HOME » NEWS » Coronavirus-latest-news » BENGALURU ADMINISTRATION IN DILEMMA WITH REVERSE MIGRATION OF WORKERS SNVS

ಲಕ್ಷಗಟ್ಟಲೆ ಕಾರ್ಮಿಕರು ವಾಪಸ್ ಹೋಗಿಬಿಟ್ಟರೆ ಬೆಂಗಳೂರು ಕಥೆ ಏನು? ಸರ್ಕಾರಕ್ಕೀಗ ಹೊಸ ಚಿಂತೆ

ಒಂದು ಅಂದಾಜು ಪ್ರಕಾರ 3 ಲಕ್ಷ ಕಾರ್ಮಿಕರು ಬೆಂಗಳೂರಿನಲ್ಲಿ ನಿರ್ಮಾಣ ಕಾಮಕಾರಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅನೇಕ ರಿಯಲ್ ಎಸ್ಟೇಟ್ ಪ್ರಾಜೆಕ್ಟ್​ಗಳು ಸೇರಿದಂತೆ ವಿವಿಧ ಕೆಲಸಗಳಲ್ಲಿ ಇವರು ತೊಡಗಿದ್ಧಾರೆ.

news18-kannada
Updated:May 4, 2020, 2:50 PM IST
ಲಕ್ಷಗಟ್ಟಲೆ ಕಾರ್ಮಿಕರು ವಾಪಸ್ ಹೋಗಿಬಿಟ್ಟರೆ ಬೆಂಗಳೂರು ಕಥೆ ಏನು? ಸರ್ಕಾರಕ್ಕೀಗ ಹೊಸ ಚಿಂತೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಮೇ 04): ಒಂದು ಕಾಲದಲ್ಲಿ ಬೆಂಗಳೂರಿನ ನಿರ್ಮಾಣ ಕಾರ್ಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಕಾರ್ಮಿಕರಲ್ಲಿ ತಮಿಳಿಗರೇ ಹೆಚ್ಚಿದ್ದರು. ಈಗ ಪರಿಸ್ಥಿತಿ ಹಾಗಿಲ್ಲ. ಕರ್ನಾಟಕದ ಇತರ ಭಾಗವಷ್ಟೇ ಅಲ್ಲ ದೇಶದ ವಿವಿಧ ಭಾಗಗಳಿಂದಲೂ ಕಾರ್ಮಿಕರು ಕಾರ್ಯನಿರತರಾಗಿದ್ದಾರೆ. ಕೊರೋನಾ ವೈರಸ್ ಲಾಕ್ ಡೌನ್​ನಿಂದಾಗಿ ಕಾರ್ಮಿಕರೆಲ್ಲರೂ ಹತಾಶೆಗೊಂಡು ತಮ್ಮ ತಮ್ಮ ಊರುಗಳಿಗೆ ವಾಪಸ್ ಹೋಗುತ್ತಿದ್ದಾರೆ. ಇದೇ ಈಗ ಬೆಂಗಳೂರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಸಾಕಷ್ಟು ಅಭಿವೃದ್ಧಿ ಯೋಜನೆಗಳು ಚಾಲನೆಯಲ್ಲಿರುವ ಬೆಂಗಳೂರಿಗೆ ಈಗ ನುಂಗಲಾಗದ, ಉಗುಳಲಾಗದ ಪರಿಸ್ಥಿತಿ ಬಂದುಬಿಟ್ಟಿದೆ. ಒಂದು ಅಂದಾಜು ಪ್ರಕಾರ 3 ಲಕ್ಷ ಕಾರ್ಮಿಕರು ಬೆಂಗಳೂರಿನಲ್ಲಿ ನಿರ್ಮಾಣ ಕಾಮಕಾರಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅನೇಕ ರಿಯಲ್ ಎಸ್ಟೇಟ್ ಪ್ರಾಜೆಕ್ಟ್​ಗಳು ಸೇರಿದಂತೆ ವಿವಿಧ ಕೆಲಸಗಳಲ್ಲಿ ಇವರು ತೊಡಗಿದ್ಧಾರೆ. ನಮ್ಮ ಮೆಟ್ರೋ ಯೋಜನೆಯ ಕಾಮಗಾರಿಗಳಲ್ಲೇ 10 ಸಾವಿರದಷ್ಟು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

ಇವರಲ್ಲಿ ಬಹುತೇಕರು ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳದ ಕೂಲಿಕಾರ್ಮಿಕರೇ ಆಗಿದ್ದಾರೆ. ಲಾಕ್ ಡೌನ್ ಆದ ನಂತರ 45 ದಿನಗಳ ಕಾಲ ಇವರು ಭಯದಲ್ಲೇ ದಿನ ದೂಡುವಂತಾಗಿತ್ತು. ಇವರಿಗೆ ಕೆಲಸ ಕೊಟ್ಟ ಗುತ್ತಿಗೆದಾರರು ಇವರಿಗೆ ಸರಿಯಾದ ಯೋಗಕ್ಷೇಮದ ವ್ಯವಸ್ಥೆ ಮಾಡಬೇಕಿತ್ತು. ಆದರೆ, ಅದಾಗಲಿಲ್ಲ. ಹತಾಶಗೊಂಡಿರುವ ಈ ಕಾರ್ಮಿಕರು ತಮ್ಮತಮ್ಮ ಮನೆಗಳಿಗೆ ವಾಪಸ್ ಹೋಗಲು ತುದಿಗಾಲಲ್ಲಿದ್ದಾರೆ. ಬಹುತೇಕ ಮಂದಿ ವಾಪಸ್ ಹೋಗುವ ಸಾಧ್ಯತೆ ಇದೆ.

ಇದನ್ನೂ ಓದಿ: BS Yediyurappa: ವಲಸೆ ಕಾರ್ಮಿಕರಿಗೆ ಉಚಿತ ಬಸ್ ಸೌಲಭ್ಯ ಇನ್ನೂ 2 ದಿನ ವಿಸ್ತರಣೆ; ಬಿ.ಎಸ್.‌ ಯಡಿಯೂರಪ್ಪ

ಹಾಗೊಮ್ಮೆ ಇವರೆಲ್ಲರೂ ವಾಪಸ್ ಹೋಗಿಬಿಟ್ಟರೆ ಗತಿ ಏನು? ಇವರನ್ನು ವಾಪಸ್ ಬರುವಂತೆ ಮನವೊಲಿಸುವುದು ಕಷ್ಟವೇ. ಕೊರೋನಾ ವೈರಸ್ ಹರಡುವ ಭಯದಿಂದ ಇವರು ಬೆಂಗಳೂರಿಗೆ ಬರಲಾರರು. ಹಾಗಾದಲ್ಲಿ, ಮೆಟ್ರೋ ಕಾಮಗಾರಿ ತೀರಾ ಕುಂಟುತ್ತಾ ಆಮೆಗತಿಯಲ್ಲಿ ಸಾಗುವ ಸಾಧ್ಯತೆಯೇ ಹೆಚ್ಚು. ರಿಯಲ್ ಎಸ್ಟೇಟ್ ಉದ್ಯಮ ಚೇತರಿಸಿಕೊಳ್ಳಲು ಸಾಧ್ಯವಾಗದೇ ಹೋಗಬಹುದು. ಕರ್ನಾಟಕದ ಇತರ ಭಾಗಗಳಿಂದ ಕೂಲಿ ಕಾರ್ಮಿಕರನ್ನು ಕರೆತಂದು ಒಂದಷ್ಟು ನಿರ್ಮಾಣ ಪ್ರಾಜೆಕ್ಟ್​​ಗಳು ನಿಧಾನವಾಗಿ ನಡೆಯಬಹುದು.

ಇದು ಸರ್ಕಾರಕ್ಕೂ ಗೊತ್ತಿದೆ. ಆದರೆ ಏನೂ ಮಾಡಲಾಗದ ಹತಾಶ ಪರಿಸ್ಥಿತಿಯಲ್ಲಿದೆ. ಇಲ್ಲೇ ಉಳಿದುಕೊಳ್ಳುವ ಕಾರ್ಮಿಕರಿಗೆ ಎಲ್ಲಾ ಸೌಲಭ್ಯ ನೀಡುತ್ತೇವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಇದೂವರೆಗಿನ ಅನುಭವದ ಕಹಿಯಿಂದಾಗಿ ಕಾರ್ಮಿಕರು ಇಲ್ಲಿ ನಿಲ್ಲುವುದು ಅನುಮಾನ ಎನ್ನಲಾಗಿದೆ.

First published: May 4, 2020, 2:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories