ಬೆಂಗಳೂರು (ಮೇ 26); ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮತ್ತು ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕೇಸ್ ದಾಖಲಿಸಿ, ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಕಾಂಗ್ರೆಸ್ ವತಿಯಿಂದ ಇಂದು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ. ಈ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಮತ್ತು ಶಾಸಕ ಸತೀಶ್ ರೆಡ್ಡಿ ಕೂಡ ಸಹಭಾಗಿಯಾಗಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್, "ಸತೀಶ್ ರೆಡ್ಡಿ ಅಪ್ತ ಬಾಬು ಹಿಂದೆ ಈ ಇಬ್ಬರು ನಾಯಕರಿದ್ದಾರೆ. ಅಲ್ಲದೆ, ಪ್ರಕರಣ ಬೆಳಕಿಗೆ ಬರುವ ಮುನ್ನವೇ ಬಿಜೆಪಿ ಕಾರ್ಯಕರ್ತರು ಐಎಎಸ್ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದಾರೆ ಹೀಗಾಗಿ ಪೊಲೀಸ್ ಆಯುಕ್ತರು ಈ ಕ್ರಪರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕು" ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.
ಇದೇ ವೇಳೆ ಖಾಸಗಿ ಆಸ್ಪತ್ರೆಯಲ್ಲಿ ಹಣ ಕೊಟ್ಟು ಲಸಿಕೆ ಹಾಕಿಸಿಕೊಳ್ಳಿ ಎಂದು ಖಾಸಗಿ ಆಸ್ಪತ್ರೆಯ ಪರ ಬಹಿರಂಗ ಪ್ರಚಾರಕ್ಕೆ ಮುಂದಾಗಿರುವ ಸಂಸದ ತೇಜಸ್ವಿ ಸೂರ್ಯ ಅವರ ನಡೆಯನ್ನು ವ್ಯಾಪಕವಾಗಿ ಟೀಕಿಸಿರುವ ಕಾಂಗ್ರೆಸ್ ನಾಯಕರು, "ಉಚಿತ ಲಸಿಕೆ ವಿತರಣೆ ಮಾಡುವುದಾಗಿ ಹೇಳಿ, ಈಗ ಖಾಸಗಿ ಆಸ್ಪತ್ರೆಗಳಲ್ಲಿ ಹಣಕ್ಕೆ ಲಸಿಕೆ ಮಾರಾಟವಾಗುತ್ತಿದೆ. ಇದರ ಹಿಂದೆಯೂ ಶಾಸತ ಸತೀಶ್ ರೆಡ್ಡಿ ಮತ್ತು ಸಂಸದ ತೇಜಸ್ವಿ ಸೂರ್ಯ ಅವರ ಕೈವಾಡ ಇದೆ ಹೀಗಾಗಿ ಈ ಇಬ್ಬರನ್ನೂ ಬಂಧಿಸಿ ವಿಚಾರಣೆ ನಡೆಸಬೇಕು" ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಖಾಸಗಿ ಆಸ್ಪತ್ರೆ ಪರ ಪ್ರಚಾರಕ್ಕಿಳಿದ ಸಂಸದ ತೇಜಸ್ವಿ ಸೂರ್ಯ:
ಚಾಮರಾಜನಗರದಲ್ಲಿ ಆಕ್ಸಿಜನ್ ಪೂರೈಕೆ ಇಲ್ಲದೆ 24 ಜನ ಕೊರೋನಾ ರೋಗಿಗಳು ಮೃತಪಟ್ಟ ಎರಡು ದಿನಗಳಲ್ಲೇ ಬೆಡ್ ಬ್ಲಾಕಿಂಗ್ ದಂಧೆಯನ್ನು ಬಯಲಿಗೆ ಎಳೆದಿದ್ದವರು ಸಂಸದ ತೇಜಸ್ವಿ ಸೂರ್ಯ. ಹತ್ತಾರು ವಿಮರ್ಶೆಗಳ ನಡುವೆಯೂ ಅವರ ಕೆಲಸ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ನಡುವೆ ಕೋವಿಡ್ ವಾರ್ ರೂಮ್ಗೆ ದಾಳಿ ಇಟ್ಟಿದ್ದ ಅವರು ಒಂದೇ ಸಮುದಾಯದ 16 ಜನರ ಹೆಸರನ್ನು ಉಲ್ಲೇಖಿಸಿ, "ಇದೇನು ಹಜ್ ಭವನವೇ?" ಎಂದು ಪ್ರಶ್ನೆ ಮಾಡಿದ್ದರು. ಅವರ ಈ ವರ್ತನೆ ಸಮಾಜದ ನಡುವೆ ಎರಡು ಕೋಮುಗಳ ನಡುವೆ ಕಂದಕ ಉಂಟು ಮಾಡುವ ಕೆಲಸ ಎಂಬ ಟೀಕೆಗೆ ಒಳಗಾಗಿತ್ತು.
Mr.@Tejasvi_Surya stop this business on Hindu bodies...@INCKarnataka ready to give 100crores for vaccine...
Use it n save indians....#LetCongressVaccinate pic.twitter.com/SyPviL3yhI
— INC Bangalore South District (@INCBangaloreSo1) May 25, 2021
ದೇಶದಲ್ಲಿ ಪ್ರಸ್ತುತ ಕೊರೋನಾ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಆದರೆ, 18 ವರ್ಷಕ್ಕೆ ಮೇಲ್ಪಟ್ಟ ಸುಮಾರು 80 ಕೋಟಿಗೂ ಅಧಿಕ ಜನರಿಗೆ ಲಸಿಕೆ ನೀಡುವುದು ಸದ್ಯಕ್ಕಂತು ಆಗದ ಕೆಲಸ ಎಂಬಂತಾಗಿದೆ. ಲಸಿಕೆ ಕಾರ್ಯಕ್ರಮ ಎಲ್ಲಾ ರಾಜ್ಯದಲ್ಲೂ ಕುಂಟುತ್ತಾ ಸಾಗಿದೆ. ಲಸಿಕೆ ಲಭ್ಯವಿಲ್ಲದ ಬಗ್ಗೆ, ಪೂರೈಕೆ ಬೇಕು ಎಂದು ರಾಜ್ಯಗಳು ಕೇಂದ್ರವನ್ನು ಒತ್ತಾಯಿಸುತ್ತಿವೆ. ಇವುಗಳ ಮಧ್ಯೆ ಸಂಸದ ತೇಜಸ್ವಿ ಸೂರ್ಯ, ಖಾಸಗಿ ಆಸ್ಪತ್ರೆಯಲ್ಲಿ ಹಣ ನೀಡಿ ಲಸಿಕೆ ಪಡೆದುಕೊಳ್ಳಿ ಎಂದು ಪ್ರಚಾರ ನಡೆಸಿದ್ದಾರೆ. ಈ ಬ್ಯಾನರ್‌ಗಳು ಜಯನಗರದ ಮೈದಾನದಲ್ಲಿ ಹಾಕಲಾಗಿವೆ.
ರಾಜ್ಯದಲ್ಲಿ ಲಸಿಕೆ ರಾಜಕೀಯ ಮುಂದುವರೆದಿದ್ದು, 'ತೇಜಸ್ವಿ ಸೂರ್ಯ ಕಚೇರಿಯಿಂದ ಬೆಂಬಲಿತವಾಗಿದೆ' ಎಂಬ ಪೋಸ್ಟರ್ ಜಯನಗರದ ಬಿಬಿಎಂಪಿ ಕೇಂದ್ರದ ಪಕ್ಕದಲ್ಲಿ ಕಾಣಿಸಿಕೊಂಡಿವೆ. ಶಾಲಿನಿ ಮೈದಾನದಲ್ಲಿ ವಾಸವಿ ಆಸ್ಪತ್ರೆಯಲ್ಲಿ 900 ರೂಪಾಯಿಗೆ ಲಸಿಕೆ ನೀಡಲಾಗುತ್ತದೆ ಎಂಬ ಬ್ಯಾನರ್‌ಗಳು ಕಾಣಿಸಿಕೊಂಡಿವೆ. ಎಲ್ಲಾ ಬ್ಯಾನರ್‌ಗಳಲ್ಲಿಯೂ ಸಂಸದ ತೇಜಸ್ವಿ ಸೂರ್ಯ ಬೆಂಬಲಿತ ಎಂಬ ಬರಹ ಮತ್ತು ಅವರ ಫೋಟೋ ಹಾಕಲಾಗಿದೆ. ಈ ಪೋಸ್ಟರ್‌ಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಹಲವು ನೆಟ್ಟಿಗರು ತಮ್ಮ ಖಾತೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಇರುವ ಬ್ಯಾನರ್‌ಗಳನ್ನು ಹಂಚಿಕೊಂಡು, ಇಂತಹ ರಾಜಕಾರಣ ಬಿಡಿ, ಜನರು ಲಸಿಕೆ ಇಲ್ಲದೆ ಆತಂಕದಲ್ಲಿರುವಾಗ ಖಾಸಗಿ ಆಸ್ಪತ್ರೆಯ ಲಸಿಕೆ ಅಭಿಯಾನ ಹೇಗೆ ಬೆಂಬಲಿಸುತ್ತಿರಿ ಎಂದು ಪ್ರಶ್ನಿಸಿದ್ದಾರೆ.
At Shalini grounds Vasavi Hospital vaccinating public by taking ₹900/-.The entire program credit is taken by BLR South MP @Tejasvi_Surya.
When there is no vaccine @ BBMP how can MP promote private Hospital? How much commission is he getting?Vasavi should show procurement invoice pic.twitter.com/04cIgO4J84
— Bhushan (@bhushannag) May 24, 2021
When BJP MPs like Tejasvi Surya can tie up with Private Hospitals & charge ₹900 per dose,
Why is Govt not allowing Congress MP, MLAs to procure Vaccines using MP/MLADS and Party Funds amounting to ₹100 crores to give Vaccination for FREE? Why this bias?#LetCongressVaccinate pic.twitter.com/Q5nCpmNJDv
— Srivatsa (@srivatsayb) May 25, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ