Bengaluruನಲ್ಲಿ ಕೊರೊನಾ ಹೊಸ ತಳಿ ಕಂಡು ಬಂದಿದ್ಯಾ? ಊಹಾಪೋಹಗಳಿಗೆ ಉತ್ತರ ನೀಡಿದ BBMP ಆರೋಗ್ಯ ಇಲಾಖೆ ವಿಶೇಷ ಆಯುಕ್ತ

ಕೊರೊನಾ 4ನೇ‌ ಅಲೆ ಹಿನ್ನೆಲೆ ಮತ್ತೆ ಸಿಬ್ಬಂದಿ ಮರುನಿಯೋಜನೆ ಮಾಡಬೇಕಿದೆ. ಮೂರನೆಯ ಅಲೆಯಲ್ಲಿ ಮಾರ್ಚ್ ಅಂತ್ಯದಲ್ಲಿ ಕೋವಿಡ್ ಸಿಬ್ಬಂದಿಯನ್ನು ವಾಪಸ್ ಮಾಡಲಾಗಿತ್ತು. ಸಿಬ್ಬಂದಿಗಳು , ಡಾಕ್ಟರ್ ಹಾಗೂ  ವಾಹನಗಳ ಅವಶ್ಯಕತೆ ಇದೆ. ಹಂತ ಹಂತವಾಗಿ ಸಿಬ್ಬಂದಿ ಮರು ನಿಯೋಜನೆ ಮಾಡಲಾಗುವುದು ಎಂದು ಹೇಳಿದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಜೂನ್ ಕೊನೆಯ ಅಥವಾ ಜುಲೈ ಮೊದಲ ವಾರದಲ್ಲಿ ಕೊರೊನಾ ನಾಲ್ಕನೇ ಅಲೆ (Corona 4th Wave) ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತಿದೆ. ಈ ಎಲ್ಲದರ ನಡುವೆ ಕೆಲ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ರೆಕ್ಕೆ ಪುಕ್ಕ ಬಿಚ್ಚಿಕೊಂಡು ಹರಿದಾಡುತ್ತಿವೆ. ಇದೀಗ ಈ ಸಂಬಂಧ ಬಿಬಿಎಂಪಿ ಆರೋಗ್ಯ ಇಲಾಖೆ ವಿಶೇಷ ಆಯುಕ್ತ ತ್ರಿಲೋಕ್ ಚಂಂದ್ರ (BBMP Special Commissioner Trilok Chandra) ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ (Bengaluru) ಕೊರೊನಾ ನಿಯಮಗಳ (Corona Rules) ಪಾಲನೆಯಲ್ಲಿ ಬಹಳ ಕೊರತೆ ಇದೆ. ಮಾಸ್ಕ್ (Mask) ಹಾಕಿಕೊಳ್ಳದೇ ಇರೋದು, ಸಾಮಾಜಿಕ ಅಂತರ ಪಾಲನೆ (Social Distance) ಮಾಡದೆ ಇರೋದು ಕಂಡು ಬರುತ್ತಿದೆ. ಹರಿಯಾಣ, ಡೆಲ್ಲಿ, ನೋಯ್ಡಾ ಭಾಗಗಳಲ್ಲಿ ಅತೀ ಹೆಚ್ಚು ಕೇಸ್ ಗಳು ಬರ್ತಾ ಇದೆ. ಹಾಗಾಗಿ ಕೊರೊನಾ ನಿಯಮಗಳನ್ನು ‌ಮತ್ತೆ ಪಾಲನೆ ಮಾಡುವಂತೆ ಆಗಬೇಕು ಎಂದು ಹೇಳಿದರು.

ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆಯಬೇಕು. ಬೂಸ್ಟರ್ ಡೋಸ್ ಗೆ ಎಲಿಜಿಬಲ್ ಇರೋರು ಸಹ ತಕ್ಷಣವೇ ಡೋಸ್ ಪಡೆಯಬೇಕು. ಕೊರೊನಾ ಟೆಸ್ಟಿಂಗ್ ಹೆಚ್ಚಳ ಮಾಡುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸದ್ಯ ಪ್ರತಿದಿನ ಮೂರರಿಂದ ನಾಲ್ಕು  ಸಾವಿರ ಟೆಸ್ಟಿಂಗ್ ಮಾಡಲಾಗುತ್ತಿದೆ. 10 ಸಾವಿರ ಟೆಸ್ಟಿಂಗ್ ಮಾಡಲು ಸೂಚನೆ ನೀಡಲಾಗಿದೆ. 12 -14 ವಯೋಮಾನದವರು ಶೇಕಡ 50 ರಷ್ಟು ಲಸಿಕೆ ಹಾಕಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:  Corona Vaccine: ಮುಂದಿನ ದಿನಗಳಲ್ಲಿ ವರ್ಷಕ್ಕೊಂದು ಡೋಸ್ ಪಡೆಯಬೇಕಾ? ಸಚಿವ ಸುಧಾಕರ್ ಹೇಳಿದ್ದು ಹೀಗೆ

ಸಿಬ್ಬಂದಿಯ ಮರು ನಿಯೋಜನೆ

ಕೊರೊನಾ 4ನೇ‌ ಅಲೆ ಹಿನ್ನೆಲೆ ಮತ್ತೆ ಸಿಬ್ಬಂದಿ ಮರುನಿಯೋಜನೆ ಮಾಡಬೇಕಿದೆ. ಮೂರನೆಯ ಅಲೆಯಲ್ಲಿ ಮಾರ್ಚ್ ಅಂತ್ಯದಲ್ಲಿ ಕೋವಿಡ್ ಸಿಬ್ಬಂದಿಯನ್ನು ವಾಪಸ್ ಮಾಡಲಾಗಿತ್ತು. ಸಿಬ್ಬಂದಿಗಳು , ಡಾಕ್ಟರ್ ಹಾಗೂ  ವಾಹನಗಳ ಅವಶ್ಯಕತೆ ಇದೆ. ಹಂತ ಹಂತವಾಗಿ ಸಿಬ್ಬಂದಿ ಮರು ನಿಯೋಜನೆ ಮಾಡಲಾಗುವುದು ಎಂದು ಹೇಳಿದರು.

ಸದ್ಯ 60 ಡಾಕ್ಟರ್ , 150 ಸ್ವಾಬ್ ಕಲೆಕ್ಟರ್  ಮೊದಲ ಹಂತದಲ್ಲಿ ತೆಗೆದುಕೊಳ್ಳಲಾಗುವುದು. ಟೆಸ್ಟಿಂಗ್, ಚಿಕಿತ್ಸೆ ಹೆಚ್ಚು ಮಾಡಲು ಸಿಬ್ಬಂದಿ ಅಗತ್ಯವಿದೆ.

ಯಾವುದೇ ಕೊರೊನಾ ಹೊಸ ತಳಿ ಪತ್ತೆಯಾಗಿಲ್ಲ

ಕೊರೊನಾ ಹೊಸ ತಳಿ ನಮ್ಮಲ್ಲಿ ಯಾವುದು ಬಂದಿಲ್ಲ. ಲ್ಯಾಬ್ ಗಳಲ್ಲಿ ಇದುವರೆಗೂ ಮಾಹಿತಿ ಅಧಿಕೃತ ಹೊಸ ತಳಿ ಪತ್ತೆಯಾಗಿಲ್ಲ ಇದುವರೆಗೂ ಓಮೈಕ್ರಾನ್ ಹೊರತುಪಡಿಸಿ ಯಾವುದೇ ಹೊಸ ತಳಿ ಪತ್ತೆ ಆಗಿಲ್ಲ ಎಂದು ಹರಿದಾಡುತ್ತಿರುವ ಊಹಾಪೋಹಗಳಿಗೆ ತೆರೆ ಎಳೆದರು.

ಕೊರೊನಾ ನಾಲ್ಕನೇ ಅಲೆಯ ಕುರಿತು ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಅಂತರಾಷ್ಟ್ರೀಯ ಮಟ್ಟದಲ್ಲಿ ಕೋವಿಡ್ ಹೆಚ್ಚಳವಾಗ್ತಿದೆ. ಪ್ರಧಾನಿಗಳು ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡ್ತಿದ್ದಾರೆ. ನಮ್ಮಲ್ಲಿ ದಿನಕ್ಕೆ 60 ರಿಂದ 80 ಕೇಸ್ ಬರ್ತಿದೆ. ಕೇಸ್ ಎಲ್ಲಿ ಬರ್ತಿದೆ, ಆಸ್ಪತ್ರೆಗೆ ದಾಖಲಾಗ್ತಿದ್ದಾರಾ, ಲಕ್ಷಣಗಳೇನು ಅನ್ನೋದನ್ನ ಮಾನಿಟರ್ ಮಾಡ್ತಿದ್ದೀವಿ ಎಂದರು.

ಕಡ್ಡಾಯ ಮಾಸ್ಕ್

ಯಾರೂ ಆಸ್ಪತ್ರೆಗೆ ದಾಖಲಾಗಿಲ್ಲ, ಲಕ್ಷಣ ಗಂಭೀರವಾಗಿಲ್ಲ. ಆದ್ರೆ ಟ್ರೆಂಡ್ ಹೇಗಿದೆ ನೋಡಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ಮಾಸ್ಕ್ ಹಿಂದಿನ ಅಲೆ ರೀತಿಯಲ್ಲೇ ಈಗಲೂ ಕಡ್ಡಾಯ ಮಾಡೋ ನಿರ್ಧಾರವನ್ನ ಸರ್ಕಾರ ತೆಗೆದು ಕೊಂಡಿದೆ.  ಮಾರ್ಷಲ್ ನೇಮಕದ ಬಗ್ಗೆ ಚಿಂತಿಸಲಾಗ್ತಿದೆ. ದಂಡ ವಿಚಾರವಾಗಿ ಸರ್ಕಾರದ ಆದೇಶಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ.

ಸದ್ಯದ ಪರಿಸ್ಥಿತಿ ಸುಧಾರಣೆಯಲ್ಲಿದೆ. ಹೊರದೇಶದಿಂದ ಬಂದವರು ಲಕ್ಷಣ ಕಂಡುಬಂದ್ರೆ ಟೆಸ್ಟ್ ಮಾಡಿಸಿಕೊಂಡು ಐಸೋಲೇಟ್ ಆಗಬೇಕು. ಪ್ರತಿಯೊಂದು ಅಲೆಯ ರೂಪವೂ ಬೇರೆಯಾಗಿರುತ್ತೆ. ಟಾಸ್ಕ್ ಪೋರ್ಸ್ ಅಡ್ವೈಸರಿ ಪ್ರಕಾರ ಕ್ರಮ ಕೈಗೊಳ್ತಿವಿ . ಜಿನೋಮ್ ಸೀಕ್ವೆನ್ಸಿಂಗ್ ನಿರಂತರವಾಗಿ ನಡೆಯುತ್ತಿದೆ.

ಇದನ್ನೂ ಓದಿ:  Corona Virus: ಮಾಸ್ಕ್ ಹಾಕದೆ ಹೊರಗೆ ಹೋಗುವಂತಿಲ್ಲ, ರಸ್ತೆಯಲ್ಲಿ ಉಗುಳಿದ್ರೂ ಬೀಳುತ್ತೆ ದಂಡ- ಸರ್ಕಾರದ ಆದೇಶ

ಬೂಸ್ಟರ್ ಡೋಸ್ ಪಡೆದುಕೊಳ್ಳಿ

ಸ್ವ ಪ್ರೇರಣೆಯಿಂದ ಎಲ್ಲರೂ ಕೊರೊನಾ ಲಸಿಕೆ ಪಡೆಯಬೇಕು. ಜನ ಬೂಸ್ಟರ್ ಡೋಸ್ ಅಗತ್ಯ ಇಲ್ಲ ಎಂದುಕೊಂಡಿದ್ದಾರೆ. ಆದ್ರೆ ಜನ ಬೂಸ್ಟರ್ ಡೋಸ್ ಪಡೆಯಬೇಕು. ವ್ಯಾಕ್ಸಿನೇಷನ್‌ ನಿಂದಾಗೇ ಮೂರನೇ ಅಲೆ ಪ್ರಭಾವ ಬೀರಿಲ್ಲ. ಹೀಗಾಗಿ ಈಗಲೂ ಬೂಸ್ಟರ್ ಡೋಸ್ ಅಗತ್ಯವಾಗಿ ಪಡೆಯಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.
Published by:Mahmadrafik K
First published: