ನಗರ ಪ್ರದೇಶಕ್ಕೆ ಮಾದರಿಯಾದ ಹಳ್ಳಿಯ ಸ್ವಯಂ ನಿರ್ಬಂಧನೆ; ಬೆಳಗಾವಿಯ ಈ ಗ್ರಾಮದಲ್ಲಿ ಜನತಾ ಕರ್ಫ್ಯೂ

ನಗರ ಪ್ರದೇಶದಲ್ಲಿ ಲಾಕ್ ಡೌನ್ ಯಶಸ್ವಿ ಮಾಡಲು ಪೊಲೀಸರು ಹಗಲು, ರಾತ್ರಿ ಶ್ರಮಿಸುತ್ತಿದ್ದಾರೆ. ಆದರೆ ಈ ಗ್ರಾಮದಲ್ಲಿ ಯಾವೊಬ್ಬ ಪೊಲೀಸ್ ಅಧಿಕಾರಿಯ ಅಪ್ಪಣೆ ಇಲ್ಲದೇ ಜನ ಸ್ವತಃ ತಾವೇ ಜತನಾ ಕರ್ಫ್ಯೂ ವಿಧಿಸಿಕೊಂಡು ಮಾದರಿಯಾಗಿದ್ದಾರೆ. ತಮ್ಮ ಗ್ರಾಮದ ರಕ್ಷಣೆಗೆ ತಾವೇ ಮುಂದಾಗಿದ್ದು ಪ್ರಶಂಸೆಗೆ ಕಾರಣವಾಗಿದೆ. 

ಗ್ರಾಮಕ್ಕೆ ನಿರ್ಬಂಧ ವಿಧಿಸಿರುವ ಗ್ರಾಮಸ್ಥರು

ಗ್ರಾಮಕ್ಕೆ ನಿರ್ಬಂಧ ವಿಧಿಸಿರುವ ಗ್ರಾಮಸ್ಥರು

  • Share this:
ಬೆಳಗಾವಿ(14): ದೇಶಾದ್ಯಂತ ಮೇ 3ರ ವರೆಗೆ ಲಾಕ್ ಡೌನ್ ಮುಂದುವರೆಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ನಗರದ ಪ್ರದೇಶದಲ್ಲಿ ಲಾಕ್ ಡೌನ್ ಯಶಸ್ವಿಗೊಳಿಸಲು ಪೊಲೀಸರು ಹಗಲು, ರಾತ್ರಿ ಕೆಲಸ ಮಾಡುತ್ತಿದ್ದಾರೆ. ನಗರ ಪ್ರದೇಶದಲ್ಲಿ ಪ್ರತಿ ಬಡಾವಣೆ, ಪ್ರಮುಖ ರಸ್ತೆಯಲ್ಲಿ ಬ್ಯಾರಿಕೇಡ್ ವ್ಯವಸ್ಥೆ ಮಾಡಲು ಕಾಯುತ್ತಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ತಮ್ಮ ಹಳ್ಳಿಗೆ ತಾವೇ ಸ್ವಯಂ ನಿರ್ಬಂಧನೆ ಹಾಕಿಕೊಳ್ಳುವ ಮೂಲಕ ಪುಟ್ಟ ಗ್ರಾಮದ ಜನ ಮಾದರಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸುತಗಟ್ಟಿ ಗ್ರಾಮದ ಜನ ಸ್ವಯಂ ನಿರ್ಬಂಧ ಹಾಕಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ. ಹೌದು, ಗ್ರಾಮದ ಮುಖ್ಯ ದ್ವಾರದಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಇದನ್ನು ಗ್ರಾಮದ ಮುಖಂಡರೇ ಸಭೆ ನಡೆಸಿ ತೀರ್ಮಾನ ಮಾಡಿದ್ದಾರೆ. ಇದರ ಜತೆಗೆ ತಮ್ಮ ಗ್ರಾಮದ ಜನರ ಆರೋಗ್ಯ ರಕ್ಷಣೆಗೆ ತಾವೇ ಅನೇಕ ಷರತ್ತುಗಳನ್ನು ಸಹ ಹಾಕಿಕೊಂಡಿದ್ದಾರೆ.ಸುತಗಟ್ಟಿ ಗ್ರಾಮಕ್ಕೆ ಯಾವೊಬ್ಬ ಅಪರಿಚಿತ ವ್ಯಕ್ತಿಗೆ ಪ್ರವೇಶ ಇಲ್ಲ. ಗ್ರಾಮದಿಂದ ಹೊರ ಹೋಗಬೇಕು ಅಂದರೆ ಅವರಿಗೆ ಮಾಸ್ಕ್ ಕಡ್ಡಾಯ. ಈ ಬಗ್ಗೆ ಯಾರೊಬ್ಬರ ಜತೆಗೆ ತಕರಾರು ಮಾಡಿದರೂ ಪೊಲೀಸರಿಗೆ ಗಮನಕ್ಕೆ ತರುತ್ತೇವೆ. ಗ್ರಾಮದಲ್ಲಿ ಸ್ವಚ್ಛತೆಯ ದೃಷ್ಠಿಯಿಂದ ಫಾಗಿಂಗ್ ಮಾಡಬೇಕು ಎನ್ನುವ ನಿರ್ಧಾರ ಕೈಗೊಂಡಿದ್ದಾರೆ. ಗ್ರಾಮದ ಮುಖ್ಯ ದ್ವಾರದ ಬಳಿ ನಿರ್ಮಾಣವಾಗಿರುವ ಚೆಕ್ ಪೋಸ್ಟ್ ಗೆ ಗ್ರಾಮದ ಯುವಕರು ಮೂರು ಸರದಿಯಲ್ಲಿ ಕೆಲಸ ಮಾಡುತ್ತಾರೆ. ಗ್ರಾಮದಿಂದ ಹೊರ ಹೋಗುವ ಪ್ರತಿಯೊಬ್ಬ ವ್ಯಕ್ತಿಯ ಹೆಸರನ್ನು ರಿಜಿಸ್ಟರ್ ನಲ್ಲಿ ದಾಖಲಿಸಿಕೊಳ್ಳಲಾಗುತ್ತದೆ. ಯಾಕಾಗಿ ಹೊರಗೆ ಹೋಗುತ್ತಿದ್ದೇವೆ ಎಂಬುದು ಹೇಳಬೇಕು. ಹೀಗೆ ತಮ್ಮ ಗ್ರಾಮದ ರಕ್ಷಣೆಗೆ ಮುಂದಾಗಿರೋ ಜನತಾ ಕರ್ಫ್ಯೂ ವಿಧಿಸಿಕೊಂಡಿದ್ದಾರೆ.ನಗರ ಪ್ರದೇಶದಲ್ಲಿ ಲಾಕ್ ಡೌನ್ ಯಶಸ್ವಿ ಮಾಡಲು ಪೊಲೀಸರು ಹಗಲು, ರಾತ್ರಿ ಶ್ರಮಿಸುತ್ತಿದ್ದಾರೆ. ಆದರೆ ಈ ಗ್ರಾಮದಲ್ಲಿ ಯಾವೊಬ್ಬ ಪೊಲೀಸ್ ಅಧಿಕಾರಿಯ ಅಪ್ಪಣೆ ಇಲ್ಲದೇ ಜನ ಸ್ವತಃ ತಾವೇ ಜತನಾ ಕರ್ಫ್ಯೂ ವಿಧಿಸಿಕೊಂಡು ಮಾದರಿಯಾಗಿದ್ದಾರೆ. ತಮ್ಮ ಗ್ರಾಮದ ರಕ್ಷಣೆಗೆ ತಾವೇ ಮುಂದಾಗಿದ್ದು ಪ್ರಶಂಸೆಗೆ ಕಾರಣವಾಗಿದೆ. ಕೊರೊನಾ ವೈರಸ್ ಎಂಬ ಮಹಾಮಾರಿಯ ವಿರುದ್ಧ ಹೋರಾಟಕ್ಕೆ ತಾವೇ ಸ್ವತಃ ತೀರ್ಮಾನ ಮಾಡಿ ಕ್ರಮ ಕೈಗೊಂಡಿದ್ದಾರೆ. ಹೀಗೆ ತಮ್ಮ ರಕ್ಷಣೆಗೆ ತಾವೇ  ಮುಂದಾದಾಗ ಮಾತ್ರ ಲಾಕ್ ಡೌನ್ ಯಶಸ್ವಿಯಾಗಲು ಸಾಧ್ಯ.
First published: