ಬೆಂಗಳೂರಿನಲ್ಲಿ ಕೊರೋನಾ ತೀವ್ರಗೊಂಡ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ, ಪೊಲೀಸರು: ಇಂದಿನಿಂದ ಬಿಗಿಕ್ರಮ

ಸಂಚಾರಿ ಪೊಲೀಸರ ಥರ ಪ್ರತಿ ಜಂಕ್ಷನ್​​ನಲ್ಲಿ ಇನ್ಮೇಲೆ ಮಾರ್ಷಲ್​​ಗಳು ಇರ್ತಾರೆ. ಮಾಸ್ಕ್ ಹಾಕಿಲ್ಲ ಅಂದ್ರೆ ಸ್ಥಳದಲ್ಲೇ 200 ರೂ ದಂಡವಾಕಿ ಮಾಸ್ಕ್ ಕೊಟ್ಟು ಕಳಿಸ್ತಾರೆ. ಮೊದಲು ನಗರದ ಕೆಲವೆಡೆ ಮಾತ್ರ ಕಾರ್ಯಾಚರಣೆ ಮಾಡ್ತಿದ್ದವರೀಗ ನಗರದ ಪ್ರತಿ ಗಲ್ಲಿಗಲ್ಲಿಯಲ್ಲೂ ಸರ್ಚ್ ಮಾಡ್ತಿದ್ದಾರೆ.

news18-kannada
Updated:June 29, 2020, 12:41 PM IST
ಬೆಂಗಳೂರಿನಲ್ಲಿ ಕೊರೋನಾ ತೀವ್ರಗೊಂಡ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ, ಪೊಲೀಸರು: ಇಂದಿನಿಂದ ಬಿಗಿಕ್ರಮ
ಪೊಲೀಸರ ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು(ಜೂ.29): ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಪೊಲೀಸ್ ಇಲಾಖೆ ಮತ್ತು ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ಕೋವಿಡ್​​-19 ವಿಚಾರದಲ್ಲಿ ಇಷ್ಟು ದಿನ ಒಂದು ಲೆಕ್ಕ ಇತ್ತು, ಆದ್ರೆ ಇನ್ಮೇಲೆ ಇನ್ನೊಂದು ಲೆಕ್ಕ ಅಂತಿದ್ದಾರೆ ಬಿಬಿಎಂಪಿ ಅಧಿಕಾರಿಗಳು.

ಹೌದು, ಪಕ್ಕದ ಅಂಗಡಿಗೆ ಹೋಗೋಕೆ‌ ಮಾಸ್ಕ್ ಯಾಕೆ ಅಂತ ಇನ್ಮೇಲೆ ಬರೋಹಂಗಿಲ್ಲ. ಟೀ ಸಿಗರೇಟ್ ಕುಡ್ಕಂಡ್ ಗುಂಪು ಸೇರಿ ಮಾತಾಡುವಂತಿಲ್ಲ. ಸಭೆ ಸಮಾರಂಭಕ್ಕೆ ಯಾರ್ ಬರ್ತಾರಂತ ರೂಲ್ಸ್ ಬ್ರೇಕ್ ಮಾಡಿದ್ರೆ ಮುಗೀತು‌. ಇನ್ಮೇಲೆ ಪ್ರತಿ ಜೋನ್​​ನಲ್ಲಿ ನಿಮ್ಮ ಮೇಲೆ  ಮಾರ್ಷಲ್‌ ಟೀಂ ಕಣ್ಣಿಟ್ಟಿರುತ್ತೆ. ಮಾರ್ಷಲ್​​ಗಳು ತಾನೇ ಅಂತ ಬೈದು ಹಲ್ಲೆ ಮಾಡಿದ್ರೆ ಕೇಸ್ ಬೀಳುತ್ತೆ. ಜೊತೆಗೆ ಜೈಲಿಗೋಗೋದು ಗ್ಯಾರಂಟಿ ಎನ್ನಲಾಗುತ್ತಿದೆ.

ಹೋಟೆಲ್, ಮಾಲ್, ಶಾಪ್, ಅಂಗಡಿ ಮಾಲೀಕರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲೇಬೇಕು. ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ‌ ಅಂತರವಿರಬೇಕು. ಒಂದು ವೇಳೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಿಲ್ಲ ಅಂದ್ರೆ ಪೊಲೀಸ್​​​ ಮಾರ್ಷಲ್​​ಗಳು ದಾಳಿ ನಡೆಸುತ್ತಾರೆ. ಹೀಗೆ ಪಾರ್ಕ್ ಹಾಗೂ ಮಳಿಗೆ ಯಾವುದಾದ್ರೂ ಸರಿ ರೂಲ್ಸ್ ಬ್ರೇಕ್ ಹಾಕಿದ್ರೆ ಬಂದ್ ಮಾಡುತ್ತಾರೆ.

ಸಂಚಾರಿ ಪೊಲೀಸರ ಥರ ಪ್ರತಿ ಜಂಕ್ಷನ್​​ನಲ್ಲಿ ಇನ್ಮೇಲೆ ಮಾರ್ಷಲ್​​ಗಳು ಇರ್ತಾರೆ. ಮಾಸ್ಕ್ ಹಾಕಿಲ್ಲ ಅಂದ್ರೆ ಸ್ಥಳದಲ್ಲೇ 200 ರೂ ದಂಡವಾಕಿ ಮಾಸ್ಕ್ ಕೊಟ್ಟು ಕಳಿಸ್ತಾರೆ. ಮೊದಲು ನಗರದ ಕೆಲವೆಡೆ ಮಾತ್ರ ಕಾರ್ಯಾಚರಣೆ ಮಾಡ್ತಿದ್ದವರೀಗ ನಗರದ ಪ್ರತಿ ಗಲ್ಲಿಗಲ್ಲಿಯಲ್ಲೂ ಸರ್ಚ್ ಮಾಡ್ತಿದ್ದಾರೆ.

ಇದನ್ನೂ ಓದಿ: Coronavirus Updates: ಭಾರತದಲ್ಲಿ ಕೋವಿಡ್​​-19 ತೀವ್ರತೆ; ಒಂದೇ ದಿನ 19,459 ಕೇಸ್​ ಪತ್ತೆ; 5,48,318 ಸೋಂಕಿತರು

ಪ್ರತಿ ಜೋನ್​​ನಲ್ಲಿ 10 ಮಂದಿ ಮಾರ್ಷಲ್‌ ಟೀಂ ಸ್ಥಳೀಯ ಪೊಲೀಸರ ತಂಡ ನಿಯೋಜನೆ ಮಾಡಿದೆ. ಇನ್ನು ಮಾರ್ಷಲ್​ಗಳು ಕಾರ್ಯಾಚರಣೆ ವೇಳೆ ಹಲ್ಲೆ ಪ್ರಕರಣಗಳು ನಡೆದಿರೋ ಹಿನ್ನಲೆಯಲ್ಲಿ ಈಗಾಗಲೇ ನಗರದಲ್ಲಿ  ಡಿಸಿಪಿಗಳು ಪೀಲ್ಡಿಗಿಳಿದಿದ್ದಾರೆ.ಮದುವೆ, ಗೃಹ ಪ್ರವೇಶ, ಸಭೆ, ಸಮಾರಂಭ ಏನೇ ಇರಲಿ ರೂಲ್ಸ್ ಕಡ್ಡಾಯವಾಗಿ ಫಾಲೋ ಮಾಡ್ಬೇಕು. ಒಂದು ವೇಳೆ ಬೇಜವ್ದಾರಿತನ ತೋರಿಸಿದ್ರೆ ಕೇಸ್ ಹಾಕಲಿದ್ದಾರೆ. ಹೀಗೆ ದಕ್ಷಿಣ ವಿಭಾಗದಲ್ಲಿ ಒಂದೇ ದಿನ 750 ಕೇಸ್ ಹಾಕಿದ್ದು, 1.5 ಲಕ್ಷ ದಂಡ ವಸೂಲಿ ಮಾಡಿದ್ದಾರೆ. ಜೊತೆಗೆ ಒಂದೇ ದಿನದಲ್ಲಿ ಎರಡು ಪಾರ್ಕ್, ಎರಡು ಬಾರ್ ಮಳಿಗೆ, ಜ್ಯುವೆಲ್ಲರಿ ಶಾಪ್ ಸೇರಿದಂತೆ ಬೆಂಗಳೂರಿನಲ್ಲಿ‌ ಐವತ್ತಕ್ಕೂ ಶಾಪ್​​ಗಳನ್ನ  ಮಾರ್ಷಲ್​​ಗಳು ಮತ್ತು ಪೊಲೀಸರು ಬಂದ್​ ಮಾಡಿದ್ದಾರೆ.
First published: June 29, 2020, 12:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading