ಹುಬ್ಬಳ್ಳಿ ಎಪಿಎಮ್‌ಸಿ ತರಕಾರಿ ದಲ್ಲಾಳಿಗಳ ವಿರುದ್ಧ ಬಸವರಾಜ ಹೊರಟ್ಟಿ ಗರಂ; ಸೂಕ್ತ ಕ್ರಮದ ಆಶ್ವಾಸನೆ ನೀಡಿದ ಶೆಟ್ಟರ್‌

ಎಪಿಎಮ್‌ಸಿ ಅಧ್ಯಕ್ಷ, ಕಾರ್ಯದರ್ಶಿ ಕತ್ತೆ ಕಾಯುತ್ತಿದ್ದಾರಾ? ರೈತರು ಮತ್ತು ಗ್ರಾಹಕರಿಗೆ ದಲ್ಲಾಳಿಗಳಿಂದ ಮೋಸ ಆಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ.

ಬಸವರಾಜ್​ ಹೊರಟ್ಟಿ

ಬಸವರಾಜ್​ ಹೊರಟ್ಟಿ

  • Share this:
ಹುಬ್ಬಳ್ಳಿ (ಏಪ್ರಿಲ್ 16); ತರಕಾರಿ ದಲ್ಲಾಳಿಗಳ ವಿರುದ್ಧ ಜೆಡಿಎಸ್‌ ಹಿರಿಯ ನಾಯಕ ಬಸವರಾಜ್ ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ನಡೆದಿದೆ. ಸಚಿವ ಜಗದೀಶ್ ಶೆಟ್ಟರ್ ಮತ್ತು ಮೂಜಗು ಸ್ವಾಮೀಜಿಗಳ ಎದುರು ಹೊರಟ್ಟಿಯವರು ಗರಂ ಆಗಿದ್ದಾರೆ.

ದಲ್ಲಾಳಿಗಳು ಲಾಕ್‌ಡೌನ್ ಪರಿಸ್ಥಿತಿಯ ದುರ್ಲಾಭ ಮಾಡಿ ಕೊಳ್ಳುತ್ತಿದ್ದಾರೆ. ರೈತರಿಂದ ಹದಿನೇಳು ರೂಪಾಯಿಗೆ ಕೆಜಿ ಹೀರೇಕಾಯಿ ಖರೀದಿಸುತ್ತಾರೆ. ಮಾರುಕಟ್ಟೆಯಲ್ಲಿ ಅದನ್ನೇ ಎಪ್ಪತ್ತು ರೂಪಾಯಿಗೆ ಮಾರುತ್ತಾರೆ. ದಲ್ಲಾಳಿಗಳು ಎಪಿಎಮ್‌ಸಿಯಲ್ಲಿ ರೈತರ ತರಕಾರಿ ಕಿತ್ತುಕೊಂಡು ಕಳಿಸುತ್ತಾರೆ. ಬೆಳೆಗಳಿಗೆ ಮನಬಂದಂತೆ ದರ ನಿಗದಿಪಡಿಸುತ್ತಾರೆ. ನನ್ನ ಹೊಲದಲ್ಲಿ ಬೆಳೆದ ಬೆಳೆಗೂ ಇದೇ ಪರಿಸ್ಥಿತಿಯಿದೆ.

ಎಪಿಎಮ್‌ಸಿ ಅಧ್ಯಕ್ಷ, ಕಾರ್ಯದರ್ಶಿ ಕತ್ತೆ ಕಾಯುತ್ತಿದ್ದಾರಾ? ರೈತರು ಮತ್ತು ಗ್ರಾಹಕರಿಗೆ ದಲ್ಲಾಳಿಗಳಿಂದ ಮೋಸ ಆಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಎಪಿಎಮ್‌ಸಿಯಲ್ಲಿ ಏಕಸ್ವಾಮ್ಯ ಹೊಂದಿರುವ ತರಕಾರಿ ದಲ್ಲಾಳಿಗಳ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಜಗದೀಶ್ ಶೆಟ್ಟರ್, ದಲ್ಲಾಳಿಗಳ ಲಾಭಕೋರತನದ ವಿಷಯ ಗಮನಕ್ಕೆ ಬಂದಿದೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಸಂದರ್ಭದಲ್ಲಿ ಕಠಿಣ ನಿರ್ಧಾರ ಕೈಗೊಳ್ಳುತ್ತೇವೆ. ರೈತರ ಸಮಸ್ಯೆ ಬಗೆಹರಿಸುತ್ತೇವೆ ಎಂದು  ಭರವಸೆ ನೀಡುವ ಮೂಲಕ ಹೊರಟ್ಟಿಯವರನ್ನು ಸಮಾಧಾನಪಡಿಸಿದ್ದಾರೆ.

ಇದನ್ನೂ ಓದಿ : ರಾಜ್ಯ ರಾಜಧಾನಿಯನ್ನೇ ಓವರ್ ಟೇಕ್ ಮಾಡಿದ ಮೈಸೂರು; ಕೊರೋನಾ ಸೋಂಕಿತರ ಪಟ್ಟಿಯಲ್ಲಿ ಮೊದಲ ಸ್ಥಾನದ ಕುಖ್ಯಾತಿ
First published: