ಕೊರೋನಾ ಹೋರಾಟದಲ್ಲಿ ದಂಪತಿ ಬ್ಯುಸಿ; ಮನೆಗೆ ಯಾವಾಗ ಬರ್ತೀಯಾ ಎಂಬ ಮಕ್ಕಳ ಪ್ರಶ್ನೆಗಿಲ್ಲ ಉತ್ತರ!

Thank You Coronavirus Helpers: ದಂಪತಿ ಕೊರೋನಾ ವಿರುದ್ಧದ ಹೋರಾಟದಲ್ಲಿ ಮನೆ, ಮಕ್ಕಳ ಎಲ್ಲರನ್ನೂ ಬಿಟ್ಟು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ. ಪ್ರತಿ ಸಲ ಮಕ್ಕಳು ಫೋನ್ ಮಾಡಿದಾಗ ‘ಅಮ್ಮ ಮನೆಗೆ ಯಾವಾಗ ಬರ್ತೀಯಾ?’ ಎಂಬ ಪ್ರಶ್ನೆಯನ್ನು ಕೇಳುತ್ತಾರಂತೆ.

ಸುಜಾತಾ ದಂಪತಿ

ಸುಜಾತಾ ದಂಪತಿ

  • Share this:
ಬೆಳಗಾವಿ(ಏ.13): ಇಡೀ ವಿಶ್ವವನ್ನು ಮಹಾಮಾರಿ ಕೋವಿಡ್-19 ತಲ್ಲಣಗಳೊಸಿದೆ. ಬೆಳಗಾವಿ ಜಿಲ್ಲೆಯ 14 ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಆತಂಕ ಹೆಚ್ಚಿಸಿದೆ. ಇಂತಹ ಕಷ್ಟದ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿ ತಮ್ಮ ಮನೆ, ಮಕ್ಕಳನ್ನು ಬಿಟ್ಟು ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಈ ಸಾಲಿಗೆ ಬೆಳಗಾವಿಯ ನರ್ಸ್ ದಂಪತಿಯ ಕೆಲಸವನ್ನು ನಾವೇಲ್ಲರೂ ಶ್ಲಾಘಿಸಲೇಬೆಕು.

ಸ್ಟಾಪ್ ನರ್ಸ್ ಸುಜಾತಾ ಕುರಿ ಹಾಗೂ ಶ್ರೀನಾಥ್ ಪವಾರ್ ಕೊರೋನಾ ವಿರುದ್ಧ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಸುಜಾತಾ ಬೆಳಗಾವಿಯ ಬಿಮ್ಸ್ ನಲ್ಲಿ ಕಳೆದ 12 ವರ್ಷಗಳಿಂದ ಸ್ಟಾಪ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಇವರನ್ನು ಕೊರೋನಾ ವಾರ್ಡ್ ಕಾರ್ಯಕ್ಕೆ ನೇಮಿಸಲಾಗಿದೆ. ಒಂದು ವಾರದ ಕೆಲಸ ಬಳಿಕ 14 ದಿನಗಳ ಕಾಲ ಕ್ವಾರಂಟೈನ್ ಮಾಡಲು ಸೂಚಿಸಲಾಗಿದ್ದು, ಖಾಸಗಿ ಹೋಟೆಲ್​​ವೊಂದರಲ್ಲಿ ಉಳಿದುಕೊಂಡಿದ್ದಾರೆ. ಹೀಗಾಗಿ, ಒಂದೇ ಊರಲ್ಲಿ ಇದ್ದರೂ ಮಕ್ಕಳ ಮುಖ ನೋಡಲು ಅಮ್ಮನಿಗೆ ಸಾಧ್ಯವಾಗಿಲ್ಲ.

ಇನ್ನು, ಶ್ರೀನಾಥ ಪವಾರ್ ದುಬೈನಲ್ಲಿ ಸ್ಟಾಪ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ಅವರು ಸೇವೆ ಸಲ್ಲಿಸುತ್ತಿದ್ದು, ಸದ್ಯ ಅವರನ್ನು ಅಲ್ಲಿನ ಕೊರೊನಾ ಪೀಡಿತ ವಾರ್ಡ್​ಗೆ ನಿಯೋಜಿಸಲಾಗಿದೆ.

ದಂಪತಿ ಕೊರೋನಾ ವಿರುದ್ಧದ ಹೋರಾಟದಲ್ಲಿ ಮನೆ, ಮಕ್ಕಳ ಎಲ್ಲರನ್ನೂ ಬಿಟ್ಟು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ. ಪ್ರತಿ ಸಲ ಮಕ್ಕಳು ಫೋನ್ ಮಾಡಿದಾಗ ‘ಅಮ್ಮ ಮನೆಗೆ ಯಾವಾಗ ಬರ್ತೀಯಾ?’ ಎಂಬ ಪ್ರಶ್ನೆಯನ್ನು ಸುಜಾತಾಗೆ ಕೇಳುತ್ತಾರಂತೆ. ಆದರೆ, ಈ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ.  ಇಬ್ಬರು ಪುಟ್ಟ ಮಕ್ಕಳ ಜವಾಬ್ದಾರಿ ಸದ್ಯ ಅಜ್ಜ, ಅಜ್ಜಿಯ ಮೇಲಿದೆ. ಅಮ್ಮ ಯಾಕೆ ಮನೆ ಬಂದಿಲ್ಲ ಎಂಬ ಮಕ್ಕಳ ಪ್ರಶ್ನೆಗೆ ಅಜ್ಜ-ಅಜ್ಜಿಗೆ ಉತ್ತರ ನೀಡಲು ಸಾಧ್ಯವಾಗಿಲ್ಲ.

ಇದನ್ನೂ ಓದಿ: ಸಿಂಗಾಪುರದಲ್ಲಿ ಒಂದೇ ದಿನ 59 ಭಾರತೀಯರಿಗೆ ಕೊರೋನಾ ಸೋಂಕು

ಸುಜಾತಾ ಸಹೋದರ ಪ್ರಶಾಂತ ಕುರಿ ಸಹ ಆರೋಗ್ಯ ಇಲಾಖೆಯಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ. ಹಾಸನ ಜಿಲ್ಲೆಯ ಆಲೂರು ತಾಲೂಕು ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಕೆಲಸ ಮಾಡುತ್ತಿದ್ದಾರೆ. ಇವರು ಸಹ ಮನೆಗೆ ಬರದೇ ತಿಂಗಳುಗಳೇ ಕಳೆದಿದೆ. ಇವರ ಇಬ್ಬರ ಮಕ್ಕಳನ್ನು ಸಹ ಅಜ್ಜ, ಅಜ್ಜಿಯೇ ನೋಡಿಕೊಳ್ಳುತ್ತಿದ್ದಾರೆ.

ಹೀಗಾಗಿ ಸುಜಾತಾ ಅವರ ಇಡೀ ಕುಟುಂಬವೇ ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿದೆ. ಹೀಗೆ ಮನೆ, ಮಕ್ಕಳನ್ನು ಬಿಟ್ಟು ಹೋರಾಟ ನಡೆಸಿದ ಇವರೇ ನಿಜವಾದ ಕೊರೋನಾ ವಾರಿಯರ್ಸ್.
First published: