HOME » NEWS » Coronavirus-latest-news » BELLARY LOCKDOWN TOUGH RULES IMPOSED IN BELLARY AS COVID 19 CASES INCREASED KARNATAKA LOCKDOWN SCT

Bellary Lockdown: ಬಳ್ಳಾರಿಯಲ್ಲಿ ಮದುವೆ, ಸಮಾರಂಭಗಳಿಗೆ ಬ್ರೇಕ್; ಮತ್ತಷ್ಟು ಟಫ್ ರೂಲ್ಸ್​ ಜಾರಿ

Karnataka Lockdown: ನಿನ್ನೆಯಿಂದ ಬಳ್ಳಾರಿ ಜಿಲ್ಲೆಯಾದ್ಯಂತ ಮತ್ತಷ್ಟು ಟಫ್ ರೂಲ್ಸ್ ಜಾರಿಯಾಗಿದೆ. ಈ ಟಫ್ ರೂಲ್ಸ್ ಮೇ 24ರ ಬೆಳಗ್ಗೆ 6ರವರೆಗೆ ಜಾರಿಯಲ್ಲಿರಲಿದೆ. ಈ ಸಂದರ್ಭದಲ್ಲಿ  ಮದುವೆ ಸಮಾರಂಭ ಹಾಗೂ ಇತರೆ ಸಾಮಾಜಿಕ ಕಾರ್ಯಕ್ರಮಗಳು ಸಂಪೂರ್ಣವಾಗಿ ನಿಷೇಧಿಸಿರುವುದು ಸೇರಿದಂತೆ ಹಲವು ಕಠಿಣ ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ.

news18-kannada
Updated:May 11, 2021, 8:27 AM IST
Bellary Lockdown: ಬಳ್ಳಾರಿಯಲ್ಲಿ ಮದುವೆ, ಸಮಾರಂಭಗಳಿಗೆ ಬ್ರೇಕ್; ಮತ್ತಷ್ಟು ಟಫ್ ರೂಲ್ಸ್​ ಜಾರಿ
ಸಚಿವ ಆನಂದ್ ಸಿಂಗ್
  • Share this:
ಬಳ್ಳಾರಿ (ಮೇ 11): ಕೋವಿಡ್ ಸೋಂಕಿತರ ಮತ್ತು ಸೋಂಕಿಗೆ ಬಲಿಯಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿನ್ನೆಯಿಂದ ಬಳ್ಳಾರಿ ಜಿಲ್ಲೆಯಾದ್ಯಂತ ಮತ್ತಷ್ಟು ಟಫ್ ರೂಲ್ಸ್ ಜಾರಿಯಾಗಿದೆ. ಈ ಟಫ್ ರೂಲ್ಸ್ ಮೇ 24ರ ಬೆಳಗ್ಗೆ 6ರವರೆಗೆ ಜಾರಿಯಲ್ಲಿರಲಿದೆ. ಈ ಸಂದರ್ಭದಲ್ಲಿ  ಮದುವೆ ಸಮಾರಂಭ ಹಾಗೂ ಇತರೆ ಸಾಮಾಜಿಕ ಕಾರ್ಯಕ್ರಮಗಳು ಸಂಪೂರ್ಣವಾಗಿ ನಿಷೇಧಿಸಿರುವುದು ಸೇರಿದಂತೆ ಹಲವು ಕಠಿಣ ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

ಕಿರಾಣಿ ಅಂಗಡಿಗಳು, ದಿನಸಿ, ಹಣ್ಣು-ತರಕಾರಿಗಳು, ಡೈರಿ ಮತ್ತು ಹಾಲಿನ ಬೂತುಗಳು, ಮಾಂಸ ಮತ್ತು ಮೀನು, ಪಶು ಆಹಾರದ ಅಂಗಡಿಗಳು ಹಾಗೂ ಹಣ್ಣು ಮತ್ತು ತರಕಾರಿಗಳ ಮಾರುಕಟ್ಟೆ ಹಾಗೂ ತಳ್ಳುವ ಗಾಡಿಯ ಮೂಲಕ ಮಾರಾಟ ಮಾಡುವವರು ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ನಿರ್ವಹಿಸಬೇಕು. ನಂತರದಲ್ಲಿ ಎಲ್ಲವೂ ಕೂಡ ಸಂಪೂರ್ಣ ಬಂದ್ ಆಗಲಿದೆ. ಮದುವೆ ಸಮಾರಂಭ ಹಾಗೂ ಇತರೆ ಸಾಮಾಜಿಕ ಕಾರ್ಯಕ್ರಮಗಳನ್ನು ಈ ಅವಧಿಯಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಜನರು ಕೂಡ ಇದಕ್ಕೆ ಸ್ಪಂದಿಸಬೇಕು ಎಂದಿದ್ದಾರೆ.

ರೈಸ್ ಮಿಲ್ಸ್, ಆಯಲ್ ಮಿಲ್ಸ್, ದಾಲ್ ಮಿಲ್ಸ್, ಡೈರಿ ಪ್ರಾಡಕ್ಟ್ಸ್, ರೋಲಾರ್ ಫ್ಲ್ರೋರ್ ಮೀಲ್ಸ್, ಆರ್‍ಒ ಮತ್ತು ಡಿಸ್ಟಿಲ್ಡ್ ವಾಟರ್ ಪ್ಲಾಂಟ್ಸ್/ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್​​ಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳನ್ನು ಕಾರ್ಖಾನೆಯ ಆವರಣದ ಒಳಗಡೆ ಇರುವ ಸಿಬ್ಬಂದಿಯನ್ನು ಮಾತ್ರ ಬಳಸಬೇಕು. ಹಾಗೂ ಹೊರಗಡೆಯಿಂದ ಸಿಬ್ಬಂದಿಯನ್ನು ಬಳಸಲು ಅವಕಾಶವಿರುವುದಿಲ್ಲ ಎಂಬ ಷರತ್ತಿನ ರೂಪದಲ್ಲಿ ಮಾತ್ರ ಅನುಮತಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಎಂದೋ ಹಂಪಿಗೆ ಪ್ರವಾಸಕ್ಕೆ ಬಂದಿದ್ದ ವಿದೇಶಿಗರು ಈಗ ಕೊರೋನಾ ಸಂಕಷ್ಟ ಕಾಲದಲ್ಲಿ ಕೈಹಿಡಿದರು!

ಬಳ್ಳಾರಿ ಜಿಲ್ಲೆಯಲ್ಲಿ ಅನುಮತಿ ನೀಡಲ್ಪಟ್ಟ ಕಾರ್ಖಾನೆಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳನ್ನು, ಕಾರ್ಖಾನೆಯ ಆವರಣದ ಒಳಗಿರುವ ಸಿಬ್ಬಂದಿಯನ್ನು ಮಾತ್ರ ಬಳಸತಕ್ಕದ್ದು ಹಾಗೂ ಹೊರಗಡೆಯಿಂದ ಸಿಬ್ಬಂದಿಯನ್ನು ಬಳಸಲು ಅವಕಾಶವಿರುವುದಿಲ್ಲ. ಷರತ್ತಿನ ರೂಪದಲ್ಲಿ ಮಾತ್ರ ಅನುಮತಿಸಲಾಗಿದೆ ಎಂದು ವಿವರಿಸಿದ ಸಚಿವ ಸಿಂಗ್ ಅವರು, ಬೆಳಗ್ಗೆ 10ರ ನಂತರ ಪುನಃ ಮರುದಿನ ಬೆಳಗ್ಗೆ 6ರವರೆಗೆ ಸಾರ್ವಜನಿಕರ ಓಡಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಬಳ್ಳಾರಿ ಜಿಲ್ಲೆಯಾದ್ಯಂತ ಕೋವಿಡ್-19 ಪ್ರಕರಣಗಳು ದಿನೇ ದಿನೇ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿದ್ದು, ಅನೇಕ ಪ್ರಕರಣಗಳಲ್ಲಿ ರೋಗದ ತೀವ್ರತೆ ಹೆಚ್ಚಾಗುತ್ತಿದೆ. ಸದ್ಯ ಬಳ್ಳಾರಿ ಜಿಲ್ಲೆಯು ರಾಜ್ಯದಲ್ಲಿ ಸೊಂಕಿನ ಪ್ರಮಾಣದಲ್ಲಿ ಮೂರನೇ ಸ್ಥಾನದಲ್ಲಿ ಮತ್ತು ಡೆತ್‍ ರೇಟ್ ಪ್ರಮಾಣದಲ್ಲಿ 2ನೇ ಸ್ಥಾನದಲ್ಲಿರುವುದರಿಂದ ಮತ್ತು ಜಿಲ್ಲೆಯ ಜನರ ಹಿತದೃಷ್ಟಿಯಿಂದ ಸಂಪೂರ್ಣ ಲಾಕ್‍ಡೌನ್ ಘೋಷಿಸಲಾಗಿದೆ ಎಂದು ಆನಂದ್ ಸಿಂಗ್ ತಿಳಿಸಿದರು.
Youtube Video
ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಸಚಿವ ಆನಂದ ಸಿಂಗ್, ಬಳ್ಳಾರಿ ಜಿಲ್ಲೆಯ ಜನರು ಕೂಡ ಈ ಸಂಪೂರ್ಣ ಲಾಕ್‍ಡೌನ್‍ಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

(ವರದಿ: ವಿನಾಯಕ ಬಡಿಗೇರ)
Published by: Sushma Chakre
First published: May 11, 2021, 8:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories