HOME » NEWS » Coronavirus-latest-news » BELGAUM CORONAVIRUS UPDATES WOMAN KILLED BY 4 YEAR CHILD BAY FOR 20 RS MONEY IN CHIKKODI HK

ಚಿಕ್ಕೋಡಿಯಲ್ಲಿ 20 ರೂಪಾಯಿ ಹಣದ ಆಸೆಗೆ 4 ವರ್ಷದ ಮಗುವನ್ನು ಕೊಂದ ಪಾಪಿ ಮಹಿಳೆ

Belgaum Coronavirus Updates: ಅನುಮಾನಗೊಂಡ ಬಾಲಕಿಯ ಪೋಷಕರು ಪೂಜಾ ವಿರುದ್ದ ದೂರು ದಾಖಲಿಸಿ ಪೊಲೀಸರ ವಿಚಾರಣೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ

news18-kannada
Updated:May 14, 2020, 10:26 AM IST
ಚಿಕ್ಕೋಡಿಯಲ್ಲಿ 20 ರೂಪಾಯಿ ಹಣದ ಆಸೆಗೆ 4 ವರ್ಷದ ಮಗುವನ್ನು ಕೊಂದ ಪಾಪಿ ಮಹಿಳೆ
ಸಾಂದರ್ಭಿಕ ಚಿತ್ರ
  • Share this:
ಚಿಕ್ಕೋಡಿ(ಮೇ.14): ಹಣದ ಆಸೆಗಾಗಿ ನಾಲ್ಕು ವರ್ಷದ ಬಾಲಕಿಯನ್ನು 25 ವರ್ಷದ ಮಹಿಳೆಯೊಬ್ಬಳು ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೊಡಿ ತಾಲೂಕಿನ ಜಾಗನೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ. ಎಲ್ಲರೂ ಕಳೆದ ಬಾರಿಯ ಕಬ್ಬು ಕಟಾವ ಹಂಗಾಮಿನಲ್ಲಿ ಕಬ್ಬು ಕಟಾವ ಮಾಡಲು ಬಂದಿದ್ದ ಮಹಾರಾಷ್ಟ್ರದ ವಾಸಿಮ ಜಿಲ್ಲೆಯ ಕಾರ್ಮಿಕರು ಇಲ್ಲಿಗೆ ದುಡಿಯಲು ಬಂದಿದ್ದರು. ಕಬ್ಬು ಕಟಾವು  ಮುಗಿಯುವಷ್ಟರಲ್ಲಿ ಲಾಕಡೌನ್ ಆದ ಪರಿಣಾಮ ತಮ್ಮ ರಾಜ್ಯಕ್ಕೆ ತೆರಳದೆ  ಜಾಗನೂರ ಗ್ರಾಮದ ಹೊರ ವಲಯದಲ್ಲಿ ಟೆಂಟ್ ಹಾಕಿಕೊಂಡು ವಾಸವಾಗಿದರು. ಇನ್ನು ಬಾಲಕಿ ದಿವ್ಯಾ ಪಾಲಕರು ಹಾಗೂ ಆರೋಪಿ ಪೂಜಾ ಕಾಂಬಳೆ ಎಲ್ಲಾ ಕುಟುಂಬ ಸದಸ್ಯರು  ಒಂದೆ ಗ್ಯಾಂಗ್ ನಲ್ಲಿ ಕೆಲಸ ಮಾಡಿ ಎಲ್ಲರು ಒಟ್ಟಿಗೆ  ವಾಸವಾಗಿದ್ದರು.

ನಿನ್ನೆ ಸಂಜೆ ಬಾಲಕಿ ದಿವ್ಯಾ ತಂದೆ ಹತ್ತಿರ 20 ರೂಪಾಯಿ ಪಡೆದು ಸಮೀಪದಲ್ಲೆ ಇದ್ದ ಅಂಗಡಿಗೆ ಚಾಕಲೇಟ್ ತರಲು ತೆರಳಿದ್ದಳು. ಆದರೆ, ದಾರಿ ಮಧ್ಯೆ ಸಿಕ್ಕ ಪೂಜಾ ಕಾಂಬಳೆ 20 ರೂಪಾಯಿ ಕೈಯಲ್ಲಿ ಹಿಡಿದು ಅಂಗಡಿಗೆ ಹೊರಟಿದ್ದ ಪುಟ್ಟ ಕಂದಮ್ಮನ ಕೈಯಲಿದ್ದ ಹಣವನ್ನು ಕಸಿದುಕೊಳ್ಳುತ್ತಲೆ ಮಗು ಅಳಲು ಪ್ರಾರಂಭಿಸಿದೆ.

ಇನ್ನು ಮಗು ಅತ್ತು ಎಲ್ಲಿ ದೊಡ್ಡ ಸುದ್ದಿ ಆದೀತು ಎಂದು ಅಳುತ್ತಿದ್ದ ಪುಟ್ಟ ಕಂದಮ್ಮನನ್ನ ಬಾವಿಗೆ ತಳ್ಳಿದಾಳೆ ಈ ಪಾತಕಿ. ಇನ್ನು ಮಗು ಕಾಣಿಸದ ಹಿನ್ನಲೆ ಹುಡುಕಾಡಿದ ತಂದೆ ತಾಯಿ ಅಂಗಡಿಗೆ ಬಂದಾಗ ಮಗು ಪೂಜಾ ಕಾಂಬಳೆ ಜೊತೆ ಹೋಗಿದ್ದು ಗೊತ್ತಾಗಿತ್ತು. ಪೂಜಾಳನ್ನ ವಿಚಾರಿಸಿದ್ದಾಗ ತನಗೇನು ಮಾಹಿತಿ ಇಲ್ಲ ಎಂದು ಹೇಳಿ ಸುಮ್ಮನಾಗಿದ್ದಾಳೆ. ಅನುಮಾನಗೊಂಡ ಬಾಲಕಿಯ ಪೋಷಕರು ಪೂಜಾ ವಿರುದ್ದ ದೂರು ದಾಖಲಿಸಿ ಪೊಲೀಸರ ವಿಚಾರಣೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ : ಕೆಜಿಎಫ್​​ ಚಿನ್ನದ ಗಣಿಯಲ್ಲಿ ಕಳ್ಳತನಕ್ಕೆ ಯತ್ನ; ಮೂವರ ಸಾವು, ಇಬ್ಬರ ಬಂಧನ 

ಇನ್ನ ಸ್ಥಳಕ್ಕೆ ಚಿಕ್ಕೋಡಿ ಪಿಎಸ್ ಐ ರಾಕೇಶ್ ಬಗಲಿ,  ಸಿ.ಪಿ.ಐ ಆರ್.ಆರ್. ಪಾಟೀಲ್ ಭೇಟಿ ನೀಡಿ ಪ್ರಕರಣ ತನಿಖೆಯನ್ನು ನಡೆಸಿದ್ದಾರೆ. ಸದ್ಯ ಆರೋಪಿ ಪೂಜಾ ಪೋಲಿಸರ ವಶದಲ್ಲಿದ್ದಾಳೆ. ಘಟನೆ ಸಂಬಂಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ವರದಿ : ಲೋಹಿತ್​ ಶಿರೋಳ)
First published: May 14, 2020, 9:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories