ಕೊರೋನಾ ವೈರಸ್ ಭೀತಿ; ಇಂದಿನಿಂದ ಬೆಂಗಳೂರಿನಲ್ಲಿ ಔಷಧಿ ಸಿಂಪಡಣೆ ಕಾರ್ಯ ಶುರು

ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಹಾಗೂ ಮೇಯರ್ ಗೌತಮ್ ಕುಮಾರ್​  ಔಷಧಿ ಸಿಂಪಡಣೆ ಕಾರ್ಯಕ್ಕೆ ಇಂದು ಚಾಲನೆ ನೀಡಿದರು. ಬಿಬಿಎಂಪಿಯಿಂದ ಟೌನ್​​ಹಾಲ್, ಕೆ.ಆರ್. ಮಾರ್ಕೆಟ್ ವೃತ್ತದವರೆಗೂ ಔಷಧಿ ಸಿಂಪಡಣೆ ಕಾರ್ಯ ನಡೆಯಿತು.

ಬಿಬಿಎಂಪಿ ಔಷಧಿ ಸಿಂಪಡಣೆ ಮಾಡುತ್ತಿರುವುದು

ಬಿಬಿಎಂಪಿ ಔಷಧಿ ಸಿಂಪಡಣೆ ಮಾಡುತ್ತಿರುವುದು

  • Share this:
ಬೆಂಗಳೂರು (ಮಾ.24): ರಾಜ್ಯದಲ್ಲಿ ಕೊರೋನಾ ಭೀತಿ ಹೆಚ್ಚುತ್ತಲೇ ಇದೆ. ಸೋಂಕಿತರ ಸಂಖ್ಯೆ ನಿತ್ಯ ಏರಿಕೆ ಗತಿಯಲ್ಲಿ ಸಾಗುತ್ತಿದೆ. ಇವುಗಳ ನಿಯಂತ್ರಣಕ್ಕೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಈ ಮಧ್ಯೆ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಬೆಂಗಳೂರಿನಲ್ಲಿ ಔಷಧಿ ಸಿಂಪಡಣೆ ಕಾರ್ಯ ಆರಂಭಗೊಂಡಿದೆ.

ಬಿಬಿಎಂಪಿವತಿಯಿಂದ ಕೊರೋನಾ ವೈರಸ್ ತಡೆಗಟ್ಟಲು ಔಷಧಿ ಸಿಂಪಡಣೆ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಡ್ರೋನ್ ಮೂಲಕ ಬಿಬಿಎಂಪಿ ಆವರಣದಲ್ಲಿ ಔಷಧಿ ಸಿಂಪಡಣೆ‌ ಮಾಡಲಾಯಿತು. ಈ ಕಾರ್ಯಕ್ಕೆ 4 ಜೆಟ್ಟಿಂಗ್ ಟ್ಯಾಂಕರ್​ ಬಳಕೆ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ.

ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಹಾಗೂ ಮೇಯರ್ ಗೌತಮ್ ಕುಮಾರ್​  ಔಷಧಿ ಸಿಂಪಡಣೆ ಕಾರ್ಯಕ್ಕೆ ಇಂದು ಚಾಲನೆ ನೀಡಿದರು. ಬಿಬಿಎಂಪಿಯಿಂದ ಟೌನ್​​ಹಾಲ್, ಕೆ.ಆರ್. ಮಾರ್ಕೆಟ್ ವೃತ್ತದವರೆಗೂ ಔಷಧಿ ಸಿಂಪಡಣೆ ಕಾರ್ಯ ನಡೆಯಿತು. ಮುಂದಿನ ದಿನಗಳಲ್ಲಿ ಸಂಪೂರ್ಣ ಬೆಂಗಳೂರಿಗೆ ಔಷಧಿ ಸಿಂಪಡಣೆ ಕಾರ್ಯ ನಡೆಯಲಿದೆ.

ಈ ಬಗ್ಗೆ ಮಾಹಿತಿ ನೀಡಿದ ಗೌತಮ್ ಕುಮಾರ್, “ನೀರಿನ ಜೊತೆ ಸೋಡಿಯಂ ಫ್ಲೋರೈಡ್ ಮಿಶ್ರಣ ಮಾಡಿ ಸಿಂಪಡಣೆ ಮಾಡಲಾಗುತ್ತಿದೆ‌. ಕೇವಲ ಕೊರೋನಾ ಅಷ್ಟೇ ಅಲ್ಲಾ, ಬೇರೆ ಕಾಯಿಲೆಗಳು ಬರದಂತೆ ಮುಂಜಾಗ್ರತೆ ವಹಿಸಲು ಈ ರೀತಿ ಮಾಡಿದ್ದೇವೆ. ಇಂದಿನಿಂದ ಈ ಔಷಧವನ್ನು ನಗರದೆಲ್ಲೆಡೆ ಸಿಂಪಡಣೆ ಮಾಡುತ್ತೇವೆ,” ಎಂದರು ಅವರು.

ಇದನ್ನೂ ಓದಿ: ಬೀದಿಗೆ ಬಂದವರ ಮೇಲೆಲ್ಲಾ ಲಾಠಿಚಾರ್ಚ್ ಮಾಡಿಸುವ ಮಾನಗೆಟ್ಟ ಸರ್ಕಾರವಿದು; ಸಿದ್ದರಾಮಯ್ಯ ವಾಗ್ದಾಳಿ

“ಔಷಧಿ ಸಿಂಪಡಣೆ ಕಾರ್ಯಕ್ಕೆ ನಾವು ಅಗ್ನಿಶಾಮಕ ಇಲಾಖೆಯ ಸಹಾಯ ಕೋರಿದ್ದೇವೆ. ಜಲಮಂಡಳಿಯಿಂದ ವಾಹನಗಳನ್ನ ಬಳಸಿಕೊಂಡು ಕಾರ್ಯಾಚರಣೆ ಮಾಡಲಾಗುತ್ತಿದೆ. ಬೆಂಗಳೂರು ನಗರದಲ್ಲಿ ಆರೋಗ್ಯ ಇಲಾಖೆ ಹೆಚ್ಚು ಕೆಲಸ ಮಾಡುತ್ತಿದೆ,” ಎಂದು ಮೇಯರ್​ ಗೌತಮ್​ ಶ್ಲಾಘಿಸಿದರು.

ಇನ್ನು, ಕೊರೋನಾ ವೈರಸ್​ ಅಂಟಿದ ಸಾಕಷ್ಟು ಜನರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಜಿಯೋ ಮ್ಯಾಪಿಂಗ್ ಬಳಸಿ ಹೋಮ್ ಕ್ವಾರಂಟೈನ್​​ಲ್ಲಿರುವ ಮನೆಗಳ ಬಳಿಯೂ ಡ್ರೋನ್​​ ಮೂಲಕ ಔಷಧಿ ಸಿಂಪಡಣೆ ಮಾಡಲು ನಿರ್ಧರಿಸಲಾಗಿದೆ.
First published: