HOME » NEWS » Coronavirus-latest-news » BBMP NEW COMMISSIONER N MANJUNATH PRASAD SAYS NO LOCKDOWN ONLY SEALDOWN WILL BE THERE IN BANGALORE HK

ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ನೋಟೀಸ್ - ಲಾಕ್ ಡೌನ್ ಇಲ್ಲ, ಸೀಲ್ ಡೌನ್ : ಮಂಜುನಾಥ್ ಪ್ರಸಾದ್

news18-kannada
Updated:July 21, 2020, 2:47 PM IST
ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ನೋಟೀಸ್ - ಲಾಕ್ ಡೌನ್ ಇಲ್ಲ, ಸೀಲ್ ಡೌನ್ : ಮಂಜುನಾಥ್ ಪ್ರಸಾದ್
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್
  • Share this:
ಬೆಂಗಳೂರು(ಜುಲೈ.21): ಕೋವಿಡ್ ಸಂಕಷ್ಟದಲ್ಲಿ ಸರ್ಕಾರಕ್ಕೆ ಸಹಕಾರ ನೀಡದ ಬೆಂಗಳೂರಿನ ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ಷೋಕಾಸ್ ನೋಟೀಸ್ ನೀಡಿದೆ. ಲಾಕ್ ಡೌನ್ ಇಲ್ಲ, ಸೀಲ್ ಡೌನ್ ಮಾರ್ಕೆಟ್ ಏರಿಯಾ ಕ್ಲೋಸ್ ಮುಂದುವರೆಯಲಿದೆ. 

ಈ ಕುರಿತು ಮಾಹಿತಿ ಸುದ್ದಿಗೊಷ್ಟಿ ನಡೆಸಿ ಮಾಹಿತಿ ನೀಡಿದ ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್, ನಾನು ಚಾರ್ಜ್​ ತೆಗೆದುಕೊಂಡ ಕೂಡಲೇ ಖಾಸಗಿ ಆಸ್ಪತ್ರೆ ಬೆಡ್ ಮಾಹಿತಿ ನೀಡಿದವರಿಗೆ ಷೊಕಾಸ್ ನೋಟೀಸ್ ನೀಡಲಾಗಿದೆ. ಪ್ರಕೃತಿ ವಿಕೋಪ ಆಕ್ಟ್ ನಲ್ಲಿ ಕೇಸ್ ದಾಖಲಾದ್ರೆ ಮುಂದಾಗುವ ಅನಾಹುತಕ್ಕೆ ಅವರೇ ಕಾರಣರಾಗುತ್ತಾರೆ. ‌ಬೆಂಗಳೂರಿನ 291 ಖಾಸಗಿ ಆಸ್ಪತ್ರೆಗಳಿಗೆ ಷೋಕಾಸ್ ನೋಟೀಸ್ ನೀಡಲಾಗಿದೆ. ಹಾಗಂತ ಎಲ್ಲರೂ ಉಲ್ಲಂಘನೆ ಮಾಡುತ್ತಿಲ್ಲ ಅಂತಲ್ಲ. ಇಲ್ಲಿಯ ವರೆಗೆ ಕೇವಲ ಮೂವರು ಅಸ್ಪತ್ರೆಗಳು ಸಮರ್ಪಕ ಮಾಹಿತಿ ನೀಡಿವೆ. ಈ ಕುರಿತು ಚಾರ್ಚ್ ತೆಗೆದುಕೊಂಡ ಕೂಡಲೇ ಆಸ್ಪತ್ರೆ ಭೇಟಿ ಮಾಡಿ ಪರಿಶೀಲನೆ ಮಾಡುತ್ತಿದ್ದೇನೆ ಎಂದರು.

ಕೋವಿಡ್ ಹಾಗೂ ನಾನ್ ಕೋವಿಡ್ ಸಾವು ಪ್ರಕರಣ ಹೆಚ್ಚಾಗುತ್ತಿವೆ. ಬೆಂಗಳೂರಿನಲ್ಲಿ 12 ಚಿತಾಗಾರ ಗಳಿವೆ. ಒಂದು ಮೈಸೂರು ರಸ್ತೆಯಲ್ಲಿ ರಿನೋವೇಷನ್ ನಲ್ಲಿದೆ‌. ಹತ್ತು ದಿನದಲ್ಲಿ ರೆಡಿಯಾಗಲಿದೆ. ವಿದ್ಯುತ್ ಚಿತಾಗಾರದಲ್ಲಿ ಒಂದು ದಿನಕ್ಕೆ 192 ಮೃತದೇಹ ಸುಡಬಹುದು. ಜೂನ್ ತಿಂಗಳಿನಲ್ಲಿ 1984 ಚಿತಾಗಾರದಲ್ಲಿ ಸುಡಲಾಗಿದೆ. ಪ್ರತಿದಿನ 62 ಮೃತದೇಹಗಳು ಬರುತ್ತಿವೆ. ಇದರಲ್ಲಿ ಕೊವಿಡ್ ನಾನ್ ಕೊವಿಡ್ ಮೃತದೇಹಗಳು ಬರುತ್ತಿವೆ. ಕೋವಿಡ್ ಗಾಗಿ  ಯಲಹಂಕ, ಬೊಮ್ಮನಹಳ್ಳಿ ಕೂಡ್ಲು, ಕೆಂಗೇರಿ, ಮಹದೇವಪುರ ಪನತೂರ್ ನಾಲ್ಕು ಚಿತಾಗಾರ ಮೀಸಲು ಇಡಲಾಗಿದೆ. ಕೋವಿಡ್ ಇರುವ ಕಡೆ ನಾನ್ ಕೊವಿಡ್ ಇರುವುದರಿಂದ ಅಂತ್ಯಕ್ರಿಯೆ ಮಾಡುವುದು ತಡವಾಗುತ್ತಿದೆ. ಇದರಿಂದಾಗಿ ನಾಲ್ಕು ಚಿತಾಗಾರ ಮೀಸಲು. ಅಗತ್ಯವಿದ್ದರೆ ಇನ್ನಷ್ಟು ಹೆಚ್ಚಳ ಮಾಡುತ್ತೇವೆ. ವಿದ್ಯುತ್ ಚಿತಾಗಾರದಲ್ಲಿ ಇನ್ನಷ್ಟು ಸಿಬ್ಬಂದಿ, ಹೆಚ್ಚುವರಿ ಸಮಯ ಸೂಚನೆ ನೀಡಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 150 ಸ್ಮಶಾನ ಗಳಿವೆ. ಕೋವಿಡ್ ಮೃತದೇಹ ಅಂತ್ಯಸಂಸ್ಕಾರಕ್ಕೆ ಹತ್ತು ಅಡಿ ಅಡಿ ಹೂಳಬೇಕು‌. ಸ್ಮಶಾನದಲ್ಲಿ ಹೋಗಲು ಜೆಸಿಬಿ ಬೇಕು‌. ಅಲ್ಲಿ ಜೆಸಿಬಿ ಹೋಗಲು ಆಗುವುದಿಲ್ಲ. ಅದಕ್ಕಾಗಿ 35 ಎಕರೆ ಸ್ಮಶಾನ ಮೀಸಲು ಮಾಡಲಾಗಿದೆ ಎಂದರು.

ನಾಳೆ ನಾಲ್ಕು ವಲಯಗಳಲ್ಲಿ ಸಭೆ ಜರುಗಲಿದೆ. ಸಚಿವ ಆರ್ ಅಶೋಕ್ ಅವರ ನೇತೃತ್ವದಲ್ಲಿ ಸಭೆ ಜರುಗಲಿದೆ. ಕಂಟೈನ್​​ಮೆಂಟ್ ಝೋನ್ ನಲ್ಲಿರುವ ಬಡವರಿಗೆ ಉಚಿತ ಆಹಾರ ವಿತರಣೆ ಮಾಡಲಾಗುವುದು. 13 ಸಾವಿರ ಜನರಿಗೆ ಈಗಾಗಲೇ ವಿತರಣೆ ಮಾಡಿದೆ. ಮಾರುಕಟ್ಟೆಗಳು ಓಪನ್ ಮಾಡಿದರೆ ಹೆಚ್ಚಿನ ಜನಸಂದಣಿ ಹೆಚ್ಚಾಗಬಹುದು. ನಾಳೆ ಕೆ ಆರ್ ಮಾರುಕಟ್ಟೆ ಸೇರಿದಂತೆ ಹಲವು ಈಗಾಗಲೇ ಸೀಲ್ ಡೌನ್ ಮಾಡಿರುವ ಮಾರುಕಟ್ಟೆ ಓಪನ್ ಆಗಲ್ಲ. ಮಾರುಕಟ್ಟೆಯಲ್ಲಿ ಮುಂಜಾಗ್ರತೆ ತೆಗೆದುಕೊಂಡು ಮುಂದೆ ಓಪನ್‌ ಮಾಡಲಾಗುವುದು ಎಂದರು ತಿಳಿಸಿದರು.

ಈಜುಕೋಳ, ಜಿಮ್‌ ಸದ್ಯಕ್ಕೆ ತೆರೆಯಲ್ಲ. ರ್ಯಾಪಿಡ್ ಆಂಟಿಜೆನ್ ಟೆಸ್ಟ್ ರಿಪೋರ್ಟ್ ಆಗುತ್ತಿದೆ. ಇದರಿಂದ ಬೇಗ ರಿಸಲ್ಟ್ ಸಿಗುತ್ತಿದೆ. ಈಗಾಗಲೇ 25 ಸಾವಿರ ಆಂಟಿಜನ್ ಟೆಸ್ಟ್ ಮಾಡಲಾಗಿದೆ. ಐವತ್ತು ಸಾವಿರ ಆಂಟಿಜನ್ ಕಿಟ್ ಇದೆ. ಇನ್ನು ಬೇಕು ಎಂದು ಕೇಳಿದ್ದೇವೆ ಎಂದರು.

ಇದನ್ನೂ ಓದಿ : ಕೊರೋನಾ ಸೋಂಕು ತಡೆಗೆ ಜಾರಿಗೆ ಬಂತು ದಂಡ ಪ್ರಯೋಗ : ಈ ಊರಿಗೆ ಯಾರೆ ಬಂದರೂ ಐದು ಸಾವಿರ ರೂಪಾಯಿ ದಂಡಒಂದು ವಾರದ ಲಾಕ್ ಡೌನ್ ನಿಂದ ಅನುಕೂಲವಾಗಿದೆ. ಹೆಚ್ಚು ಹೆಚ್ಚು ಟೆಸ್ಟ್ ಮಾಡಲು, ಬೆಡ್ ವ್ಯವಸ್ಥೆ ಮಾಡಲು, ಐಸೋಲೇಷನ್ ವ್ಯವಸ್ಥೆ ಇನ್ನಷ್ಟು ಮಾಡಲು ಅನುಕೂಲವಾಗಿದೆ. ಎಲ್ಲಿಯವರಿಗೆ ಶಿಕ್ಷೆ ಪ್ರಮಾಣ ಹೆಚ್ಚಿಲ್ಲದೇ ಹೋದರೆ ಜನರು ಉದಾಸೀನತೆ ಹೆಚ್ಚಾಗುತ್ತದೆ. ಮಾಸ್ಕ್ ಹಾಕದೇ ಇರುವವರ ದಂಡ ಐದು ಪಟ್ಟು ಹೆಚ್ಚು ಮಾಡಬೇಕು. ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ  ಎಂದು ತಿಳಿಸಿದರು.

ಜೀವ ಮುಖ್ಯ, ಜೀವನೂ ಮುಖ್ಯ. ಲಾಕ್ ಡೌನ್ ಅನ್‌ಲಾಕ್ ಮಾಡಿದರು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಅಜಿಂ ಪ್ರೇಮ್‌ಜಿ ಫೌಂಡೇಷನ್ ವಿವಿಧ ರೀತಿಯಲ್ಲಿ ಸಹಕಾರ ಮಾಡುತ್ತಿದ್ದಾರೆ. ಈ ಕುರಿತು ಬಿಬಿಎಂಪಿ ಗು ಸಹಕರಿಸಿ ಎಂದು ಕೇಳಿದ್ದೇವೆ. ಕೊವಿಡ್ ರೋಗಿಗಳಿಗೆ ಹಾಗೂ ಹೋಮ್‌ ಐಷೋಲೀಷನ್ ನಲ್ಲಿರುವವರಿಗೆ ಪಲ್ಸಿ ಆಕ್ಸಿ ಮೀಟರ್ ಕೊಡಲು ಮುಂದಾಗಿದ್ದಾರೆ. 6 ಸಾವಿರ ಪಲ್ಸಿ ಆಕ್ಸಿ ಮೀಟರ್ ನೀಡುವ ಯೋಜನೆಯಿದೆ ಎಂದು ಮಾಹಿತಿ ನೀಡಿದರು.

ಸದ್ಯ ಬೆಂಗಳೂರಿನಲ್ಲಿ 8600 ಹೋಮ್ ಐಷೋಲೇಷನ್ ನಲ್ಲಿದ್ದಾರೆ. ಬಿಬಿಎಂಪಿ ಸಿಬ್ಬಂದಿ ಕೊರತೆಯಿದೆ. ಜಾಹಿರಾತು ನೀಡಿದ್ದೇವೆ. ಕೊವಿಡ್ ಇರುವುದರಿಂದ ಮುಂದೆ ಬಂದಿಲ್ಲ. ಆದಷ್ಟು ಬೇಗ ನೇಮಕ ಮಾಡಿಕೊಳ್ಳಲಾಗುವುದು. ಬಿಬಿಎಂಪಿ ವ್ಯಾಪ್ತಿಯಲ್ಲಿ ಎರಡು ಸಾವಿರ ಹೋಂ ಗಾರ್ಡ್ ಬೇಕು ಎಂದು ಕೇಳಿದ್ದೇವೆ. ಹಂತ ಹಂತವಾಗಿ ಪೊಲೀಸ್ ಇಲಾಖೆ ನೀಡಲಿದೆ.
Published by: G Hareeshkumar
First published: July 21, 2020, 2:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories