ಎಲ್ಲರೂ ಅನಾವಶ್ಯಕವಾಗಿ ಮಾಸ್ಕ್ ಧರಿಸುವ ಅಗತ್ಯವಿಲ್ಲ; ಬಿಬಿಎಂಪಿ ಪಾಲಿಕೆ ಆಯುಕ್ತರಿಂದ ಮನವಿ

ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಮಾಸ್ಕ್ ಮಾರಾಟದ ದರ ದಿನನಿತ್ಯ ಏರುತ್ತಲೇ ಇದೆ. ಅಲ್ಲದೆ, ಅಕ್ರಮವಾಗಿ ಕಳಪೆ ಮಾಸ್ಕ್ ತಯಾರಿಸಿ ಮಾರಾಟ ಮಾಡುವವರ ಸಂಖ್ಯೆಯೂ ದಿನನಿತ್ಯ ಏರುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತರ ಉಪಯುಕ್ತ ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ. 

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಬೆಂಗಳೂರು (ಮಾರ್ಚ್‌ 31); ಕೊರೋನಾ ಭೀತಿಯಿಂದ ಎಲ್ಲರೂ ಸುಖಾಸುಮ್ಮನೆ ಮಾಸ್ಕ್ಧ ರಿಸುವ ಅಗತ್ಯವಿಲ್ಲ, ಕೆಮ್ಮು-ಕಫ-ಜ್ವರ ಇದ್ದವರು ಮಾತ್ರ ಮಾಸ್ಕ್ ಧರಿಸಿ ಎಂದು ಬಿಬಿಎಂಪಿ ಪಾಲಿಕೆ ಆಯುಕ್ತ ಅನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ.

ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಮಾಸ್ಕ್ ಮಾರಾಟದ ದರ ದಿನನಿತ್ಯ ಏರುತ್ತಲೇ ಇದೆ. ಅಲ್ಲದೆ, ಅಕ್ರಮವಾಗಿ ಕಳಪೆ ಮಾಸ್ಕ್ ತಯಾರಿಸಿ ಮಾರಾಟ ಮಾಡುವವರ ಸಂಖ್ಯೆಯೂ ದಿನನಿತ್ಯ ಏರುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತರ ಉಪಯುಕ್ತ ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ.

bbmp
ಆಯುಕ್ತರ ಕಚೇರಿ ಹೊರಡಿಸಿರುವ ನೋಟಿಫಿಕೇಶನ್.

ಈ ಸುತ್ತೋಲೆಯಲ್ಲಿ ಯಾರೂ ಅನಾವಶ್ಯಕವಾಗಿ ಮಾಸ್ಕ್ ಧರಿಸುವ ಅಗತ್ಯತೆ ಇಲ್ಲ. ಈಗಾಗಲೇ ಇಲಾಖೆಯಿಂದ ಯಾರು ಮಾಸ್ಕ್ ಧರಿಸಬೇಕು- ಧರಿಸಬರದು ಎಂಬುದನ್ನ ಸೃಷ್ಟಪಡಿಸಲಾಗಿದೆ. ಕೋವಿಡ್-19 ಶಂಕಿತರು ಹಾಗೂ ಆರೋಗ್ಯ ಪರಿಚಾರಕರು ಮಾತ್ರ ಮಾಸ್ಕ್ ಧರಿಸಬೇಕು. N-95 ಮಾಸ್ಕ್ ಅನ್ನು ಸಾಮಾನ್ಯರು ಬಳಸುವ ಅಗತ್ಯವಿಲ್ಲ. ಶಂಕಿತರು, ಸೋಂಕಿತರು ,ಚಿಕಿತ್ಸೆಗೆ ಒಳಪಡುವವರು ಮಾತ್ರ-N95 ಮಾಸ್ಕ್ ಧರಿಸಬೇಕು.‌ ಇತರರು ತ್ರಿಪಲ್ ಲೇಯರ್ ಸರ್ಜಿಕಲ್ ಮಾಸ್ಕ್ ಧರಿಸಿ ಎಂದು ಆಯುಕ್ತರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ : ತುತ್ತು ಅನ್ನಕ್ಕೂ ಪರದಾಡುತ್ತಿರುವ ಚಿತ್ರದುರ್ಗದ ಅಲೆಮಾರಿ ಜನಾಂಗ; ಹಸಿವು ನೀಗಿಸಲು ಮುಂದಾದ ಮುರುಘಾ ಮಠ
First published: