HOME » NEWS » Coronavirus-latest-news » BASAVARAJ BOMMAYI SAYS COVID SECOND WAVE IS VERY STRONG SESR

ನಮ್ಮ ಇಮ್ಯೂನಿಟಿಯನ್ನೂ ಸೋಲಿಸುವ ತಾಕತ್ತು ಸೋಂಕಿಗೆ ಇದೆ; ಸಚಿವ ಬೊಮ್ಮಯಿ ಕಳವಳ

ಸೋಂಕು ತೀವ್ರ ಸ್ವರೂಪ ಹೊಂದಿರುವ ಹಿನ್ನಲೆ ಜನರು ಕೂಡ ಮುನ್ನೆಚ್ಚರಿಕೆ ವಹಿಸಬೇಕು.  ಹೋಂ ಐಸೋಲೇಶನ್ ನಲ್ಲಿದ್ದವರು ಏನಾದರೂ ತೊಂದರೆ ಕಾಣಿಸಿಕೊಂಡ ತಕ್ಷಣ ಚಿಕಿತ್ಸೆಗೆ ಒಳಗಾಗಬೇಕು

news18-kannada
Updated:May 13, 2021, 8:56 PM IST
ನಮ್ಮ ಇಮ್ಯೂನಿಟಿಯನ್ನೂ ಸೋಲಿಸುವ ತಾಕತ್ತು ಸೋಂಕಿಗೆ ಇದೆ; ಸಚಿವ ಬೊಮ್ಮಯಿ ಕಳವಳ
ಸಚಿವ ಬಸವರಾಜ್​ ಬೊಮ್ಮಾಯಿ.
  • Share this:
ಹಾವೇರಿ (ಮೇ. 13) : ಕೊರೊನಾ ಎರಡನೆ ಅಲೆ ವೇಗವಾಗಿ ಹರಡುತ್ತಿದೆ. ಈ ಸೋಂಕು ಎಷ್ಟು ಶಕ್ತಿಯುತವಾಗಿದೆ ಎಂದರೆ  ನಮ್ಮ ಔಷಧಿಯನ್ನೂ ಮೀರಿಸುವಂತಿದೆ. ಈ ಮೂಲಕ ನಮ್ಮ ಇಮ್ಯುನಿಟಿಯನ್ನೂ ಎದುರಿಸುವಷ್ಟು ಶಕ್ತಿ ಪಡೆದಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಳವಳ ವ್ಯಕ್ತಪಡಿಸಿದ್ದಾರೆ.  ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಲಾಕ್ ಡೌನ್ ಗೆ ಜನರು ಸ್ವಯಂಪ್ರೇರಿತವಾಗಿ ಸಹಕಾರ ಕೊಡಬೇಕು. ಜನರ ಸಹಕಾರದಿಂದ ಲಾಕ್ ಡೌನ್ ಸಂಪೂರ್ಣ ಯಶಸ್ವಿ ಆಗುತ್ತದೆ. ಕೊರೋನಾ ವೇಗವಾಗಿ ಹರಡುತ್ತದೆ. ಹೀಗಾಗಿ ಜನರು ಹೊರಗಡೆ ಓಡಾಡುವಾಗ ಗಂಭೀರವಾಗಿ ವಿಚಾರ ಮಾಡಬೇಕು. ಬಲಪ್ರಯೋಗ ಇಲ್ಲದೆ ನಿಯಂತ್ರಣ ಮಾಡಬೇಕು ಎಂಬ ಆದೇಶವಿದೆ. ಪೊಲೀಸ್ ಇಲಾಖೆ ಪರಿಸ್ಥಿತಿ ನಿಯಂತ್ರಣಕ್ಕೆ ಹರಸಾಹಸ ಮಾಡುತ್ತಿದೆ. ಮೊದಲನೆ ಅಲೆಯ ಸಮಯದಲ್ಲಿ ಉಪಚಾರದಿಂದ ಸಾವಿನ‌ ದವಡೆಗೆ ಹೋಗದಂತೆ ತಡೆಗಟ್ಟಲು ಸಾಧ್ಯವಿತ್ತು.

ಸೋಂಕು ತೀವ್ರ ಸ್ವರೂಪ ಹೊಂದಿರುವ ಹಿನ್ನಲೆ ಜನರು ಕೂಡ ಮುನ್ನೆಚ್ಚರಿಕೆ ವಹಿಸಬೇಕು.   ಪ್ರಾರಂಭದಲ್ಲೇ ಇದಕ್ಕೆ ಕಠಿಣ ಕ್ರಮ‌ ತೆಗೆದುಕೊಳ್ಳಬೇಕು. ಹೋಂ ಐಸೋಲೇಶನ್ ನಲ್ಲಿದ್ದವರು ಏನಾದರೂ ತೊಂದರೆ ಕಾಣಿಸಿಕೊಂಡ ತಕ್ಷಣ ಚಿಕಿತ್ಸೆಗೆ ಒಳಗಾಗಬೇಕು. ಹಗಲು ರಾತ್ರಿ ಎನ್ನದೆ ಆಕ್ಸಿಜನ್ ಪೂರೈಕೆ ಬಗ್ಗೆ ಪ್ರಯತ್ನ ಮಾಡುತ್ತಿದ್ದೇವೆ. ಎಲ್ಲೆಲ್ಲಿಂದ ಸಾಧ್ಯವೋ ಅಲ್ಲಿಂದ ಆಕ್ಸಿಜನ್‌ ತರಿಸುವ ವ್ಯವಸ್ಥೆ ಮಾಡುತ್ತಿದ್ದೇವೆ. ಆಕ್ಸಿಜನ್ ಅನ್ನು ಪ್ರತಿನಿತ್ಯ ವ್ಯವಸ್ಥೆ ಮಾಡಬೇಕು. ಲಾಕ್​ಡೌನ್​ ಬಳಿಕ ಸೋಂಕಿನ ಪ್ರಮಾಣ ಕೊಂಚ ತಗ್ಗೊದೆ. ಹದಿನಾಲ್ಕು ದಿನಗಳ‌ ನಂತರ ಇದರ ಫಲಿತಾಂಶ ಗೊತ್ತಾಗಲಿದೆ. ಕಡಿಮೆ ಆಗುತ್ತದೆ ಎಂಬ ವಿಶ್ವಾಸವಿದೆ, ತಜ್ಞರು ಕೂಡ ಅದನ್ನೆ ಹೇಳುತ್ತಿದ್ದಾರೆ ಎಂದರು.

ಇದನ್ನು ಓದಿ: ವಿಶೇಷ ಪ್ಯಾಕೇಜ್ ​ಪರಿಹಾರವಿಲ್ಲ; ಬಿಪಿಎಲ್​ ಕಾರ್ಡ್​ಗೆ 5 ಕೆಜಿ ಅಕ್ಕಿ; ಸಿಎಂ ಬಿಎಸ್​ವೈ

ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ:

ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ. ದಿನವೊಂದಕ್ಕೆ ಏಳು ಮೆಟ್ರಿಕ್ ಟನ್ ಆಮ್ಲಜನ್ ಅವಶ್ಯಕತೆ ಇದೆ. ಬೇರೆ ಬೇರೆ ಮೂಲಗಳಿಂದ ಏಳು ಮೆಟ್ರಿಕ್ ಟನ್ ಪೂರೈಕೆಯಾಗುತ್ತಿದೆ. ಸಮ ಪ್ರಮಾಣದಲ್ಲಿ ದಿನಕ್ಕೆ ಎಷ್ಟು ಅಗತ್ಯವೋ ಅಷ್ಟು ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆಯಾಗುತ್ತಿದ್ದು ಸದ್ಯಕ್ಕೆ ಆಮ್ಲಜನಕದ ಯಾವುದೇ ಕೊರತೆ ಇಲ್ಲ. ಜಿಲ್ಲಾ ಆಸ್ಪತ್ರೆಗೆ ಬೇಕಾದ ಪ್ರಮಾಣದ ಆಕ್ಸಿಜನ್ ಪೂರೈಕೆಯಾಗುತ್ತಿದೆ.  ಕೆ.ಎಲ್. ಮೆಡಿಕಲ್ ಆಕ್ಸಿಜನ್ ದಾಸ್ತಾನು ಪ್ಲಾಂಟ್ ಆಸ್ಪತ್ರೆ ಆವರಣದಲ್ಲಿದೆ. ಬೇರೆ ಬೇರೆ ಮೂಲಗಳಿಂದ ಜಿಲ್ಲಾ ಆಸ್ಪತ್ರೆಗೆ ಆಕ್ಸಿಜನ್ ಪೂರೈಕೆಯಾಗುತ್ತಿದೆ.  2.50 ಮೆ.ಟನ್ ಲಿಕ್ವಿಡ್ ಆಕ್ಸಿಜನ್, 1.50 ಕಂಟೇನರ್ ಮೂಲಕ ಹಾಗೂ 1.50 ಜಂಬೋ ಸಿಲೆಂಡರ್ ಮೂಲಕ ಆಕ್ಸಿಜನ್ ಪೂರೈಕೆಯಾಗುತ್ತಿದೆ. ಸದ್ಯ ಯಾವುದೇ ತೊಂದರೆ ಇರುವುದಿಲ್ಲ ಎಂದು ತಿಳಿಸಿದರು.

ಆಮ್ಲಜನಕದ ಪೂರೈಕೆ ಪ್ರಮಾಣ ಹೆಚ್ಚಳಮಾಡಲು ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ವಿಶೇಷ ಟ್ಯಾಂಕರ್ ವ್ಯವಸ್ಥೆಮಾಡಿ ಪ್ರತಿ ದಿನ ಮೂರು ಮೆಟ್ರಿಕ್ ಟನ್ ಆಕ್ಸಿಜನ್ ಹೆಚ್ಚುವರಿಯಾಗಿ ತರಿಸಿಕೊಳ್ಳಲು ಕ್ರಮವಹಿಸಲಾಗಿದೆ. ರಾಜ್ಯ ವಿಪತ್ತು ನಿಧಿಯ (ಎಸ್.ಡಿ.ಆರ್.ಎಫ್) ಅನುದಾನದಲ್ಲಿ ಟ್ಯಾಂಕರ್ ಖರೀದಿಗೆ ಸೂಚನೆ ನೀಡಲಾಗಿದೆ. 200 ಆಮ್ಲಜನಕ ಕಾನ್ಸಂಟ್ರೇಟರ್ ಖರೀದಿಗೆ ಸೂಚನೆ ನೀಡಲಾಗಿದೆ. ಜಿಲ್ಲಾಆಸ್ಪತ್ರೆ ಮತ್ತು ಬೇರೆ ಬೇರೆ ಕೋವಿಡ್ ಆರೈಕೆ ಕೇಂದ್ರಗಳಿಗೆ ಕಾನ್ಸಂಟ್ರೇಟರ್ ಪೂರೈಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
Published by: Seema R
First published: May 13, 2021, 8:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories