ಹಡಗಲಿಯ ಡಿವೈಎಸ್​ಪಿ ರಜೆ ಅರ್ಜಿ ಮೇಲೆ ಕೊರೋನಾ ಚಿತ್ರ ಬರೆದು, ರಜೆ ತಿರಸ್ಕರಿಸಿದ ಬಳ್ಳಾರಿ ಎಸ್​ಪಿ!

ಕೊರೋನಾ ವೈರಸ್ ಬಳ್ಳಾರಿ ಜಿಲ್ಲೆಯಿಂದ ತೊಲಗಿದ ನಂತರ ನಿಮ್ಮ ವೈಯಕ್ತಿಕ ಕೆಲಸಕ್ಕೆ ರಜೆ ನೀಡಲಾಗುವುದು ಎಂದು ಬರೆದು, ಸಹಿ ಹಾಕಿ ಅದರ ಜೊತೆಗೆ ಕೊರೋನಾ ಚಿತ್ರವನ್ನು ಬರೆದಿದ್ದಾರೆ. 

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಬಳ್ಳಾರಿ: ರಾಜ್ಯದಲ್ಲಿ ಕೊರೋನಾ ವೈರಸ್​ ವ್ಯಾಪಕವಾಗಿ ಹಬ್ಬುತ್ತಿದ್ದು, ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಹರಸಾಹಸ ಪಡುತ್ತಿದೆ. ಮಾರಕ ಸೋಂಕು ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್​ಡೌನ್​ ಘೋಷಿಸಲಾಗಿದ್ದು, ಜನರು ಹೊರಗೆ ತಿರುಗಾಡದಂತೆ ತಡೆಗಟ್ಟಲು ಪೊಲೀಸರು ಇನ್ನಿಲ್ಲದ್ದಂತೆ ಶ್ರಮ ವಹಿಸಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ.

  ಏತನ್ಮಧ್ಯೆ, ವೈಯಕ್ತಿಕ ಕಾರಣದಿಂದ ಹಡಗಲಿಯ ಡಿವೈಎಸ್​ಪಿ ಮಲ್ಲನಗೌಡ ಎಸ್​.ಹೊಸಮನಿ ಅವರು ಐದು ದಿನಗಳ ಕಾಲ ರಜೆ ಕೇಳಿ ಬಳ್ಳಾರಿ ಎಸ್​ಪಿಗೆ ರಜೆ ಅರ್ಜಿ ಬರೆದಿದ್ದರು. ಆದರೆ, ರಜೆ ನೀಡಲು ಸಾಧ್ಯವಿಲ್ಲ ಎಂದು ಹೇಳಿ, ಅದರ ಮೇಲೆಯೇ ಕೊರೋನಾ ಚಿತ್ರವನ್ನು ಬರೆದಿದ್ದಾರೆ.

  ಹಡಗಲಿಯ ಡಿವೈಎಸ್​ಪಿ ಮಲ್ಲನಗೌಡ ಎಸ್​.ಹೊಸಮನಿ ಅವರು ಏ.10ರಿಂದ ಐದು ದಿನಗಳ ಕಾಲ ರಜೆ ಕೇಳಿ ಬಳ್ಳಾರಿ ಜಿಲ್ಲಾ ಸಿ.ಕೆ.ಬಾಬಾ ಅವರಿಗೆ ಪರವಾನಗಿ ರಜೆ ಮಂಜೂರು ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಮಾರಕ ಸೋಂಕು ಕೊರೋನಾ ನಿಯಂತ್ರಣದ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಆದೇಶದಂತೆ ಇಡೀ ದೇಶವೇ ಏಪ್ರಿಲ್ 14 ರವರೆಗೆ ಲಾಕ್‌ಡೌನ್ ಇರುವ ಹಿನ್ನೆಲೆಯಲ್ಲಿ ರಜೆ ಮಂಜೂರು ಮಾಡಿಲ್ಲ. ಜೊತೆಗೆ ಡಿವೈಎಸ್​ಪಿ ಸಲ್ಲಿಸಿದ್ದ ಅರ್ಜಿಯ ಮೇಲೆ, ಕೊರೋನಾ ವೈರಸ್ ಬಳ್ಳಾರಿ ಜಿಲ್ಲೆಯಿಂದ ತೊಲಗಿದ ನಂತರ ನಿಮ್ಮ ವೈಯಕ್ತಿಕ ಕೆಲಸಕ್ಕೆ ರಜೆ ನೀಡಲಾಗುವುದು ಎಂದು ಬರೆದು, ಸಹಿ ಹಾಕಿ ಅದರ ಜೊತೆಗೆ ಕೊರೋನಾ ಚಿತ್ರವನ್ನು ಬರೆದಿದ್ದಾರೆ. 

  ಡಿವೈಎಸ್​ಪಿ ರಜೆ ಅರ್ಜಿ ಮೇಲೆ ರಜೆ ತಿರಸ್ಕರಿಸಿ, ಕೊರೋನಾ ಚಿತ್ರ ಬರೆದಿರುವ ಬಳ್ಳಾರಿ ಎಸ್​ಪಿ.


  ಇದನ್ನು ಓದಿ: ಹೊಸದಾಗಿ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ; ಸಿಎಂ ಬಿಎಸ್​ವೈಗೆ ಬೆಂಗಳೂರು ನಗರ ಜವಾಬ್ದಾರಿ
  First published: