HOME » NEWS » Coronavirus-latest-news » BBMP RESERVED SEVEN ELECTRIC CREMATORIUMS FOR COVID DEATH SESR

Covid Death: ಸೋಂಕಿತರ ಅಂತ್ಯಕ್ರಿಯೆಗೆ ರಾಜಧಾನಿಯಲ್ಲಿ 7 ಚಿತಾಗಾರ ಮೀಸಲು; ಆಂಬ್ಯುಲೆನ್ಸ್​ಗಳಿಂದ ಉಚಿತ ಸೇವೆ

ಸೋಂಕಿತರ ಅಂತ್ಯಕ್ರಿಯೆಯ ವೆಚ್ಚ ಬಿಬಿಎಂಪಿ ಭರಿಸಲಿದ್ದು, ಯಾವುದೇ ಸೋಂಕಿತರ ಕುಟುಂಬದಿಂದ ಹಣ ವಸೂಲಿ ಮಾಡುವಂತಿಲ್ಲ

news18-kannada
Updated:April 16, 2021, 8:05 PM IST
Covid Death: ಸೋಂಕಿತರ ಅಂತ್ಯಕ್ರಿಯೆಗೆ ರಾಜಧಾನಿಯಲ್ಲಿ 7 ಚಿತಾಗಾರ ಮೀಸಲು; ಆಂಬ್ಯುಲೆನ್ಸ್​ಗಳಿಂದ ಉಚಿತ ಸೇವೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಏ. 16): ಕೋವಿಡ್​ ಎರಡನೇ ಅಲೆ ಸೋಂಕು ತೀವ್ರವಾಗಿದ್ದು, ಸಾವಿನ ಸಂಖ್ಯೆಯಲ್ಲಿಯೂ ಏರುಗತಿ ಕಾಣುತ್ತಿದೆ. ಸೋಂಕಿತರ ಅಂತ್ಯ ಕ್ರಿಯೆಯನ್ನು ಕೋವಿಡ್​ ನಿಯಮಾವಳಿಯಂತೆ ಮಾಡಬೇಕಿದೆ. ಈ ಹಿನ್ನಲೆ ಬಿಬಿಎಂಪಿ ಸಿಲಿಕಾನ್​ ಸಿಟಿಯಲ್ಲಿ ಸೋಂಕಿತರ ಅಂತ್ಯ ಸಂಸ್ಕಾರಕ್ಕೆಂದೆ ಕೆಲವು ಚಿತಾಗಾರಗಳನ್ನು ಮೀಸಲಿರಿಸಿದೆ. ಚಿತಾಗರದ ಮುಂದೆ ಸೋಂಕಿತರ ಅಂತ್ಯಕ್ರಿಯೆಗೆ ಸಾಲು ಕಂಡ ಬಂದ ಹಿನ್ನಲೆ ರಾಜಧಾನಿಯಲ್ಲಿ ಸೋಂಕಿತರ ಅಂತ್ಯ ಸಂಸ್ಕಾರಕ್ಕಾಗಿ ಏಳು ವಿದ್ಯುತ್​ ಚಿತಾಗಾರ ನಿಗದಿಗೊಳಿಸಲಾಗಿದೆ. ಮೆದಿ ಅಗ್ರಹಾರ, ಕೂಡ್ಲು, ಕೆಂಗೇರಿ, ಪನಾಥೂರ್​, ಕೆಂಗೇರಿ, ಸುಮನಹಳ್ಳಿ, ಪೀಣ್ಯ ಮತ್ತು ಬನಶಂಕರಿಯಲ್ಲಿ ಮಾತ್ರ ಸೋಂಕಿತರ ಅಂತ್ಯಕ್ರಿಯೆ ನಡೆಸಬೇಕಿದೆ.

ಈ ಹಿಂದೆ ಕೇವಲ ನಾಲ್ಕು ಚಿತಾಗಾರದಲ್ಲಿ ಮಾತ್ರ ಸೋಂಕಿತರ ಅಂತ್ಯಕ್ರಿಯೆಗೆ ಅವಕಾಶ ನೀಡಲಾಗಿತ್ತು. ಅಗ್ರಹಾರ, ಕೂಡ್ಲು, ಪನಾಧೂರು, ಮತ್ತು ಕೆಂಗೇರಿ ಚಿತಾಗಾರದಲ್ಲಿ ಮಾತ್ರ ಅವಕಾಶ ನೀಡಲಾಗಿತ್ತು. ಇದರಿಂದಾಗಿ ಚಿತಾಗಾರದ ಮುಂದೆ ಅಂತ್ಯ ಸಂಸ್ಕಾರಕ್ಕೆ ಸಾಲುಗಳು ಏರ್ಪಡಾಗಗಿತ್ತು. ಇದರಿಂದ ಸಾವನ್ನಪ್ಪಿದವರ ಕುಟುಂಬದವರು ಗಂಟೆಗಟ್ಟಲೆ ಚಿತಾಗಾರದ ಮುಂದೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನಲೆ ಈ ಕ್ರಮಕ್ಕೆ ಮುಂದಾಗಲಾಗಿದೆ.




ಚಿತಾಗಾರಗಳು ಬೆಳಗ್ಗೆ 8ಗಂಟೆಯಿಂದ ರಾತ್ರಿ 8ಗಂಟೆವರೆಗೂ ಕಾರ್ಯನಿರ್ವಹಿಸುವಂತೆ ಬಿಬಿಎಂಪಿ ಆದೇಶ ನೀಡಿದೆ. ಸೋಂಕಿತರ ಅಂತ್ಯಕ್ರಿಯೆಯ ವೆಚ್ಚ ಬಿಬಿಎಂಪಿ ಭರಿಸಲಿದ್ದು, ಯಾವುದೇ ಸೋಂಕಿತರ ಕುಟುಂಬದಿಂದ ಹಣ ವಸೂಲಿ ಮಾಡುವಂತಿಲ್ಲ. ಅಲ್ಲದೇ, ಶವಸಂಸ್ಕಾರ ನಿರ್ವಹಿಸುವ ಸಿಬ್ಬಂದಿಗಳ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು. ಅಗತ್ಯ ನೈರ್ಮಲ್ಯ ಉಪಕರಣ ನೀಡಬೇಕು ಎಂದು ಸಂಬಂಧಪಟ್ಟ ವಲಯ ಅಧಿಕಾರಿಗಳಿಗೆ ಸೂಚಿಸಿದೆ.


ಸೋಂಕಿತರ ಸಂಸ್ಕಾರಕ್ಕೆ ಚಿತಾಗಾರದ ಸಿಬ್ಬಂದಿಗಳು ಸಾವಿರಾರು ರೂ ಹಣದ ಬೇಡಿಕೆ ಇರುವ ಕುರಿತು ಸಾಕಷ್ಟು ದೂರುಗಳು ಬಂದಿದ್ದವು. ಈ ಹಿನ್ನಲೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವರು, ಹಣ ಪಡೆದರೆ ಕ್ರಿಮಿನಲ್​ ದೂರು ದಾಖಲಿಸುವುದಾಗಿ ಎಚ್ಚರಿಸಿದ್ದರು. ಇದಾದ ಬಳಿಕ ಟ್ವೀಟ್​ ಮಾಡಿದ ಬಿಬಿಎಂಪಿ ಆಯುಕ್ತ ಗೌರವ್​ ಗುಪ್ತಾ,  ಸೋಂಕಿತರಿಗೆ ಆಂಬ್ಯುಲೈನ್ಸ್​ಗಳು ಉಚಿತವಾಗಿ ಸಿಗಲಿದ್ದು, ಅಂತ್ಯಕ್ರಿಯೆಯೂ ಉಚಿತವಾಗಿರಲಿದೆ ಎಂದು ಟ್ವೀಟ್​ ಮಾಡಿದ್ದರು.

ರಾಜ್ಯದಲ್ಲಿ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ರಾಜಧಾನಿಯಲ್ಲಿ ದಾಖಲೆ ಪ್ರಮಾಣದ ಪ್ರಕರಣಗಳು ದಾಖಲಾಗುತ್ತಿದೆ. ಇಂದು ರಾಜ್ಯದಲ್ಲಿ ರಾಜ್ಯದಲ್ಲಿಂದು 14859 ಪ್ರಕರಣಗಳು ಪತ್ತೆಯಾಗಿದ್ದು, ಒಂದೇ ದಿನ 78 ಜನ ಕೊರೋನಾಗೆ ಬಲಿಯಾಗಿದ್ದಾರೆ. 4031 ಮಂದಿ ಇಂದು ಗುಣಮುಖರಾಗಿ ಡಿಸ್ವಾರ್ಜ್ ಆಗಿದ್ದು, 577 ಮಂದಿಗೆ ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದೂ ಕೂಡ ಬೆಂಗಳೂರಿನಲ್ಲಿ 9917 ಕೇಸ್ ಪತ್ತೆಯಾಗಿದ್ದು, 57 ಮಂದಿ ಸಾವನ್ನಪ್ಪಿದ್ದಾರೆ.
Published by: Seema R
First published: April 16, 2021, 7:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories