HOME » NEWS » Coronavirus-latest-news » BED BOOKING SCAM IN BANGALORE NEWS18 OPERATION THAT EXPOSED THE ACCUSED HTV MAK

Bed Booking Scam: ಬೆಂಗಳೂರಿನ ಬೆಡ್ ಬುಕ್ಕಿಂಗ್ ಸ್ಕ್ಯಾಮ್; ನಯವಂಚಕನನ್ನು ಬಯಲು ಮಾಡಿದ ನ್ಯೂಸ್​18 ಕಾರ್ಯಾಚರಣೆ!

ಈ ನಯವಂಚಕ ಮಂಜು ಬೆಂಗಳೂರಿನ ಮಂದಿಗೆ ಮಾತ್ರವಲ್ಲ ದೂರದ ಅಮೆರಿಕಾದಲ್ಲಿ ನೆಲೆಸಿರುವ ಮೂವರು, ಹೈದರಾಬಾದ್‌ನಲ್ಲಿರುವ ಒಬ್ಬರು, ಮಹಾರಾಷ್ಟ್ರದ ಒಬ್ಬರಿಗೂ ವಂಚಿಸಿದ್ದಾನೆ.

news18-kannada
Updated:May 10, 2021, 8:58 PM IST
Bed Booking Scam: ಬೆಂಗಳೂರಿನ ಬೆಡ್ ಬುಕ್ಕಿಂಗ್ ಸ್ಕ್ಯಾಮ್; ನಯವಂಚಕನನ್ನು ಬಯಲು ಮಾಡಿದ ನ್ಯೂಸ್​18 ಕಾರ್ಯಾಚರಣೆ!
ಆರೋಪಿ ಮಂಜು.
  • Share this:
ಬೆಂಗಳೂರಿನ ಆಸ್ಪತ್ರೆಗಳಲ್ಲಿ ಬೆಡ್ ಬ್ಲಾಕ್ ಹಗರಣ ಮರೆಯಾಗುವ ಮುನ್ನವೇ ಬೆಡ್ ಬುಕ್ಕಿಂಗ್ ಹಗರಣ ಬೆಳಕಿಗೆ ಬಂದಿದೆ. ತೆರೆ ಮರೆಯಲ್ಲಿ ನಡೆಯುತ್ತಿದ್ದ ಈ ಹಗರಣವನ್ನು ನ್ಯೂಸ್ 18 ಕನ್ನಡ ಬಯಲಿಗೆಳೆದಿದೆ. ಹೌದು, ಕೊರೋನಾ ಸೋಂಕು ತಗುಲಿ ಹೇಗಪ್ಪಾ ಜೀವ ಉಳಿಸಿಕೊಳ್ಳುವುದು? ಅಂತ ನರಳಾಡುತ್ತಿರುವ ಸೋಂಕಿತರು, ಕೋವಿಡ್ ಸೋಂಕಿನಿಂದ ಜೀವನ್ಮರಣದ ಮಧ್ಯೆ ಹೋರಾಡುತ್ತಿರುವ ಅಪ್ಪ, ಅಮ್ಮ, ತಂಗಿ, ಅಕ್ಕ, ತಮ್ಮ, ಅಣ್ಣ, ಗೆಳೆಯರನ್ನು ಬದುಕಿಸಿಕೊಳ್ಳಲು ಹೋರಾಡುತ್ತಿರುವ ಜನರನ್ನೇ ಟಾರ್ಗೆಟ್ ಮಾಡಿಕೊಂಡು ವಂಚಿಸುತ್ತಿದ್ದ ಖತರ್ನಾಕ್ ವ್ಯಕ್ತಿಯ ಮುಖವಾಡವನ್ನು ನ್ಯೂಸ್ 18 ಕನ್ನಡ ಇದೀಗ ಬಯಲು ಮಾಡಿದೆ.

ಈತನ ಹೆಸರು ಮಂಜು. ಕೊರೋನಾ ಸೋಂಕಿತರು ಮತ್ತವರ ಕುಟುಂಬದವರೇ ಈತನ ಟಾರ್ಗೆಟ್. ತಾನೇ ಒಂದು ವೈರಲ್ ಪೋಸ್ಟ್ ಮಾಡಿ ಕೊರೋನಾ ಸೋಂಕಿತರಿಗೆ ಬೆಡ್‌ಗಳು ಲಭ್ಯವಿದೆ, ಬೇಕಾದಲ್ಲಿ ಈ ನಂಬರ್‌ಗೆ ಕರೆ ಮಾಡಿ ಎಂದು ತನ್ನ 80500 88100 ಮೊಬೈಲ್ ನಂಬರ್ ಹಾಕಿದ್ದ. ಅದು ವಾಟ್ಸಾಪ್‌ನಲ್ಲಿ ನೂರಾರು ಗ್ರೂಪ್‌ಗಳಲ್ಲಿ, ಸಾವಿರಾರು ಜನರನ್ನು ತಲುಪಿತ್ತು. ಆಗ ಕೊರೋನಾ ಸೋಂಕಿತರ ಸಂಬಂಧಿಕರು, ಗೆಳೆಯರು ಈತನನ್ನು ಬೆಡ್‌ಗಾಗಿ ಸಂಪರ್ಕಿಸತೊಡಗಿದರು.

ಹಾಗೇ ಬೇರೆ ಬೇರೆ ವಾಟ್ಸಾಪ್ ಗ್ರೂಪ್‌ಗಳಲ್ಲಿ ಐಸಿಯು, ವೆಂಟಿಲೇಟರ್, ಬೆಡ್, ಆಕ್ಸಿಜನ್ ಅವಶ್ಯಕತೆಯಿದೆ ಎಂದು ರೋಗಿಗಳ ಮಾಹಿತಿಯನ್ನೂ ಶೇರ್ ಮಾಡಲಾಗುತ್ತಿತ್ತು. ಇನ್ನು ಬೆಂಗಳೂರಿನಾದ್ಯಂತ ಕೊರೋನಾ ರೋಗಿಗಳು ಬೆಡ್‌ಗಳು ಸಿಗದೇ ಜನ ಪರದಾಡುತ್ತಿದ್ದ ಕಾರಣ, ಈತ ಹೆಣೆದಿದ್ದ ಬಲೆಗೆ ಈಸಿಯಾಗಿ ಅಮಾಯಕರು ಬಂದು ಸಿಲುಕಿಕೊಂಡು ಬಿಡುತ್ತಿದ್ದರು.

ಹೀಗೆ ಈತ ಯಾರನ್ನೇ ಸಂಪರ್ಕಿಸಲಿ, ಈತನನ್ನು ಯಾರೇ ಸಂಪರ್ಕಿಸಲಿ, ಎಲ್ಲರ ಬಳಿ ಬೆಡ್‌ಗಳು ಲಭ್ಯವಿದೆ. ಆದರೆ ಇವತ್ತಲ್ಲ, ನಾಳೆ ಸಿಗಲಿದೆ ಅಂತ ಸುಳ್ಳು ಹೇಳುತ್ತಿದ್ದ. ಹಾಗೇ ಅದನ್ನು ಬೇರೆಯವರಿಗಿಂತ ಮುನ್ನವೇ ಬುಕ್ ಮಾಡಿಕೊಳ್ಳಬೇಕು, ಅದಕ್ಕೆ ಅಡ್ವಾನ್ಸ್ ಹಣ ನೀಡಬೇಕು ಎಂದೂ ಪುಸಲಾಯಿಸುತ್ತಿದ್ದ. ಆಸ್ಪತ್ರೆಗಳಲ್ಲಿ ಬೆಡ್ ಸಿಕ್ಕು ಜೀವ ಉಳಿದರೆ ಸಾಕು ಎನ್ನುತ್ತಿದ್ದ ಮಂದಿ ಈತನ ಮಾತಿಗೆ ಮರುಳಾಗಿಬಿಡುತ್ತಿದ್ದರು.

ಅವರಿಂದ 2 ಸಾವಿರ ರೂಪಾಯಿಯಿಂದ 12 ಸಾವಿರ ರೂಪಾಯಿವರೆಗೂ ಪೀಕುತ್ತಿದ್ದ. ಹಾಗೇ ನಾಳೆ, ನಾಳೆ ಅಂತ ಎರಡು ದಿನಗಳ ಕಾಲ ಮುಂದಕ್ಕೆ ತಳ್ಳಿ, ನಂಬರ್ ಸ್ವಿಚ್ಡ್ ಆಫ್ ಮಾಡಿಕೊಂಡುಬಿಡುತ್ತಿದ್ದ. ಕೊನೆಗೆ ಈತನಿಗೆ ಕರೆ ಮಾಡಿ ಸಾಕಾಗಿ ತಮ್ಮವರನ್ನು ಉಳಿಸಿಕೊಳ್ಳಲು ಬೇರೆ ಪ್ರಯತ್ನಗಳನ್ನು ಮಾಡುವ ದುಸ್ಥಿತಿ ವಂಚನೆಗೆ ಒಳಗಾದವರದು.

ಹೀಗೆ ಈ ನಯವಂಚಕ ಮಂಜು ಬೆಂಗಳೂರಿನ ಮಂದಿಗೆ ಮಾತ್ರವಲ್ಲ ದೂರದ ಅಮೆರಿಕಾದಲ್ಲಿ ನೆಲೆಸಿರುವ ಮೂವರು, ಹೈದರಾಬಾದ್‌ನಲ್ಲಿರುವ ಒಬ್ಬರು, ಮಹಾರಾಷ್ಟ್ರದ ಒಬ್ಬರಿಗೂ ವಂಚಿಸಿದ್ದಾನೆ. ಬೆಂಗಳೂರಿನಲ್ಲಿರುವ ತಮ್ಮ ತಾಯಿ, ಅಜ್ಜಿಗೆ ಕೊರೋನಾ ಸೋಂಕು ತಗುಲಿದ್ದ ಕಾರಣ ಅವರಿಗೆ ಆಸ್ಪತ್ರೆಗಳಲ್ಲಿ ಬೆಡ್ ಹುಡುಕುತ್ತಿದ್ದ ಸಂದರ್ಭದಲ್ಲಿ ಈತನ ನಂಬರ್ ಸಿಕ್ಕಿದ್ದು, ಈತನನ್ನು ಸಂಪರ್ಕಿಸಿ ಮೋಸ ಹೋಗಿದ್ದಾರೆ.

ಇದನ್ನೂ ಓದಿ: Vaccine: ಕೊವಾಕ್ಸೀನ್ ಮುಗಿದಿದೆ, ಕೋವಿಶೀಲ್ಡ್​ 4 ದಿನದಲ್ಲಿ ಖಾಲಿಯಾಗಲಿದೆ; ದೆಹಲಿ ಸಚಿವ ಸತ್ಯೇಂದ್ರ ಜೈನ್ ಕಳವಳಇದೇ ರೀತಿ ಬೆಂಗಳೂರಿನಾದ್ಯಂತ ಬರೋಬ್ಬರಿ 100ಕ್ಕೂ ಹೆಚ್ಚು ಜನರಿಗೆ ಈ ಮಂಜು ವಂಚಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ತಮ್ಮವರ ಜೀವ ಉಳಿಸಿಕೊಳ್ಳಲು ಹೋರಾಡುತ್ತಿರುವ ಕಾರಣ ಯಾರೂ ಈತನ ವಿರುದ್ಧ ಪೊಲೀಸರಿಗೆ ದೂರು ನೀಡಲು ಮುಂದಾಗಿಲ್ಲ. ಅದೇ ಈತನಿಗೆ ವರದಾನವೂ ಆಗಿದ್ದು, ತನ್ನ ಮೋಸದ ಜಾಲದಲ್ಲಿ ಅಮಾಯಕರ ಬೇಟೆಯಾಡುತ್ತಿದ್ದಾನೆ. ಅದೇನೇ ಇರಲಿ ಕೊವಿಡ್‌ನಂತಹ ಕಷ್ಟಕಾಲವನ್ನೇ ಇಂತಹ ನಯವಂಚಕರು ತಮ್ಮ ಬಂಡವಾಳ ಮಾಡಿಕೊಂಡು ಮೋಸ ಮಾಡುತ್ತಿದ್ದಾರೆ.
Youtube Video

ನಯವಂಚಕ ಮಂಜು ಮಾತ್ರವಲ್ಲ, ಕೊರೋನಾ ಕಾಲದಲ್ಲಿ ಈ ಸಂಕಷ್ಟವನ್ನು ಬಳಸಿಕೊಂಡು ತುಂಬಾ ಜನ ಹಣ ಮಾಡಿಕೊಳ್ಳುತ್ತಿದ್ದಾರೆ, ಬಡ ಜನರನ್ನೂ ದೋಚುತ್ತಿದ್ದಾರೆ. ಹೀಗಾಗಿ ಇಂತಹ ದುಷ್ಟ ಜಾಲಗಳನ್ನು ಶೀಘ್ರದಲ್ಲಿ  ಪೊಲೀಸರು ಮಟ್ಟ ಹಾಕಬೇಕಿದೆ.
Published by: MAshok Kumar
First published: May 10, 2021, 8:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories