕೆ.
  • Share this:
ಬೆಂಗಳೂರು (ಏಪ್ರಿಲ್ 20); ಬೆಂಗಳೂರು ಮಹಾನಾಗರ ಪಾಲಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಈ ವರ್ಷ ವಿಡಿಯೋ ಕಾನ್ಪರೆನ್ಸ್ ಮೂಲಕ ಇಂದು ಪಾಲಿಕೆ ಬಜೆಟ್ ಮಂಡಿಸಲಾಗಿದೆ. ಕೊರೋನಾ ಭೀತಿ ಹಿನ್ನೆಲೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್ ಶ್ರೀನಿವಾಸ್ ಬಜೆಟ್ ಮಂಡಿಸಿದ್ದಾರೆ.

ಬರೋಬ್ಬರಿ 10,899.23 ಕೋಟಿ ಮೊತ್ತದ ಬೃಹತ್ ಬಜೆಟ್ ಮಂಡಿಸಲಾಗಿದ್ದು, ಬಜೆಟ್‌ನಲ್ಲಿ ವೈದ್ಯಕೀಯ ಮತ್ತು ಶಿಕ್ಷಣ ವಿಭಾಗದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಅಲ್ಲದೆ, ಬಜೆಟ್‌ಗೆ ಅಗತ್ಯವಾದ ಹಣದ ಕ್ರೂಢೀಕರಣ ಮತ್ತು ಸಂಪನ್ಮೂಲ ಸುಧಾರಣೆಗೂ ಈ ಬಜೆಟ್‌ನಲ್ಲಿ ಸೂಕ್ತ ಕ್ರಮವನ್ನು ರೂಪಿಸಲಾಗಿದೆ. ಈ ಬಜೆಟ್ ಕೇಂದ್ರ ಸರ್ಕಾರದ ಅನುದಾನ 558 ಕೋಟಿ ರೂ ಹಾಗೂ ರಾಜ್ಯ ಸರ್ಕಾರದ ಅನುದಾನ 3,780 ಕೋಟಿ ರೂ ಒಳಗೊಂಡಿರುತ್ತದೆ.

ಬಜೆಟ್‌ನಲ್ಲಿ ಸಂಪನ್ಮೂಲ ಸುಧಾರಣೆಗೆ ಕ್ರಮ:

ಪಾಲಿಕೆ ತೆರಿಗೆ ರೂಪದ ಆದಾಯವನ್ನು ಹೆಚ್ಚಿಸಲು ಮುಂದಾಗಿರುವ ಎಲ್ ಶ್ರೀನಿವಾಸ್ ಬಿ ಖಾತ ಆಸ್ತಿಗಳನ್ನು ಎ ಖಾತ ಮಾಡುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಇದಲ್ಲದೆ, ಆಡಳಿತಾತ್ಮಕ ವಿಭಾಗದಲ್ಲೂ ಸುಧಾರಣೆಗೆ ಮುಂದಾಗಿರುವ ಪಾಲಿಕೆ ಹೊಸ ಆಸ್ತಿಗಳನ್ನ ಖಾತ ನಖಲು ಮತ್ತು ಖಾತ ದೃಢೀಕರಣವನ್ನು ಸಂಪೂರ್ಣ ಗಣಕೀಕರಣಕ್ಕೆ ಒತ್ತು ನೀಡಲಾಗಿದೆ. ಖಾತ ನಕಲು ಮತ್ತು ಖಾತ ಧೃಡೀಕರಣ ಪತ್ರದ ಶುಲ್ಕ ದ್ವಿಗುಣಗೊಳಿಸಲಾಗಿದೆ. 3 ವರ್ಷಕ್ಕೂ ಅಧಿಕ ತೆರಿಗೆ ಬಾಕಿ ಉಳಿಸಿಕೊಂಡರೆ ಕಚೇರಿಯ ಋಣಭಾರ ಪತ್ರದಲ್ಲಿ ನಮೂದು ಮಾಡಬೇಕು” ಎಂಬಂತ ನಿರ್ಧಾರಗಳನ್ನು ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ.

ಇದರ ಜೊತೆ ಜೊತೆಗೆ ಬಾಕಿ ಇರುವ ಸುಧಾರಣ ಶುಲ್ಕ ಅಂದಾಜು 300 ಕೋಟಿ ವಸೂಲಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಉದ್ದಿಮೆ ಪರವಾನಗಿ ಸರಳೀಕರಣ ಮಾಡುವುದರ ಜೊತೆಗೆ ನಗರದಲ್ಲಿರುವ ಹೋಟೆಲ್‌ಗಳನ್ನು ಎ.ಬಿ.ಸಿ.ಡಿ ಮಾದರಿಯಲ್ಲಿ ವರ್ಗೀಕರಣಗೊಳಿಸಲಾಗುವುದು ಎಂದು ಸಹ ಬಜೆಟ್‌ನಲ್ಲಿ ತಿಳಿಸಲಾಗಿದೆ.

ವೈದ್ಯಕೀಯ-ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು:ಕೊರೋನಾ ವೈರಸ್‌ ಹಾವಳಿ ಬೆಂಗಳೂರಿನಲ್ಲಿ ಮಿತಿ ಮೀರುತ್ತಿರುವ ಹಿನ್ನೆಲೆಯಲ್ಲಿ ಈ ಸೋಂಕು ಹರಡುವುದನ್ನು ನಿಯಂತ್ರಿಸುವ ಸಲುವಾಗಿ 49.50 ಕೋಟಿ ರೂ ಮೀಸಲಿಡಲಾಗಿದೆ. ಅಲ್ಲದೆ, ಜನನ ಮತ್ತು ಮರಣ ಪ್ರಮಾಣದ ಪತ್ರಗಳನ್ನ ಉಚಿತವಾಗಿ ನೀಡಲು ಕ್ರಮ ತೆಗೆದುಕೊಳ್ಳಲಾಗಿದ್ದು, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಹೆಸರಲ್ಲಿ 20 ಕೋಟಿ ವೆಚ್ಚದಲ್ಲಿ ಮಕ್ಕಳ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣಕ್ಕೂ ರೂಪುರೇಷೆ ಸಿದ್ದಪಡಿಸಲಾಗಿದೆ.

ಇದಲ್ಲದೆ, ಉಚಿತವಾಗಿ ಡಯಾಲಿಸಿಸ್ ಸೇವೆ ನಿರ್ವಹಣೆಗೆ 16 ಕೋಟಿ, ಲಿಂಕ್ ವರ್ಕರ್ಸ್‌ಗಳಿಗೆ ಪ್ರತಿ ತಿಂಗಳು ಸಾವಿರ ರೂ ಸಂಭಾವನೆ ಹೆಚ್ಚಳ. ಹೊಸ ವಲಯಗಳಲ್ಲಿ ನಾಯಿ ಕೆನಲ್ ಸ್ಥಾಪನೆಗೆ 5 ಕೋಟಿ ಹಣವನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ.

ಬಜೆಟ್‌ನಲ್ಲಿ ಶಿಕ್ಷಣ ವಿಭಾಗಕ್ಕೂ ಸಾಕಷ್ಟು ಒತ್ತು ನೀಡಲಾಗಿದೆ. ಪಾಲಿಕೆಯ ಶಾಲಾ ಕಾಲೇಜುಗಳಲ್ಲಿ ಸ್ಮಾರ್ಟ್ ಶಿಕ್ಷಣ ಆರಂಭಕ್ಕೆ 7 ಕೋಟಿ, ಜ್ಞಾನ ದೀಪ ಕಾರ್ಯಕ್ರಮಕ್ಕೆ  7.5 ಕೋಟಿ, ನಾಡ ಪ್ರಭು ಕೆಂಪೇಗೌಡ ಹೆಸರಲ್ಲಿ ಶಾಲೆಗಳ ನಿರ್ಮಾಣಕ್ಕೆ 10 ಕೋಟಿ, ವಿದ್ಯಾರ್ಥಿಗಳ ಬಿಎಂಟಿಸಿ ಬಸ್ ಪಾಸ್ ಗಾಗಿ 75 ಲಕ್ಷ, ಸಿ.ಸಿ ಕ್ಯಾಮೆರಾ ಅಳವಡಿಕೆಗೆ 5 ಕೋಟಿ, ಶಾಲಾ ಕಾಲೇಜುಗಳಲ್ಲಿ ಕುಡಿಯುವ ನೀರಿಗೆ 2 ಕೋಟಿ, ಮಳೆ ನೀರು ಕೊಯ್ಲು ಪದ್ದತಿಗೆ 2 ಕೋಟಿ, ಶಾಲಾ ಕಾಲೇಜು ಶಿಕ್ಷಕರ ಸಮವಸ್ತ್ರ ಕ್ಕೆ  30 ಲಕ್ಷ ಹಾಗೂ ಅಂತರ್ ಶಾಲಾ ಕಾಲೇಜುಗಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 50 ಲಕ್ಷ ರೂ ಗಳನ್ನು ಮೀಸಲಿಡಲಾಗಿದೆ.

ಇದನ್ನೂ ಓದಿ : Padarayanapura Riot: ಪಾದರಾಯನಪುರಕ್ಕೆ ವೈದ್ಯ ಸಿಬ್ಬಂದಿಗಳು ರಾತ್ರಿ ವೇಳೆ ಹೋಗಬಾರದಿತ್ತು; ಜಮೀರ್ ಅಹಮದ್ ಅಸಮಾಧಾನ
First published: April 20, 2020, 1:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories