HOME » NEWS » Coronavirus-latest-news » BBMP COMMISSIONER WAS MAKE NEW PLAN FOR CORONAVIRUS CONTROL IN BENGALURU RH

ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕೊರೋನಾ ನಿಯಂತ್ರಣಕ್ಕೆ ಬಿಬಿಎಂಪಿ ಆಯುಕ್ತರ ಹೊಸ ಉಪಾಯ

ಕೆಲ ಖಾಸಗಿ ಆಸ್ಪತ್ರೆಗಳು ಸರ್ಕಾರದ ಆದೇಶದಂತೆ ಕೆಲಸ ಮಾಡುತ್ತಿವೆ. ಇನ್ನು ಕೆಲ ಆಸ್ಪತ್ರೆಗಳಲ್ಲಿ ಬೆಡ್ ಗಳು ಇಲ್ಲದರ ಬಗ್ಗೆ ಕಾರಣ ನೀಡಿವೆ. ವೈದ್ಯರು ಮತ್ತು ನರ್ಸ್ ಗಳು ಕೆಲಸ‌ ಬಿಡುತ್ತಿದ್ದು, ಸಿಬ್ಬಂದಿ ಕೊರತೆ ಎಂದು ಕೆಲ ಖಾಸಗಿ ಆಸ್ಪತ್ರೆಗಳು ವರದಿ ಕೊಟ್ಟಿವೆ. ಬೆಡ್​ಗಳಿದ್ದರೂ ಆರೈಕೆ ಮಾಡಲು ವೈದ್ಯರಿಲ್ಲ ಎಂದು ಸಮಜಾಯಿಷಿ ನೀಡಿವೆ. ಏನೇ ಇದ್ದರೂ ಸರ್ಕಾರದ ನಿಯಮ ಪಾಲಿಸಲೇಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

news18-kannada
Updated:July 30, 2020, 2:18 PM IST
ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕೊರೋನಾ ನಿಯಂತ್ರಣಕ್ಕೆ ಬಿಬಿಎಂಪಿ ಆಯುಕ್ತರ ಹೊಸ ಉಪಾಯ
ಕೊರೋನಾ ವೈರಸ್ ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು; ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕು ನಿಯಂತ್ರಣ ಮಾಡಲು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೊಸ ಉಪಾಯ ಮಾಡಿದ್ದಾರೆ. ಅವರ ಹೊಸ ಪ್ಲಾನ್​ನಂತೆ ವಾರ್ಡ್ ಮತ್ತು ಬೂತ್ ಮಟ್ಟದಲ್ಲಿ ಸರ್ವೆಗೆ ಬಿಬಿಎಂಪಿ ಮುಂದಾಗಿದೆ.

ವಾರ್ಡ್ ಮಟ್ಟದಲ್ಲಿ  ಅಧಿಕಾರಿಗಳು ಮತ್ತು ಕಾರ್ಪೊರೇಟರ್​ಗಳಿಂದ ಸರ್ವೆ ಮಾಡಿಸಿ, ಮೊದಲು ವಯೋವೃದ್ಧರು, ಅನಾರೋಗ್ಯ ಪೀಡಿತರ ಪಟ್ಟಿ ಮಾಡಲು ಸಿದ್ದತೆ ಮಾಡಲು ತಯಾರಿ ನಡೆಸಲಾಗಿದೆ. ಮೊದಲು ವೃದ್ದರು, ಅನಾರೋಗ್ಯಪೀಡಿತರಿಗೆ ಕೋವಿಡ್ 19 ತಪಾಸಣೆ ಮಾಡಿಸಿ, ಚಿಕಿತ್ಸೆ ಕೊಡಲು ಬಿಬಿಎಂಪಿ ಮುಂದಾಗಿದೆ. ಸಾವು ನೋವು ತಡೆಯಲು ಇಂಥವರ ಪಟ್ಟಿ ಮಾಡಲು ಸಿಬ್ಬಂದಿ ನೇಮಿಸಲು ಸೂಚಿಸಲಾಗಿದೆ. ಜೊತೆಗೆ ಕೋವಿಡ್ ಪರೀಕ್ಷೆ ಹೆಚ್ಚಿಸಲು  ಬಿಬಿಎಂಪಿ ಮುಂದಾಗಿದೆ. ಸದ್ಯ ಈಗ ಪ್ರತಿದಿನ 12 ಸಾವಿರ ತಪಾಸಣೆ ನಡೆಯುತ್ತಿದ್ದು, ಅದನ್ನು ಇಪ್ಪತ್ತು ಸಾವಿರಕ್ಕೆ ಹೆಚ್ಚಿಸಲು ಸೂಚಿಸಿದೆ.

ಪಿಸಿಆರ್ ಟೆಸ್ಟ್ ವಿಳಂಭವಾಗುತ್ತಿದ್ದು, ಲ್ಯಾಬ್ ಗಳಲ್ಲಿ ನುರಿತ ಸಿಬ್ಬಂದಿ ನೇಮಕ ನಡೆಯುತ್ತಿದೆ. ಲ್ಯಾಬ್​ಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಡೇಟಾ ಆಪರೇಟರ್​ಗಳು, ಲ್ಯಾಬ್ ಟೆಕ್ನಿಷಿಯನ್‌ ನೇಮಕ ಮಾಡಲಾಗುತ್ತಿದೆ. ಕೋವಿಡ್ ರಿಪೋರ್ಟ್ ಗಳಲ್ಲಿ ಗೊಂದಲ ಆರೋಪಕ್ಕೆ ಕಠಿಣ ನಿಲುವಿಗೆ ಮುಂದಾಗಿದೆ. ತಪಾಸಣೆ ಹೆಚ್ಚಿಸಿದಷ್ಟು ಕೊರೋನಾ ನಿಯಂತ್ರಣಕ್ಕೆ ಸಹಕಾರಿಯಾಲಿದೆ ಎಂದು ಬಿಬಿಎಂಪಿ ಕಮಿಷನರ್ ತಿಳಿಸಿದ್ದಾರೆ.

ಇದೇ ವೇಳೆ ಖಾಸಗಿ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದು, ಕೆಲ ಖಾಸಗಿ ಆಸ್ಪತ್ರೆಗಳು ಸರ್ಕಾರದ ಆದೇಶದಂತೆ ಕೆಲಸ ಮಾಡುತ್ತಿವೆ. ಇನ್ನು ಕೆಲ ಆಸ್ಪತ್ರೆಗಳಲ್ಲಿ ಬೆಡ್ ಗಳು ಇಲ್ಲದರ ಬಗ್ಗೆ ಕಾರಣ ನೀಡಿವೆ. ವೈದ್ಯರು ಮತ್ತು ನರ್ಸ್ ಗಳು ಕೆಲಸ‌ ಬಿಡುತ್ತಿದ್ದು, ಸಿಬ್ಬಂದಿ ಕೊರತೆ ಎಂದು ಕೆಲ ಖಾಸಗಿ ಆಸ್ಪತ್ರೆಗಳು ವರದಿ ಕೊಟ್ಟಿವೆ. ಬೆಡ್​ಗಳಿದ್ದರೂ ಆರೈಕೆ ಮಾಡಲು ವೈದ್ಯರಿಲ್ಲ ಎಂದು ಸಮಜಾಯಿಷಿ ನೀಡಿವೆ. ಏನೇ ಇದ್ದರೂ ಸರ್ಕಾರದ ನಿಯಮ ಪಾಲಿಸಲೇಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನು ಓದಿ: ಆಗಸ್ಟ್ ತಿಂಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಪಕ್ಕಾ; ದೆಹಲಿ ನಾಯಕರ ಇಶಾರೆಗೆ ಕಾಯುತ್ತಿರುವ ಯಡಿಯೂರಪ್ಪ

‌ಇದೇ ವೇಳೆ ಹಣ ಸುಲಿಗೆಗೆ ಮುಂದಾಗಿರುವ ಖಾಸಗಿ ಆಸ್ಪತ್ರೆಗಳಿಗೆ ಶಿಸ್ತು ಕ್ರಮದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿರುವ ಚಿತಾಗಾರ ನಿರ್ವಹಣೆ ಬಗ್ಗೆ ಕಮಿಷನರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮ್ಯಾನೇಜ್ ಮೆಂಟ್ ವೈಫಲ್ಯದಿಂದ‌ ಹೆಬ್ಬಾಳ ಚಿತಾಗಾರದಲ್ಲಿ ಸಾಲು ಹೆಚ್ಚಿದೆ. ಆಯಾ ವಲಯದವರು ಚಿತಾಗಾರ ಬಳಸಿಕೊಳ್ಳಲು ಸೂಚನೆ ನೀಡಲಾಗಿದೆ. ಪಾದರಾಯನಪುರದಲ್ಲಿ ಸೋಂಕು ಕಡಿಮೆ‌ಯಾಗಲು ಆ ಏರಿಯಾದಲ್ಲಿ ತೆಗೆದುಕೊಂಡ ಕಠಿಣ ನಿಲುವುಗಳೇ ಕಾರಣ ಎಂದು ಬಿಬಿಎಂಪಿ‌ ಕಮಿಷನರ್ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
Published by: HR Ramesh
First published: July 30, 2020, 2:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories