ಕೊರೋನಾ ಎಫೆಕ್ಟ್​: ಬಿಬಿಎಂಪಿ ಹೊಸ ರೂಲ್ಸ್​​ - ದೊಡ್ಡ ದೊಡ್ಡ ಗಣಪತಿ ಮೂರ್ತಿಗಳಿಗೆ ಬಿತ್ತು ಬ್ರೇಕ್​

ಬಿಬಿಎಂಪಿ ಆರ್ಡರ್ ನೋಡಿ ಗಣಪನ ಸೈಜ್ ಚೇಂಜ್ ಮಾಡಿಕೊಂಡಿದ್ದಾರೆ ಜನ. ಈ ಬಾರಿ ದೊಡ್ಡ ದೊಡ್ಡ ಗಣಪತಿ ಮೂರ್ತಿಗಳಿಗೆ ಡಿಮ್ಯಾಂಡ್ ಇಲ್ಲವೇ ಇಲ್ಲ. ಯಾಕೆಂದರೆ ಕೆರೆ ಕಟ್ಟೆ ಬಾವಿಗಳಲ್ಲಿ ಗಣಪತಿ ವಿಸರ್ಜನೆಗೆ ಈ ಬಾರಿ ಅವಕಾಶವಿಲ್ಲ.

news18-kannada
Updated:August 11, 2020, 12:28 PM IST
ಕೊರೋನಾ ಎಫೆಕ್ಟ್​: ಬಿಬಿಎಂಪಿ ಹೊಸ ರೂಲ್ಸ್​​ - ದೊಡ್ಡ ದೊಡ್ಡ ಗಣಪತಿ ಮೂರ್ತಿಗಳಿಗೆ ಬಿತ್ತು ಬ್ರೇಕ್​
ಗಣೇಶ ಮೂರ್ತಿ
  • Share this:
ಬೆಂಗಳೂರು(ಆ.11): ಈ ಬಾರಿ ಬೆಂಗಳೂರಿನ ಜನ ಹಬ್ಬಕ್ಕೆ ಪೂಜಿಸುವ ಗಣಪತಿ ಸೈಜಿನಲ್ಲಿ ದೊಡ್ಡ ಬದಲಾವಣೆ ಆಗಿದೆ.. ಅಂದ್ರೆ ಗಣೇಶನ ಮೂರ್ತಿಯ ಆಕಾರ ಚಿಕ್ಕದಾಗಿದೆ.‌ ಎಲ್ಲಾ‌ ಕೊರೊನಾ ಮಹಿಮೆ ಎನ್ನಬಹುದು. ಗಣಪತಿ ಹಬ್ಬಕ್ಕೆ ಒಂದೆರಡು ವಾರಗಳು ಇರುವಾಗಲೇ ಎಲ್ಲೆಡೆ ವಿಘ್ನೇಶ್ವರನ ಮೂರ್ತಿಯ ತಯಾರಿಕೆ ಶುರುವಾಗುತ್ತೆ. ಥರಾವರಿ ಆಕಾರದ ವಿಭಿನ್ನ ಅಳತೆಯ ಮೂರ್ತಿಗಳು ಎಲ್ಲೆಡೆ ರಾರಾಜಿಸುತ್ತವೆ. ಜನ ಸ್ಪರ್ಧೆಗೆ ಬಿದ್ದವರಂತೆ ಒಂದಕ್ಕಿಂತ ಒಂದು ಎತ್ತರದ ಗಣಪತಿ ವಿಗ್ರಹ ಕೊಂಡೊತ್ತುತ್ತಿದ್ದರು. ಆದ್ರೆ ಈ ಬಾರಿ ಅದೆಲ್ಲದಕ್ಕೂ ಬ್ರೇಕ್ ಬಿದ್ದಿದೆ.

ಬಿಬಿಎಂಪಿ ಆರ್ಡರ್ ನೋಡಿ ಗಣಪನ ಸೈಜ್ ಚೇಂಜ್ ಮಾಡಿಕೊಂಡಿದ್ದಾರೆ ಜನ. ಈ ಬಾರಿ ದೊಡ್ಡ ದೊಡ್ಡ ಗಣಪತಿ ಮೂರ್ತಿಗಳಿಗೆ ಡಿಮ್ಯಾಂಡ್ ಇಲ್ಲವೇ ಇಲ್ಲ. ಯಾಕೆಂದರೆ ಕೆರೆ ಕಟ್ಟೆ ಬಾವಿಗಳಲ್ಲಿ ಗಣಪತಿ ವಿಸರ್ಜನೆಗೆ ಈ ಬಾರಿ ಅವಕಾಶವಿಲ್ಲ. ಅಲಸೂರು ಕೆರೆ, ಸ್ಯಾಂಕಿ ಟ್ಯಾಂಕ್, ಲಾಲ್ಬಾಗ್ ಕೆರೆ ಹೀಗೆ ಬೆಂಗಳೂರಿನ ನಾನಾ ಕೆರೆಗಳಲ್ಲಿ ಗಣಪತಿ ವಿಸರ್ಜನೆ ಮಾಡುವುದೇ ದೊಡ್ಡ ವೈಭವದ ಹಬ್ಬದಂತೆ ಆಗ್ತಿತ್ತು.

ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಟಾಪನೆ ಮಾಡಿದ ಗಣೇಶ ಮೂರ್ತಿಗಳಲ್ಲದೇ ಜನ ತಂತಮ್ಮ ಮನೆಗಳಲ್ಲಿ ಕೂರಿಸಿದ ಗಣಪನನ್ನೂ ಕೆರೆಗಳಲ್ಲೇ ವಿಸರ್ಜನೆ ಮಾಡ್ತಿದ್ರು. ಆದ್ರೆ ಹೀಗೆ ಲಕ್ಷಾಂತರ ಜನ ಸೇರುವ ಸಂದರ್ಭ ಈಗಿಲ್ಲ. ಕೊರೋನಾ ಆರ್ಭಟ ಇನ್ನೂ ಕಡಿಮೆಯಾಗಿಲ್ಲ. ಹಾಗಾಗಿ ಜನ ತಂತಮ್ಮ ಮನೆಗಳಲ್ಲೇ ಬಕೆಟ್, ಟಬ್​​ಗಳಲ್ಲಿ ಗಣೇಶ ವಿಸರ್ಜನೆ ಮಾಡಬೇಕಿದೆ. ಆದ್ರಿಂದ ಬೇರೆ ದಾರಿ ಇಲ್ಲದೆ ಚಿಕ್ಕ ಗಣಪತಿ ಮೂರ್ತಿಗಳನ್ನೇ ಜನ ಕೊಳ್ಳುತ್ತಿದ್ದಾರೆ. ಅತಿ ಹೆಚ್ಚು ಎಂದರೆ ಎರಡು ಅಡಿಗಳಷ್ಟು ಎತ್ತರದ ಮೂರ್ತಿಗಳು ಬಿಕರಿಯಾಗುತ್ತಿವೆ. 8,10,15, 20 ಇಂಚಿನ ಮಣ್ಣಿನ ಮೂರ್ತಿಗಳಿಗೆ ಈ ಬಾರಿ ಹೆಚ್ಚಿನ ಬೇಡಿಕೆ ಇದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಇನ್ನೂ ಮೂರು ದಿನ ಭಾರೀ ಮಳೆ ಸಾಧ್ಯತೆ; ಕೊಡಗಿನಲ್ಲಿ ಲಘು ವಾಹನ ಸಂಚಾರ ನಿಷೇಧ

ಇನ್ನು ಇಡೀ ವರ್ಷ ಬರೀ ಗಣಪತಿ ಮೂರ್ತಿಗಳನ್ನೇ ತಯಾರಿಸುವವರಿಗೆ ಮೊದಲೇ ವ್ಯಾಪಾರ ಕುಂಠಿತವಾಗಿದೆ. ಮೊದಲೇ ಮಾಡಿಟ್ಟಿದ್ದ ದೊಡ್ಡ ದೊಡ್ಡ ಮೂರ್ತಿಗಳು ಈಗ ಶೆಡ್ ಸೇರಿವೆ.‌ ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಟಾಪನೆ ಮಾಡಲು ಕೊರೋನಾ ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ಮನೆಗಳಲ್ಲೇ ಮಣ್ಣಿನ ಮೂರ್ತಿಗೆ ಪೂಜೆ ಮಾಡಬೇಕಿದೆ. ಮನೆಗಳಲ್ಲೂ ದೊಡ್ಡ ಗಣಪತಿ ವಿಗ್ರಹಗಳನ್ನಿಟ್ಟು ಸಂಭ್ರಮದಿಂದ ಹಬ್ಬ ಮಾಡುತ್ತಿದ್ದ ಜನ ಈ ಸಲ ತಮ್ಮ ಹಬ್ಬದ ಪ್ಲಾನ್ ಬದಲಿಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಬೇರೆ ಬೇರೆ ಕೆರೆ ಕಟ್ಟೆಗಳಲ್ಲಿ ಮೂರ್ತಿ ವಿಸರ್ಜನೆ ಮಾಡುತ್ತಿದ್ದವರು ಈ ಬಾರಿ ಆ ಅನುಕೂಲ ಇಲ್ಲದಿರುವುದರಿಂದ ಮನೆಯಲ್ಲಿ ಎಷ್ಟು ಅಳತೆಯ ಮೂರ್ತಿಯನ್ನು ಮುಳುಗಿಸಬಹುದೋ ಅಷ್ಟೇ ಅಳತೆಯ‌ ಮೂರ್ತಿ ಕೊಳ್ಳುತ್ತಿದ್ದಾರೆ.

ಜೊತೆಗೆ ಮಣ್ಣಿನ ಗಣಪತಿ ಮೂರ್ತಿಗಳ ಒಳಗೆ ಹೂವು, ತರಕಾರಿ ಬೀಜಗಳನ್ನು ಇರಿಸಲಾಗಿರುತ್ತದೆ.‌ ಮನೆಯಲ್ಲೇ ಬಕೆಟ್ ಅಥವಾ ದೊಡ್ಡ ಪಾತ್ರೆಗಳಲ್ಲಿ ಗಣಪತಿ ವಿಸರ್ಜನೆ ಮಾಡಿದ ನಂತರ ಆ ನೀರನ್ನು ಮನೆಯಂಗಳದಲ್ಲಿ ಚೆಲ್ಲುತ್ತಾರೆ. ಆಗ ಅದರಿಂದ ಉಪಯುಕ್ತ ಗಿಡ ಹುಟ್ಟುವ ಪರಿಸರ ಸ್ನೇಹಿ ಮಾರ್ಗವನ್ನೂ ಜನ ಕಂಡುಕೊಂಡಿದ್ದಾರೆ. ಜನರ ಅನುಕೂಲಕ್ಕೆ ತಕ್ಕಂತೆ ಗಣಪತಿ ಮೂರ್ತಿಗಳ ತಯಾರಿಕೆ ಭರಾಟೆ ಸದ್ಯಕ್ಕಂತೂ ಭರ್ಜರಿಯಾಗಿದೆ.
Published by: Ganesh Nachikethu
First published: August 11, 2020, 12:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading