ಬೆಂಗಳೂರು(ಏ. 03): ಕೊರೋನಾ ನಿಗ್ರಹ ದೃಷ್ಟಿಯಿಂದ 21 ದಿನಗಳ ಲಾಕ್ ಡೌನ್ ಹೇರಿರುವುದು ಜನಜೀವನಕ್ಕೆ ಬಹಳ ಸಂಕಷ್ಟ ತಂದಿದೆ. ವಿವಿಧ ರೀತಿಯಲ್ಲಿ ಜನರು ಎದರಿಸುತ್ತಿರುವ ಸಮಸ್ಯೆಗಳ ಹೊರೆಯನ್ನ ಸ್ವಲ್ಪವಾದರೂ ತಗ್ಗಿಸಲು ಸರ್ಕಾರ ಕೆಲ ಕ್ರಮಗಳನ್ನ ಕೈಗೊಳ್ಳಲು ನಿರ್ಧರಿಸಿದೆ. ಅದರಂತೆ, ನಗರಾದ್ಯಂತ ಆರ್ಒ ನೀರಿನ ಘಟಕಗಳಲ್ಲಿ ಉಚಿತವಾಗಿ ಕುಡಿಯುವ ನೀರನ್ನು ವಿತರಿಸಲಿದೆ. ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್ ಶೀಘ್ರದಲ್ಲೇ ಇದನ್ನು ಪ್ರಕಟಿಸಲಿದ್ದಾರೆ.
ಬೆಂಗಳಳೂರಿನ 198 ವಾರ್ಡ್ಗಳಲ್ಲಿ 500ಕ್ಕೂ ಹೆಚ್ಚು ಆರ್ಒ ಪ್ಲಾಂಟ್ಗಳಿವೆ. ಇಲ್ಲಿ 20 ಲೀಟರ್ ಕ್ಯಾನ್ನಷ್ಟು ನೀರಿಗೆ 5 ರೂಪಾಯಿ ದರ ಇದೆ. ಈಗ ಕೊರೋನಾ ಸಂಕಷ್ಟ ಬಗೆಹರಿಯುವವರೆಗೂ ಉಚಿತವಾಗಿ ನೀರನ್ನು ನೀಡುವ ಸಾಧ್ಯತೆ ಇದೆ. ಬಿಬಿಎಂಪಿಯ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆಯಾಗಿ ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆನ್ನಲಾಗಿದೆ.
ಇದೇ ವೇಳೆ, ಇಂದಿರಾ ಕ್ಯಾಂಟೀನ್ಗಳಲ್ಲಿ ಆಹಾರ ಪ್ಯಾಕೆಟ್ಗಳನ್ನ ಉಚಿತವಾಗಿ ವಿತರಿಸುವ ಯೋಜನೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಮೊದಲು ಇದ್ದ 5 ಮತ್ತು 10 ರೂ ದರ ನಿಗದಿಪಡಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂಪುಟ ಸಭೆಯಲ್ಲಿ ಸೂಚಿಸಿದ್ದಾರೆನ್ನಲಾಗಿದೆ.
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ