ಕೊರೋನಾ ನಿಯಂತ್ರಣ ಸಂಬಂಧ ನಾಳೆ ಸಿಎಂ ಕರೆದಿದ್ದ ಬೆಂಗಳೂರು ಸರ್ವಪಕ್ಷಗಳ ಶಾಸಕರ, ಸಂಸದರ, ಕಾರ್ಪೊರೇಟರ್​ಗಳ ಸಭೆ ರದ್ದು

ವಲಯಗಳ ಉಸ್ತುವಾರಿಯನ್ನು ಸಚಿವರಿಗೆ ನೀಡಿದ್ದರ ಹಿನ್ನೆಲೆಯಲ್ಲಿ ನಾಳೆ ಕರೆಯಲಾಗಿದ್ದ ಬೆಂಗಳೂರು ಸರ್ವಪಕ್ಷಗಳ ಜನಪ್ರತಿನಿಧಿಗಳ ಸಭೆಯನ್ನು ರದ್ದು ಮಾಡಲಾಗಿದೆ. ವಲಯಗಳ ಸಚಿವರ ಮಾಹಿತಿಯನ್ನು ಆಧರಿಸಿ ಮತ್ತೇ ಸರ್ವಪಕ್ಷಗಳ ಜನಪ್ರತಿನಿಧಿಗಳ ಸಭೆಯನ್ನು ಕರೆದು ಅಲ್ಲಿ ಚರ್ಚಿಸಿ ಮುಂದಿನ ತೀರ್ಮಾನವನ್ನು ಸರ್ಕಾರ ಕೈಗೊಳ್ಳಲಿದೆ.

news18-kannada
Updated:July 13, 2020, 10:13 AM IST
ಕೊರೋನಾ ನಿಯಂತ್ರಣ ಸಂಬಂಧ ನಾಳೆ ಸಿಎಂ ಕರೆದಿದ್ದ ಬೆಂಗಳೂರು ಸರ್ವಪಕ್ಷಗಳ ಶಾಸಕರ, ಸಂಸದರ, ಕಾರ್ಪೊರೇಟರ್​ಗಳ ಸಭೆ ರದ್ದು
ಸಿಎಂ ಬಿ.ಎಸ್‌. ಯಡಿಯೂರಪ್ಪ.
  • Share this:
ಬೆಂಗಳೂರು; ರಾಜಧಾನಿ ಬೆಂಗಳೂರಲ್ಲಿ ಕೊರೋನಾ ವೈರಸ್​ ಕೈ‌ ಮೀರುತ್ತಿದೆ ಎಂಬ ಮಾಹಿತಿ ಅರಿತ ಸರ್ಕಾರ ಎಚ್ಚೆತ್ತುಕೊಂಡಿದೆ. ಹೇಗಾದರೂ ಮಾಡಿ ಬೆಂಗಳೂರಲ್ಲಿ ಕೊರೋನಾ ನಿಯಂತ್ರಿಸಲೇಬೇಕೆಂದು ಸರ್ಕಾರ ಹರಸಾಹಸ ಮಾಡುತ್ತಿದೆ. ಆ ನಿಟ್ಟಿನಲ್ಲಿ ಇವತ್ತಿನ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದೆ. ಜೊತೆಗೆ ಮಹತ್ವದ ತೀರ್ಮಾನವನ್ನು ಕ್ಯಾಬಿನೆಟ್ ಮಾಡಿದೆ. ಸದ್ಯಕ್ಕೆ ಯಾವುದೇ ಲಾಕ್​ಡೌನ್ ಬಗ್ಗೆ ಚರ್ಚೆ ಬೇಡ. ಬೆಂಗಳೂರಿನಲ್ಲಿ ಎಂಟು‌ ವಲಯಗಳಿದ್ದು, ಒಂದೊಂದು ವಲಯದ ಉಸ್ತುವಾರಿಯನ್ನು ಒಬ್ಬೊಬ್ಬ ಸಚಿವರಿಗೆ ನೀಡೋಣ ಎಂಬ ಮಾತನ್ನು ಕ್ಯಾಬಿನೆಟ್​ನಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಇದಕ್ಕೆ ಸಚಿವರು ಕೂಡ ಒಪ್ಪಿದ್ದಾರೆ ಎಂದು ಹೇಳಲಾಗಿದೆ.

ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ ,ಬೆಂಗಳೂರು ದಕ್ಷಿಣ, ಬೆಂಗಳೂರು ಮಹದೇವಪುರ ವಲಯ, ಬೊಮ್ಮನಹಳ್ಳಿ, ದಾಸರಹಳ್ಳಿ ಹಾಗೂ ಆರ್ ಆರ್ ನಗರ ವಲಯ ಹಾಗೂ ಯಲಹಂಕ ವಲಯ ಹೀಗೆ  ಎಂಟು ವಲಯಗಳನ್ನಾಗಿ ವಿಂಗಡಿಸಲಾಗಿದೆ.

ಈ ಎಂಟು ವಲಯಗಳ  ಉಸ್ತುವಾರಿಯನ್ನು ಒಬ್ಬೊಬ್ಬ ಸಚಿವರಿಗೆ ನೀಡುವುದು. ಆ ಸಚಿವರು ಆಯಾ ವಲಯದಲ್ಲಿನ ಕೊರೋನಾ ಸ್ಥಿತಿಗತಿಯ ಮಾಹಿತಿ ಕಲೆ ಹಾಕುವುದು. ಕೊರೋನಾ ಸೋಂಕಿತರು, ಕ್ವಾರಂಟೈನ್ ನಲ್ಲಿರುವವರ ಸಂಖ್ಯೆ, ಕೋವಿಡ್ ಕೇಂದ್ರಗಳು, ಬೆಡ್ ಲಭ್ಯತೆ, ಇತರೆ ಮೂಲಭೂತ ಸೌಕರ್ಯಗಳ ಅಗತ್ಯತೆ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡುವುದು. ಆ ಮಾಹಿತಿ ಆಧರಿಸಿ ಮುಖ್ಯಮಂತ್ರಿಗಳು ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

ವಲಯಗಳ ಉಸ್ತುವಾರಿಯನ್ನು ಸಚಿವರಿಗೆ ನೀಡಿದ್ದರ ಹಿನ್ನೆಲೆಯಲ್ಲಿ ನಾಳೆ ಕರೆಯಲಾಗಿದ್ದ ಬೆಂಗಳೂರು ಸರ್ವಪಕ್ಷಗಳ ಜನಪ್ರತಿನಿಧಿಗಳ ಸಭೆಯನ್ನು ರದ್ದು ಮಾಡಲಾಗಿದೆ. ವಲಯಗಳ ಸಚಿವರ ಮಾಹಿತಿಯನ್ನು ಆಧರಿಸಿ ಮತ್ತೇ ಸರ್ವಪಕ್ಷಗಳ ಜನಪ್ರತಿನಿಧಿಗಳ ಸಭೆಯನ್ನು ಕರೆದು ಅಲ್ಲಿ ಚರ್ಚಿಸಿ ಮುಂದಿನ ತೀರ್ಮಾನವನ್ನು ಸರ್ಕಾರ ಕೈಗೊಳ್ಳಲಿದೆ.

ಯಾವ ವಲಯದ ಉಸ್ತುವಾರಿಯನ್ನು ಯಾರಿಗೆ ನೀಡಬಹುದು ಎಂಬ ಚರ್ಚೆ ಕೂಡ ಆಗಿದೆ. ಸರ್ಕಾರದ ಮೂಲಗಳ ಪ್ರಕಾರ ಉಸ್ತುವಾರಿಗಳು ಹಾಗೂ ವಲಯ ಮತ್ತು ಆ ವಲಯದಲ್ಲಿ ಎಷ್ಟೆಷ್ಟು ವಾರ್ಡ್ ಗಳು ಬರುತ್ತವೆ ಅನ್ನೋದರ ಮಾಹಿತಿ ಇಲ್ಲಿದೆ.

ಇದನ್ನು ಓದಿ: ಕೊರೋನಾ ಕಾರ್ಯಪಡೆ ಸಮಿತಿಗೆ ಕಾಂಗ್ರೆಸ್ ನಾಯಕರನ್ನು ಸೇರಿಸಿಕೊಳ್ಳಿ; ಸರ್ಕಾರಕ್ಕೆ ಎಚ್.ಡಿ.ಕುಮಾರಸ್ವಾಮಿ ಸಲಹೆ
ಬೆಂಗಳೂರಿನಲ್ಲಿ‌ 8 ವಲಯಗಳು ಹಾಗೂ ಉಸ್ತುವಾರಿಗಳು

  • ಬಿಬಿಎಂಪಿ ಪೂರ್ವ ವಲಯ - 44 ವಾರ್ಡ್ -ಸಿ.ಅಶ್ವಥ್ ನಾರಾಯಣ್

  • ಬಿಬಿಎಂಪಿ ಪಶ್ಚಿಮ ವಲಯ- 44 ವಾರ್ಡ್ - ಸೋಮಣ್ಣ

  • ಬಿಬಿಎಂಪಿ ದಕ್ಷಿಣ ವಲಯ - 44 ವಾರ್ಡ್ - ಆರ್. ಅಶೋಕ್

  • ಬಿಬಿಎಂಪಿ ಮಹಾದೇವಪುರ ವಲಯ - 17 ವಾರ್ಡ್- ಬೈರತಿ ಬಸವರಾಜು

  • ಬಿಬಿಎಂಪಿ ಯಲಹಂಕ- 11 ವಾರ್ಡ್- ಎಸ್.ಆರ್.ವಿಶ್ವನಾಥ್

  • ಬಿಬಿಎಂಪಿ ಆರ್ ಆರ್ ನಗರ ವಲಯ- 14 ವಾರ್ಡ್- ಎಸ್.ಟಿ.ಸೋಮಶೇಖರ್

  • ಬಿಬಿಎಂಪಿ ದಾಸರಹಳ್ಳಿ ವಲಯ- 08 ವಾರ್ಡ್ - ಗೋಪಾಲಯ್ಯ

  • ಬಿಬಿಎಂಪಿ ಬೊಮ್ಮನಹಳ್ಳಿ ವಲಯ- 16 ವಾರ್ಡ್ - ಎಸ್. ಸುರೇಶ್ ಕುಮಾರ್

Published by: HR Ramesh
First published: July 9, 2020, 8:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading