ಬೆಳಗಾವಿಯಲ್ಲಿ ಒಂದೇ ದಿನ ಮೂರು ಕೊರೊನಾ ಪಾಸಿಟಿವ್ ಕೇಸ್; ಒಂದೇ ಕುಟುಂಬದ ನಾಲ್ವರಿಗೆ ಸೋಂಕು

ದೆಹಲಿಯ ನಿಜಾಮುದ್ದಿನ್ ಮರ್ಕತ್ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿ ಸಂಪರ್ಕ ಕ್ರಾಂತಿ ರೈಲಿನಲ್ಲಿ ಬೆಳಗಾವಿಗೆ ವಾಪಸಾದವರು ಕೊರೊನಾ ಸಂಪರ್ಕ ಹರಡಿಸಿದ್ದಾರೆ.

news18-kannada
Updated:April 10, 2020, 8:22 PM IST
ಬೆಳಗಾವಿಯಲ್ಲಿ ಒಂದೇ ದಿನ ಮೂರು ಕೊರೊನಾ ಪಾಸಿಟಿವ್ ಕೇಸ್; ಒಂದೇ ಕುಟುಂಬದ ನಾಲ್ವರಿಗೆ ಸೋಂಕು
ಸಾಂದರ್ಭಿಕ ಚಿತ್ರ
  • Share this:
ಬೆಳಗಾವಿ: ಕುಂದಾ ನಗರಿಯಲ್ಲಿ 24 ಗಂಟೆ ಅಂತರದಲ್ಲಿ 3 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಒಂದೇ ದಿನ ಮೂವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇದರೊಂದಿಗೆ, ಬೆಳಗಾವಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10ಕ್ಕೆ ಏರಿದೆ. ನಿನ್ನೆ ಪತ್ತೆಯಾದ ಮೂರು ಪ್ರಕರಣಗಳೂ ಒಂದೇ ಕುಟುಂಬದರದ್ದಾಗಿದೆ.

ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ 20 ವರ್ಷದ ಸೋಂಕಿತ (ಕೇಸ್ ನಂಬರ್ 128) ವ್ಯಕ್ತಿಯ ತಂದೆ, ತಾಯಿ, ಅಣ್ಣನಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು ಬೆಳಗಾವಿ ಜಿಲ್ಲೆಯ ಜನ ಬೆಚ್ಚಿಬಿದ್ದಿದ್ದಾರೆ. ಸೋಂಕಿತರ ಟ್ರಾವೆಲ್ ಹಿಸ್ಟರಿ ಕಲೆಹಾಕುವಲ್ಲಿ ಜಿಲ್ಲಾಡಳಿತ ನಿರತವಾಗಿದೆ. ಆದರೆ, ಸೋಂಕಿತರು ಸ್ಪಷ್ಟ ಮಾಹಿತಿ ನೀಡದೇ ಇರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸೋಂಕಿತ 128ರ ತಂದೆ ಹಾಗೂ ಅಣ್ಣ ಈರುಳ್ಳಿ ವ್ಯಾಪಾರಸ್ಥರಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಕೊರೊನಾ ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆಯಾದರೂ ಬೆಳಗಾವಿ ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಇರುತ್ತಿದ್ದ ಜನಸಂದಣಿ ತಪ್ಪಿಸಲು ನಗರದ ಮೂರು ಕಡೆ ಮಾರುಕಟ್ಟೆ ಸ್ಥಾಪಿಸಿದರೂ ಪ್ರಯೋಜನವಾಗುತ್ತಿಲ್ಲ.

ಜನರು ಗುಂಪು ಗುಂಪಾಗಿ ತರಕಾರಿ ಖರೀದಿಯಲ್ಲಿ ತೊಡಗುತ್ತಿದ್ದು ಜನರನ್ನು ನಿಯಂತ್ರಿಸಬೇಕಾದ ಪೊಲೀಸರೂ ಸಹ ನಿಸ್ಸಹಾಯಕರಾಗಿ ಮಾರುಕಟ್ಟೆ ಹೊರಗೆ ನಿಂತಿರುವುದು ಕಂಡು ಬಂತು. ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರೋದು ಆತಂಕ ಸೃಷ್ಠಿಸಿದೆ. ಬೆಳಗಾವಿ ಜಿಲ್ಲೆಯಲ್ಲಿ ವಿದೇಶದಿಂದ ಬಂದ ಯಾರಲ್ಲೂ ಕೊರೊನಾ ಪತ್ತೆಯಾಗಿರಲಿಲ್ಲ. ಆದರೆ ದೆಹಲಿಯ ನಿಜಾಮುದ್ದಿನ್ ಮರ್ಕತ್ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿ ಸಂಪರ್ಕ ಕ್ರಾಂತಿ ರೈಲಿನಲ್ಲಿ ಬೆಳಗಾವಿಗೆ ವಾಪಸಾದವರು ಕೊರೊನಾ ಸಂಪರ್ಕ ಹರಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಎರಡಲ್ಲ, ಇನ್ನೂ ಹೆಚ್ಚು ವಾರ್ಡ್​ಗಳಲ್ಲಿ ಸೀಲ್​ಡೌನ್ ಸಾಧ್ಯತೆ

ಇನ್ನು ದೆಹಲಿ ಧರ್ಮಸಭೆಯಲ್ಲಿ ಭಾಗಿಯಾಗಿ ಬೆಳಗಾವಿಗೆ ಬಂದವರು ಸ್ವಯಂಪ್ರೇರಿತವಾಗಿ ತಪಾಸಣೆಗೆ ಮುಂದೆ ಬರುವಂತೆ ಡಿಸಿ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಈ ಕುರಿತು ಮಾತನಾಡಿರುವ ರೇಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, 'ದೆಹಲಿಯ ಧಾರ್ಮಿಕ ‌ಸಭೆಯಲ್ಲಿ ಪಾಲ್ಗೊಂಡು ಬಂದವರು ವೈದ್ಯಕೀಯ ತಪಾಸಣೆಗೆ ಒಳಗಾಗಿ. ಯಾರಾದರೂ ಹೊಡೆಯುತ್ತಾರೆ ಎಂಬ ಭಯವಿದ್ರೆ ಅದರಿಂದ ಹೊರಬನ್ನಿ. ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿ ಜನರ ಆರೋಗ್ಯಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ‌ವೈದ್ಯಕೀಯ ತಪಾಸಣೆಗೆ ಒಳಗಾಗದಿದ್ರೆ ನಿಮ್ಮ ಪರಿವಾರ, ಸಮಾಜದ ಆರೋಗ್ಯ ಹಾಳಾಗುತ್ತದೆ. ‌ಅನೇಕರು ಚಿಕಿತ್ಸೆಗೆ ಹೆದರಿರುವ ಬಗ್ಗೆ ನಮಗೆ ಮಾಹಿತಿ ಬಂದಿದೆ. ಕೊರೊನಾ ನಿಯಂತ್ರಣಕ್ಕೆ ಧರ್ಮಸಭೆಯಲ್ಲಿ ಪಾಲ್ಗೊಂಡವರು ಪೊಲೀಸರಿಗೆ ಸಹಕರಿಸಬೇಕು‌' ಎಂದು ಮನವಿ ಮಾಡಿದ್ದಾರೆ.

ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ. ಇತ್ತ ಸೋಂಕಿತ ತಬ್ಲಿಘಿಗಳ ಟ್ರಾವೆಲ್ ಹಿಸ್ಟರಿ ಜಿಲ್ಲಾಡಳಿತದ ನಿದ್ದೆಗೆಡೆಸಿದೆ. ಇನ್ನಾದರೂ ಜನ ಎಚ್ಚೆತ್ತುಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

First published: April 10, 2020, 8:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading