ಸರಗಳ್ಳನತನ ಆರೋಪಿಗೂ ಕೊರೋನಾ ಪಾಸಿಟಿವ್ ; ಎರಡು ದಿನವಾದರೂ ಠಾಣೆಯನ್ನು ಸೀಲ್ ಡೌನ್ ಮಾಡದ ಬಿಬಿಎಂಪಿ

ಆರೋಗ್ಯ ಇಲಾಖಾ ಅಧಿಕಾರಿಗಳಾಗಲಿ ಬಿಬಿಎಂಪಿ ಅಧಿಕಾರಿಗಳಾಗಲಿ ಠಾಣೆಗೆ ಭೇಟಿ ಕೊಟ್ಟಿಲ್ಲ

ತಿಲಕ್​​ ನಗರ ಪೊಲೀಸ್ ಠಾಣೆ

ತಿಲಕ್​​ ನಗರ ಪೊಲೀಸ್ ಠಾಣೆ

  • Share this:
ಬೆಂಗಳೂರು(ಜೂ.24): ಬೆಂಗಳೂರಿನಲ್ಲಿ ಪಾಸಿಟಿವ್ ಬಂದಿದ್ದ ಪೊಲೀಸ್ ಠಾಣೆಯನ್ನು ಬಿಬಿಎಂಪಿ ಎರಡು ದಿನವಾದರೂ ಸೀಲ್ ಡೌನ್ ಮಾಡಿಲ್ಲ. ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಜೂನ್​​ 20 ರಂದು ಸರಗಳ್ಳತನ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿದ್ದರು. ಬಂಧಿಸಿದ ಬಳಿಕ ಠಾಣೆಗೆ ಕರೆತಂದು ಪೊಲೀಸರು ವಿಚಾರಣೆ ಸಹ‌ ಮಾಡಿದ್ರು. ಇನ್ನು ವಿಚಾರಣೆ ಬಳಿಕ ಆರೋಪಿಗೆ ಕೋವಿಡ್ ಪರೀಕ್ಷೆಯನ್ನು ಮಾಡಿದ ಬಳಿಕ ವರದಿಯಲ್ಲಿ ಪಾಸಿಟಿವ್ ಬಂದಿದ್ದು, ಪೊಲೀಸರಲ್ಲಿ ಆತಂಕ‌ ಶುರುವಾಗಿತ್ತು. ಇತ್ತ ಬಿಬಿಎಂಪಿ ಅಧಿಕಾರಿಗಳಿಗೆ ವಿಚಾರ ಗೊತ್ತಿದ್ರೂ ಎರಡು ದಿನ ಆದ್ರೂ ಯಾವೊಬ್ಬ ಅಧಿಕಾರಿಯೂ ಬಂದು ಠಾಣೆಯನ್ನು ಸೀಲ್ ಡೌನ್ ಮಾಡಿರಲಿಲ್ಲ.

ಇನ್ನು ಬಿಬಿಎಂಪಿ ಅಧಿಕಾರಿಗಳಿಗಾಗಿ ಕಾದ ಪೊಲೀಸರು ಕೊನೆಗೆ ಅವರೇ ಬೀಗ ಜಡೆದಿದ್ದಾರೆ.‌ ನಂತರ ಪೊಲೀಸರೇ ಆರೋಪಿಯು ಯಾರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದರೋ ಅವರೆಲ್ಲರನ್ನೂ ಸ್ವಯಂ ಪ್ರೇರಿತರಾಗಿ ಹೋಟೆಲ್ ಕ್ವಾರೆಂಟೈನ್ ಆಗಿದ್ದಾರೆ. ದ್ವಿತೀಯ ಸಂಪರ್ಕದಲ್ಲಿದ್ದ ಕಾನ್ಸ್​​​ಟೇಬಲ್​​ ಹೋಂ ಕ್ವಾರೆಂಟೈನ್ ಆಗಿದ್ದಾರೆ. ಆದರೆ, ಇದುವರೆಗೂ ಯಾವುದೇ ಕಾನ್ಸ್​ಟೇಬಲ್​​ ತಪಾಸಣೆ ಮಾಡಿಲ್ಲ.

ಇಷ್ಟಾದರೂ ಆರೋಗ್ಯ ಇಲಾಖಾ ಅಧಿಕಾರಿಗಳಾಗಲಿ ಬಿಬಿಎಂಪಿ ಅಧಿಕಾರಿಗಳಾಗಲಿ ಠಾಣೆಗೆ ಭೇಟಿ ಕೊಟ್ಟಿಲ್ಲ. ಆರೋಪಿಯ ಪ್ರಾಥಮಿಕ ಸಂಪರ್ಕದಲ್ಲಿ ಯಾರೆಲ್ಲಾ ಇದ್ದರೂ ಎನ್ನುವುದು ಸಹ ಪತ್ತೆ ಮಾಡಿಲ್ಲ. ಇದರಿಂದ ಪೊಲೀಸರಿಗೆ ಗೊಂದಲ ಶುರುವಾಗಿದೆ.

ಇದನ್ನೂ ಓದಿ : ರಾಜ್ಯದಲ್ಲಿ 170 ಪೊಲೀಸರಲ್ಲಿ ಮಾಹಾಮಾರಿ ಕೊರೋನಾ ಸೋಂಕು ಪತ್ತೆ

ಅಷ್ಟೆ ಅಲ್ಲ ಆರೋಪಿಯು ಸರಗಳ್ಳತನ ಮಾಡಿದಾಗ ಬೈಕ್ ನಲ್ಲಿ ಓಡಾಡಿದ ದೃಶ್ಯಾವಳಿ ಪೊಲೀಸರಿಗೆ ಸಿಕ್ಕಿದ್ದು, ಅದರಲ್ಲಿ ಅತನ ಹಿಂದೆಯೂ ಮತ್ತೊಬ್ಬ ಕುಳಿತುಕೊಂಡಿರುವುದು ಪತ್ತೆಯಾಗಿದೆ.

ಇದಷ್ಟೆ ಅಲ್ಲದೆ ಆರೋಪಿಯನ್ನು ಪೊಲೀಸರು ಬಂಧಿಸಿದಾಗ ಆತನ ಜೊತೆ ಓರ್ವ ಯುವತಿ ಸಹ ಇದ್ದಳು ಅನ್ನೋದು‌ ಪೊಲೀಸರು ಹೇಳಿದ್ದಾರೆ. ಆದರೆ, ಇದ್ಯಾವುದನ್ನೂ ಬಿಬಿಎಂಪಿ ಪತ್ತೆ ಮಾಡದ ಹಿನ್ನೆಲೆ ಈಗ ಆರೋಪಿ ಯಾರಿಗೆಲ್ಲಾ ಕೊರೋನಾ ಸೊಂಕು ಹಚ್ಚಿದ್ದಾನೋ ಎನ್ನುವುದು ಆತಂಕ ಶುರುವಾಗಿದೆ.
First published: