ಬೆಂಗಳೂರು (ಜೂನ್ 1): ಇಲ್ಲಿ 108 ಆ್ಯಂಬುಲೆನ್ಸ್ ನೌಕರರ ಗೋಳು ಕೇಳೋರೇ ಇಲ್ಲ. ಕಳೆದರಡು ತಿಂಗಳಿನಿಂದ ಕೊರೋನಾ ಫ್ರಂಟ್ ಲೈನ್ ವಾರಿಯರ್ಸ್ಗೆ ಸಂಬಳವೇ ಸಿಕ್ಕಿಲ್ಲ. ಹಾಗಾದರೆ 108 ಸಿಬ್ಬಂದಿಗಳು ಬರೀ ಹೆಸರಿಗಷ್ಟೇನಾ ಫ್ರಂಟ್ ಲೈನ್ ವಾರಿಯರ್ಗಳಾ? ಈ ಬಗ್ಗೆ ಸರ್ಕಾರ ಏನು ಹೇಳುತ್ತಿದೆ?
ಕೊರೋನಾವನ್ನು ಹಿಮ್ಮೆಟ್ಟಿಸುವ ಹೋರಾಟದಲ್ಲಿ 108 ಆ್ಯಂಬುಲೆನ್ಸ್ ಸಿಬ್ಬಂದಿಗಳ ಕೊಡುಗೆ ಅಪಾರ. ಇದೇ ಕಾರಣಕ್ಕೆ ಇವರನ್ನು ಕೊರೋನಾ ಫ್ರಂಟ್ ಲೈನ್ ವಾರಿಯರ್ಸ್ ಎಂದು ಪರಿಗಣಿಸಲಾಗಿದೆ. ಇಂಥಾ ಫ್ರಂಟ್ ಲೈನ್ ವಾರಿಯರ್ಸ್ ಸಿಬ್ಬಂದಿಗಳ ಗೋಳು ಈಗ ಹೇಳಿತೀರದಾಗಿದೆ. ಕಳೆದ ಎರಡು ತಿಂಗಳಿನಿಂದ ಇವರಿಗೆ ಸಂಬಳ ಆಗಿಲ್ಲ. ಈ ಬಗ್ಗೆ 108 ಆ್ಯಂಬುಲೆನ್ಸ್ ಮೇಲ್ವಿಚಾರಣೆ ಹೊಂದಿರುವ ಜಿವಿಕೆ ಸಂಸ್ಥೆಯನ್ನು ಕೇಳಿದರೆ ಇದು ಸರ್ಕಾರದ ತಕರಾರು ಎನ್ನುತ್ತಿದೆ. ಆದರೆ, ಈ ಬಗ್ಗೆ ಆರೋಗ್ಯ ಇಲಾಖೆಯನ್ನು ಕೇಳಿದರೆ ಜಿವಿಕೆ ಸಂಸ್ಥೆಯ ಸಮಸ್ಯೆ ಎನ್ನುತ್ತಿದೆ.
ಜಿವಿಕೆ ಎಂಬುದು ಒಂದು ಸರ್ಕಾರಿಯೇತರ ಸಂಸ್ಥೆ. ದೇಶದ 16 ರಾಜ್ಯಗಳಲ್ಲಿ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸರ್ಕಾರದ ಜೊತೆ ಕೆಲಸ ಮಾಡುತ್ತಿದೆ. ಗುಣಪತಿ ವೆಂಕಟ ಕೃಷ್ಣ ರೆಡ್ಡಿ ಎಂಬ ಹೈದ್ರಾಬಾದ್ ಮೂಲದ ವ್ಯಕ್ತಿ ಈ ಸಂಸ್ಥೆಯ ಮುಖ್ಯಸ್ಥ. ನಾನ್ ಪ್ರಾಫಿಟ್ ಸಂಸ್ಥೆ ಇದು. ಸರ್ಕಾರದಿಂದ ಬಜೆಟ್ ಪಡೆದು 108 ಆ್ಯಂಬುಲೆನ್ಸ್ ಸೇವೆ ನಡೆಸುತ್ತಿದೆ. ಆದರೆ ಸಂಬಳ ವಿಳಂಬದ ಬಗ್ಗೆ ಸರ್ಕಾರದ ಮೇಲೆ ಆರೋಪ ಹೊರೆಸುತ್ತಿರುವ GVK, ಸರ್ಕಾರ ಹಣ ಬಿಡುಗಡೆ ಮಾಡುವುದು ವಿಳಂಬ ಆಗ್ತಿದೆ. ಹೀಗಾಗಿ ನೌಕರರಿಗೆ ಸೂಕ್ತ ಸಮಯಕ್ಕೆ ಸಂಬಳ ಕೊಡಲು ಸಾಧ್ಯವಾಗಿಲ್ಲ ಅಂತ ನ್ಯೂಸ್ 18 ಕನ್ನಡಕ್ಕೆ ಹೇಳಿದೆ.
ಇದನ್ನೂ ಓದಿ: Mehul Choksi | ಮೆಹುಲ್ ಚೋಕ್ಸಿಯನ್ನು ಆ್ಯಂಟಿಗುವಾದಿಂದ ಭಾರತಕ್ಕೆ ಕರೆತರಲು ಖರ್ಚಾಗುವ ಹಣವೆಷ್ಟು ಗೊತ್ತಾ?
ಮಾರ್ಚ್, ಏಪ್ರಿಲ್, ಮೇ ಹೀಗೆ ಮೂರು ತಿಂಗಳ ಸಂಬಳ ಬಾಕಿ ಉಳಿಸಲಾಗಿತ್ತು. ಒಂದು ವಾರಗಳ ಹಿಂದೆ ಮಾರ್ಚ್ ತಿಂಗಳ ಸಂಬಳ ಕ್ಲಿಯರ್ ಆಗಿದೆ. ಆದರೆ ಇನ್ನೂ ಬಾಕಿ ಏಪ್ರಿಲ್, ಮೇ ಈ ಎರಡು ತಿಂಗಳ ಸಂಬಳ ಬಾಕಿ ಇದೆ. ರಾಜ್ಯದಲ್ಲಿ ಒಟ್ಟು 711, 108 ವಾಹನಗಳಿವೆ. ಅಂದಾಜು 3 ಸಾವಿರ ನೌಕರರು ಇದ್ದಾರೆ. ಬೆಂಗಳೂರಿನಲ್ಲಿ ಮಾತ್ರ ಅಂದಾಜು 100 ವಾಹನಗಳಿವೆ. ಸುಮಾರು 500 ಸಿಬ್ಬಂದಿಗಳಿದ್ದಾರೆ. ಅಷ್ಟೂ ಸಿಬ್ಬಂದಿಗಳ ಬದುಕೀಗ ಸಂಬಳ ಸಿಗದೆ ಸಂಕಷ್ಟದಲ್ಲಿದೆ.
ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಪ್ರತಿಕ್ರಿಯಿಸಿದ 108 ನೌಕರ ಸಂಘದ ಉಪಾಧ್ಯಕ್ಷ ಪರಮಶಿವ, ಮೂರು ತಿಂಗಳ ಸಂಬಳ ಪಾವತಿಯಾಗಿರಲಿಲ್ಲ. ಒತ್ತಡ ಹೇರಿದ ಕಾರಣಕ್ಕೆ ಒಂದು ವಾರಗಳ ಹಿಂದೆ ಒಂದು ತಿಂಗಳ ಸಂಬಳ ಆಗಿದೆ. 108 ಆ್ಯಂಬುಲೆನ್ಸ್ ವಾಹನಗಳ ನಿರ್ವಹಣೆ ಸರಿಯಾಗಿಲ್ಲ. ಮೆಡಿಕಲ್ ಕಿಟ್ ಇಲ್ಲ. ವಾಹನಗಳಲ್ಲಿ ಸ್ಯಾನಿಟೈಸ್ ಇಲ್ಲ. ಪ್ರಾರ್ಥಮಿಕ ಚಿಕಿತ್ಸೆಯ ಪೆಟ್ಟಿಗೆ ಇಲ್ಲ. ವಾಹನ ಸಿಬ್ಬಂದಿಗಳಿಗೆ ಧರಿಸಲು ಪಿಪಿಇ ಕಿಟ್ ಸೌಲಭ್ಯ ಕೂಡ ಇಲ್ಲ. ಅಲ್ದೇ ಮೇಲ್ವಿಚಾರಣೆಯನ್ನು ಮಾಡುತ್ತಿರುವ ಜಿವಿಕೆ ಸಂಸ್ಥೆ ಭ್ರಷ್ಟಾಚಾರ ಮಾಡುತ್ತಿದೆ ಅಂತ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: HD Deve Gowda: ಎಚ್.ಡಿ. ದೇವೇಗೌಡ ಪ್ರಧಾನಿಯಾಗಿ ಇಂದಿಗೆ 25 ವರ್ಷ; ನನಗೆ ನಿವೃತ್ತಿಯೇ ಇಲ್ಲ ಎಂದ ಮಣ್ಣಿನ ಮಗ!
ಕೊರೋನಾಗೆ ಒಟ್ಟು ಈವರೆಗೆ 10 ಮಂದಿ 108 ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ. ಒಬ್ಬರಿಗೆ ಮಾತ್ತ 30 ಲಕ್ಷ ಪರಿಹಾರ ಧನ ನೀಡಲಾಗಿದೆ.. ಉಳಿದ 9 ಮಂದಿಗೆ ಯಾವುದೇ ಪರಿಹಾರ ಸರ್ಕಾರ ನೀಡಿಲ್ಲ. ಈಗ ಕಳೆದರಡು ತಿಂಗಳಿನಿಂದ ಸಂಬಳ ಆಗದೆ 108 ನೌಕರರು ಪರದಾಡುತ್ತಿದ್ದಾರೆ. ಆದರೆ ಮೇಲ್ವಿಚಾರಕ ಸಂಸ್ಥೆ ಜಿವಿಕೆ ಹಾಗೂ ಸರ್ಕಾರ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಂಡು ಕೂತಿದೆ. ಆದರೆ ಆದಷ್ಡು ಬೇಗ ಕೊರೋನಾ ಪ್ರಂಟ್ ಲೈನ್ ಕಾರ್ಯಕರ್ತರ ಸಂಬಳ ಆದಷ್ಟು ಬೇಗ ಅವರ ಕಣ್ಣೀರು ಒರೆಸಬೇಕು. ಇದಷ್ಟೇ ಆಗಿದೆ ನಮ್ಮಆಶಯ.
ಒಟ್ಟು ಸಿಬ್ಬಂದಿ : 3000
ಒಟ್ಟು ವಾಹನಗಳು : 711
ಬಾಕಿ ಇರುವ ಸಂಬಳ ಎಷ್ಟು? : ಅಂದಾಜು 10 ಕೋಟಿ
ಎಷ್ಟು ತಿಂಗಳಿನಿಂದ ಸಂಬಳ ಆಗಿಲ್ಲ : 2 ತಿಂಗಳು
ಎಷ್ಟು ಸಿಬ್ಬಂದಿ ಸೋಂಕಿಗೆ ತುತ್ತಾಗಿದ್ದಾರೆ : 50
ಎಷ್ಟು ಸಿಬ್ಬಂದಿ ಸಾವನ್ನಪ್ಪಿದ್ದಾರೆ : 10
ಸತ್ತವರಿಗೆ ಸಿಕ್ಕಿರುವ ಪರಿಹಾರ ಎಷ್ಟು? : 30 ಲಕ್ಷ (10ರಲ್ಲಿ ಒಬ್ಬರಿಗೆ ಮಾತ್ರ ಸಿಕ್ಕಿದೆ)
(ವರದಿ: ಆಶಿಕ್ ಮುಲ್ಕಿ) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ