ಕೊರೋನಾಗೆ ಭಯ ಪಡುವ ಅಗತ್ಯವಿಲ್ಲ; ಕೋವಿಡ್​-19 ಬಗ್ಗೆ ನಟ ರಮೇಶ್ ಅರವಿಂದ್ ಏನು ಹೇಳಿದ್ದಾರೆ ಕೇಳಿ

ಬಿಬಿಎಂಪಿ ಕಮಿಷನರ್​​ ಮಂಜುನಾಥ್​ ಪ್ರಸಾದ್​ ಕೊರೋನಾ ಜಾಗೃತಿ ವಿಡಿಯೋವನ್ನು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 8 ನಿಮಿಷಗಳ ಈ ವಿಡಿಯೋದಲ್ಲಿ ನಟ ರಮೇಶ್​ ಅರವಿಂದ್​ ಕೋವಿಡ್​-19 ಎಂದರೇನು? ಅವುಗಳಲ್ಲಿನ ಹಂತಗಳು, ಜನರು ಪಾಲಿಸಬೇಕಾದ ನಿಯಮಗಳು, ಲಾಕ್​ಡೌನ್​ ಮುಂತಾದ ವಿಚಾರಗಳನ್ನು ಸಂಕ್ಷಿಪ್ತವಾಗಿ ಹೇಳಿದ್ದಾರೆ.

news18-kannada
Updated:July 23, 2020, 9:23 PM IST
ಕೊರೋನಾಗೆ ಭಯ ಪಡುವ ಅಗತ್ಯವಿಲ್ಲ; ಕೋವಿಡ್​-19 ಬಗ್ಗೆ ನಟ ರಮೇಶ್ ಅರವಿಂದ್ ಏನು ಹೇಳಿದ್ದಾರೆ ಕೇಳಿ
ನಟ ರಮೇಶ್​ ಅರವಿಂದ್​
  • Share this:
ಸ್ಯಾಂಡಲ್​ವುಡ್​ ನಟ ರಮೇಶ್​ ಅರವಿಂದ್​ ಬಿಬಿಎಂಪಿ (ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ) ಕೊರೋನಾ ಜಾಗೃತಿ ಅಭಿಯಾನದ ರಾಯಭಾರಿಯಾಗಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಜನರಲ್ಲಿ ಮಹಾಮಾರಿ ಕೊರೋನಾ ಕುರಿತಾಗಿ ಜಾಗೃತಿ ಮೂಡಿಸಲು ಮಾಡಿದ ರಮೇಶ್​ ಅರವಿಂದ್​ ಅವರ ಮೊದಲ ವಿಡಿಯೋವನ್ನು ಬಿಡುಗಡೆಯಾಗಿದೆ. ವಿಡಿಯೋದಲ್ಲಿ ರಮೇಶ್​ ಅರವಿಂದ್​ ಕೋವಿಡ್​-19 ವೈರಾಣುವಿನ ಬಗ್ಗೆ ಸಂಕ್ಷಿಪ್ತವಾಗಿ ಹೇಳಿದ್ದಾರೆ. ಜನರಲ್ಲಿ ಧೈರ್ಯವನ್ನು ತುಂಬುವ ಮಾತನಾಡಿದ್ದಾರೆ.

ಬಿಬಿಎಂಪಿ ಕಮಿಷನರ್​​ ಮಂಜುನಾಥ್​ ಪ್ರಸಾದ್​ ಕೊರೋನಾ ಜಾಗೃತಿ ವಿಡಿಯೋವನ್ನು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 8 ನಿಮಿಷಗಳ ಈ ವಿಡಿಯೋದಲ್ಲಿ ನಟ ರಮೇಶ್​ ಅರವಿಂದ್​ ಕೋವಿಡ್​-19 ಎಂದರೇನು? ಅವುಗಳಲ್ಲಿನ ಹಂತಗಳು, ಜನರು ಪಾಲಿಸಬೇಕಾದ ನಿಯಮಗಳು, ಲಾಕ್​ಡೌನ್​ ಮುಂತಾದ ವಿಚಾರಗಳನ್ನು ಸಂಕ್ಷಿಪ್ತವಾಗಿ ಹೇಳಿದ್ದಾರೆ.
ವೈದರು ಕರೋನಾದಲ್ಲಿ ಮೂರು ವಿಧ ಅನ್ನುತ್ತಾರೆ. ಮೈಲ್ಡ್​, ಮಾಡೆರೇಟ್​, ಸಿವಿಯರ್​. ರಕ್ತದಲ್ಲಿರುವ ಆಕ್ಸಿಜನ್​ ಲೆವೆಲ್​ ಮೂಲಕ ವೈದ್ಯರು ತಿಳಿಯುತ್ತಾರೆ. ಕೊರೋನಾಗೆ ಭಯ ಪಡಬೇಕಾದ ಅಗತ್ಯವಿಲ್ಲ. ಮಾಸ್ಕ್​, ಸಾಮಾಜಿಕ ಅಂತರವನ್ನು ಕಾಪಾಡಿ. ಪ್ರಪಂಚ ನಮ್ಮೊಂದಿಗಿದೆ. ಎಲ್ಲಾ ದೇಶಗಳು ಕೊರೋನಾವನ್ನು ತಡೆಗಟ್ಟಲು ಔಷಧಿ ಕಂಡುಹಿಡಿಯುತ್ತಿದ್ದಾರೆ. ಶೀಘ್ರದಲ್ಲೇ ಔಷಧಿ ಬರುತ್ತೆ. ಹಾಗಾಗಿ ಅಲ್ಲಿಯವರೆಗೂ ನಮಗೆ ಇರುವ ಒಂದೇ ವಾಕ್ಸೈನ್​ ​ಅಂದರೆ ಸೋಷಿಯಲ್​ ವಾಕ್ಸೈನ್​ ಎಂದು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ ನಟ ರಮೇಶ್​ ಅರವಿಂದ್​​.
Published by: Harshith AS
First published: July 23, 2020, 9:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading