ಚಾಮರಾಜನಗರದಲ್ಲಿ ನಾಳೆಯಿಂದ ಸಂತೆ ತೆರೆಯಲು ಅವಕಾಶ; ಷರತ್ತುಗಳು ಅನ್ವಯ

ಸಂತೆಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸುತ್ತಿರುವ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು, ಕನಿಷ್ಠ ಒಂದು ಮೀಟರ್ ಭೌತಿಕ ಅಂತರ ಕಾಪಾಡಿಕೊಂಡು  ವ್ಯಾಪಾರ ವಹಿವಾಟು ನಡೆಸುವಂತೆ ಸ್ಥಳೀಯ ಆಡಳಿತದಿಂದ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯ ಸಂಸ್ಥೆಗಳ ಮುಖ್ಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ 

news18-kannada
Updated:July 31, 2020, 11:15 PM IST
ಚಾಮರಾಜನಗರದಲ್ಲಿ ನಾಳೆಯಿಂದ ಸಂತೆ ತೆರೆಯಲು ಅವಕಾಶ; ಷರತ್ತುಗಳು ಅನ್ವಯ
ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ
  • Share this:
ಚಾಮರಾಜನಗರ(ಜುಲೈ 31): ಲಾಕ್ ಡೌನ್ ಹಿನ್ನಲೆಯಲ್ಲಿ ಕಳೆದ ನಾಲ್ಕೂವರೆ ತಿಂಗಳಿಂದ ಸ್ಥಗಿತಗೊಂಡಿದ್ದ ಸಂತೆಗಳನ್ನು ನಾಳೆಯಿಂದ ನಡೆಸಲು ಷರತ್ತಬದ್ಧ ಅನುಮತಿ ನೀಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಗ್ರಾಮೀಣ ಭಾಗದ ಮಾರುಕಟ್ಟೆಗಳೆಂದೇ ಹೆಸರಾದ ಸಂತೆಗಳು ಜಿಲ್ಲೆಯ ವಿವಿದೆಡೆ  ವಾರಕ್ಕೊಮ್ಮೆ ನಡೆಯುತ್ತವೆ. ಜಾನುವಾರುಗಳ ಹಾಗು ವ್ಯವಸಾಯೋತ್ಪನ್ನಗಳ ವ್ಯಾಪಾರ ವಹಿವಾಟು ನಡೆಯುವ ಸಂತೆಗಳಲ್ಲಿ ಸಾವಿರಾರು ಮಂದಿ ರೈತರು ಹಾಗು ಗ್ರಾಮೀಣ ಪ್ರದೇಶದ ಜನ  ಸೇರಿ ಮಾರಾಟ ಹಾಗು ಖರೀದಿಯಲ್ಲಿ ತೊಡಗುವುದು ಸಾಮಾನ್ಯ. ಇಂತಹ ಪ್ರದೇಶಗಳಲ್ಲಿ ಕೊರೋನಾ ಮಹಾಮಾರಿ ಸುಲಭವಾಗಿ ಹರಡುವ ಸಾಧ್ಯತೆಗಳ ಹಿನ್ನಲೆಯಲ್ಲಿ ಸಂತೆಗಳನ್ನು ನಿಷೇಧಿಸಲಾಗಿತ್ತು.

ಇದರಿಂದ ಗ್ರಾಮೀಣ ಭಾಗದ ಜನರು ಹಾಗು ರೈತರು ತೊಂದರೆಗೊಳಗಾಗಿದ್ದರು. ತಾವು ಬೆಳೆದ ಪದಾರ್ಥಗಳನ್ನು ಮಾರಾಟ ಮಾಡಲಾಗದೆ ರೈತರು ಸಂಕಷ್ಟಕ್ಕೀಡಾಗಿದ್ದರು. ಗ್ರಾಮಾಂತರ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಗರಬಡಿದಂತಾಗಿತ್ತು. ಈ ಹಿನ್ನಲೆಯಲ್ಲಿ ಜಿಲ್ಲೆಯ ಆರ್ಥಿಕ ಚಟುವಟಿಕೆಗಳನ್ನು ಪುನಶ್ಚೇತನಗೊಳಿಸಿ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ  ಕೋವಿಡ್-19 ನಿಬಂಧನೆಗಳನ್ನು ಪಾಲಿಸುವ ಷರತ್ತಿಗೊಳಪಟ್ಟು ಅನುಮತಿ ನೀಡಿ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಆದೇಶ ಹೊರಡಿಸಿದ್ದಾರೆ.

ಸಂತೆ ನಡೆಯುವ ಪ್ರದೇಶಗಳನ್ನು ಸಂತೆ ನಡೆಯುವ ಮುಂಚೆ ಹಾಗು ಮುಕ್ತಾಯವಾದ ನಂತರ ಸೋಡಿಯಂ  ಹೈಫೋಕ್ಲೋರೈಡ್ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ಮೂಲಕ ಶುಚಿಗೊಳಿಸಬೇಕು, ಸಂತೆಗಳನ್ನು ಆಯಾ ಸ್ಥಳೀಯ ಆಡಳಿತವಾದ ಗ್ರಾಮಪಂಚಾಯ್ತಿ, ಪಟ್ಟಣಪಂಚಾಯ್ತಿ ಹಾಗು ಪುರಸಭೆಯ ಮುಖ್ಯಸ್ಥರು ಮೇಲುಸ್ತುವಾರಿಯಲ್ಲಿ ನಡೆಸಬೇಕು.

ಇನ್ಮುಂದೆ ಭಾನುವಾರ ಲಾಕ್​ಡೌನ್​ ಇಲ್ಲ, ರಾತ್ರಿ ನಿಷೇಧಾಜ್ಞೆಯೂ ತೆರವು; ರಾಜ್ಯ ಸಂಪೂರ್ಣ ಫ್ರೀ

ಸಂತೆಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸುತ್ತಿರುವ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು, ಕನಿಷ್ಠ ಒಂದು ಮೀಟರ್ ಭೌತಿಕ ಅಂತರ ಕಾಪಾಡಿಕೊಂಡು  ವ್ಯಾಪಾರ ವಹಿವಾಟು ನಡೆಸುವಂತೆ ಸ್ಥಳೀಯ ಆಡಳಿತದಿಂದ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯ ಸಂಸ್ಥೆಗಳ ಮುಖ್ಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ

ಸಂತೆ ನಡೆಯುವ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಚತೆ ಹಾಗು ನೈರ್ಮಲ್ಯತೆ ಕಾಪಾಡಲು ಅಗತ್ಯವಿರುವ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕು, ಸಂತೆಗೆ ಆಗಮಿಸುವ ಸಾರ್ವಜನಿಕರು ಹಾಗು ರೈತರು ಕಡ್ಡಾಯವಾಗಿ ಮಾಸ್ಕ್ ಧರಿಸಿರುವುದನ್ನು ಪರಿಶೀಲಿಸಬೇಕು, ಕೋವಿಡ್-19 ಸುರಕ್ಷತಾ ಕ್ರಮಗಳನ್ನು ಪಾಲಿಸುವ ಪ್ರಕಟಣೆಯನ್ನು ಬೋರ್ಡ್ ಹಾಗು ಬ್ಯಾನರ್ ಗಳ ಮೂಲಕ ಪ್ರಚುರಪಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸ್ಥಳೀಯ ಸಂಸ್ಥೆಗಳಿಗೆ ಆದೇಶ ನೀಡಿದ್ದಾರೆ.

ಸೆಕ್ಟರ್ ಮ್ಯಾಜಿಸ್ಟ್ರೇಟ್ ಗಳು ಆಗಿಂದಾಗ್ಗೆ ಸಂತೆ ನಡೆಯುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು, ನಿಗದಿತ ದಿನಾಂಕ ಹಾಗೂ ಸಮಯದಲ್ಲಿ ಸಂತೆ ನಡೆಸಬೇಕು ಎಂದು ತಾಖೀತು ಮಾಡಿ  ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
Published by: Latha CG
First published: July 31, 2020, 11:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading