• Home
  • »
  • News
  • »
  • coronavirus-latest-news
  • »
  • ಬಿಬಿಎಂಪಿ ಅಧಿಕಾರಿಗಳಿಗೆ ತಲೆನೋವಾದ ಬೆಂಗಳೂರಿನ ಕೊರೋನಾ ಸೋಂಕಿತ ಕಾರ್ಪೊರೇಟರ್

ಬಿಬಿಎಂಪಿ ಅಧಿಕಾರಿಗಳಿಗೆ ತಲೆನೋವಾದ ಬೆಂಗಳೂರಿನ ಕೊರೋನಾ ಸೋಂಕಿತ ಕಾರ್ಪೊರೇಟರ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸದ್ಯ ಪ್ರಾಥಮಿಕ ಸಂರ್ಪಕದಲ್ಲಿದ್ದ 23 ಜನರನ್ನು ಹೋಟೆಲ್​ವೊಂದರಲ್ಲಿ ಕ್ವಾರೆಂಟೈನ್ ಮಾಡಲಾಗಿದೆ. ದ್ವಿತೀಯ ಸಂಪರ್ಕದಲ್ಲಿದ್ದ 40 ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.

  • Share this:

ಬೆಂಗಳೂರು(ಜೂ.01): ಬೆಂಗಳೂರಿನ ಕೊರೋನಾ ಸೋಂಕಿತ ಕಾರ್ಪೋರೇಟರ್​​ನ ಟ್ರಾವೆಲ್​ ಹಿಸ್ಟರಿಯೇ ಈಗ ಬಿಬಿಎಂಪಿ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪಾದರಾಯನಪುರದಲ್ಲಿ‌ ಯಾರಿಂದ‌ ಕಾರ್ಪೊರೇಟರ್ ಗೆ  ಸೋಂಕು  ಬಂದಿದೆ ಎಂಬುದು ಇನ್ನು ಅಸ್ಪಷ್ಟವಾಗಿದೆ .ಈ ನಡುವೆ ಸೋಂಕಿತ ಕಾರ್ಪೋರೇಟರ್​ ಆರೋಗ್ಯ ಅಧಿಕಾರಿಗಳಿಗೆ ಸರಿಯಾಗಿ ಉತ್ತರ ನೀಡದೆ ಮನಬಂದಂತೆ ವರ್ತಿಸುತ್ತಿದ್ದಾರೆ ಎನ್ನಲಾಗಿದೆ. 

ಕೊರೋನಾ ಸೋಂಕಿತ ಕಾರ್ಪೋರೇಟರ್​ ಐಸೋಲೇಷನ್​ಗೆ ಹೋಗುವಾಗ ಮಾಡಿದ ಹೈಡ್ರಾಮದಿಂದ ಆರೋಗ್ಯ ಅಧಿಕಾರಿಗಳು ಹೈರಾಣಾಗಿದ್ದಾರೆ.  ಅವರ ಟ್ರಾವೆಲ್ ಹಿಸ್ಟರಿ ಬಗ್ಗೆ ಅಧಿಕಾರಿಗಳಿಗೆ ಗೊಂದಲವಿದ್ದು, ಸೋಂಕಿತನ ಪ್ರಾಥಮಿಕ‌ ಸಂಪರ್ಕದಲ್ಲಿದ್ದವರ ಬಗ್ಗೆ ಇನ್ನೂ ಸಹ ಖಚಿತ ಮಾಹಿತಿ ಸಿಕ್ಕಿಲ್ಲ. ಸದ್ಯ ಅವರ ಕೆಲವು ಕುಟುಂಬಸ್ಥರ ಬಗ್ಗೆ ಮಾತ್ರ ಮಾಹಿತಿ ಸಿಕ್ಕಿದ್ದು, ಅವರನ್ನು ಮಾತ್ರ ಕ್ವಾರಂಟೈನ್‌ ಮಾಡಲಾಗಿದೆ.

ಕೊರೋನಾ ಪಾಸಿಟಿವ್​ ದೃಢಪಟ್ಟಿದ್ದರೂ ಸಹ ಕಾರ್ಪೋರೇಟರ್ ಮಾತ್ರ ಐಸೋಲೇಷನ್ ವಾರ್ಡ್​​​ಗೆ ಹೋಗದೆ ಸರ್ಕಾರಿ ಕೆಲಸಕ್ಕೆ ಅಡ್ಡಿ ಮಾಡಿದ್ದರು ಎನ್ನಲಾಗಿದೆ. ರಸ್ತೆಯುದ್ದಕ್ಕೂ ಜನರನ್ನು ಗುಂಪು ಸೇರಿಸಿ ಘೋಷಣೆಗಳನ್ನು ಕೂಗಿ ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿದ್ದರು. ಜೊತೆಗೆ ಕೋವಿಡ್-19 ಪ್ರೋಟೋಕಾಲ್​ ಬ್ರೇಕ್​ ಮಾಡಿ ಗುಂಪಾಗಿ ಜನರ ಜೊತೆ ಓಡಾಡುತ್ತಿದ್ದ ಎಂದು ತಿಳಿದು ಬಂದಿದೆ. ಈ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಆಗಿತ್ತು.

ಉತ್ತರಾಖಂಡದ ಪ್ರವಾಸೋದ್ಯಮ ಸಚಿವರಿಗೆ ಕೊರೋನಾ; ಸಿಎಂ ಸೇರಿ ಎಲ್ಲಾ ಸಚಿವರು ಹೋಂ ಕ್ವಾರಂಟೈನ್​ನಲ್ಲಿ

ಇನ್ನು, ಅಷ್ಟು ಜನರಲ್ಲಿ ಸೋಂಕಿತನ ತೀರಾ ಸಂಪರ್ಕದಲ್ಲಿದ್ದವರ ಪತ್ತೆಗೆ ಅಧಿಕಾರಿಗಳು ಮುಂದಾಗಿದ್ದು,ಕ್ವಾರಂಟೈನ್​​ ಮಾಡಲು‌ ಸಿದ್ದತೆ ನಡೆಸಲಾಗಿದೆ. ಸದ್ಯ ಪ್ರಾಥಮಿಕ ಸಂರ್ಪಕದಲ್ಲಿದ್ದ 23 ಜನರನ್ನು ಹೋಟೆಲ್​ವೊಂದರಲ್ಲಿ ಕ್ವಾರೆಂಟೈನ್ ಮಾಡಲಾಗಿದೆ. ದ್ವಿತೀಯ ಸಂಪರ್ಕದಲ್ಲಿದ್ದ 40 ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.

ಇನ್ನು ಸೋಂಕಿತನ ನಿವಾಸ ಇರುವ ಏರಿಯಾವನ್ನು ಪೂರ್ತಿ ಸೀಲ್ ಡೌನ್ ಮಾಡಲಾಗಿದೆ.  ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ, ಕಾರ್ಪೋರೇಟರ್​​ ವಿರುದ್ಧ‌ ಎಫ್ ಐ ಆರ್ ದಾಖಲಿಸಲಾಗಿದೆ.  ಐಪಿಸಿ ಸೆಕ್ಷನ್ 143, 270, 271ರ ಅಡಿ ದೂರು ದಾಖಲಾಗಿದೆ.

First published: