‘ನಿಜಾಮುದ್ದೀನ್ ಧಾರ್ಮಿಕ ಸಭೆಗೆ ಹೋಗಿದ್ದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ; ಜನರಿಗೆ ಆತಂಕ ಬೇಡ‘ - ಬೊಮ್ಮಾಯಿ

ಇನ್ನು, ಈ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ತಮಿಳುನಾಡಿನ 50 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. 19 ಜನರು ಕಿರ್ಗಿಸ್ತಾನ್, 20 ಜನರು ಇಂಡ್ಯೋನೇಷ್ಯಾ, 4 ಜನರು ದಕ್ಷಿಣ ಆಫ್ರಿಕಾ, 3 ಜನರು ಗ್ಯಾಂಬಿಯಾ ಹಾಗೂ ಅಮೇರಿಕ, ಯು.ಕೆ, ಪ್ರಾನ್ಸ್, ಕೀನ್ಯಾದ ತಲಾ ಒಬ್ಬರನ್ನು ಕ್ವಾರಂಟೈನ ಗೆ ಒಳಪಡಿಸಲಾಗಿದೆ. ಇದರಲ್ಲಿ ಕೆಲವರು ದೆಹಲಿಯ ನಿಜಾಮುದ್ದೀನ್​ನಲ್ಲಿ ನಡೆದ ಮರ್ಕಾಜ್ ಧಾರ್ಮಿಕ ಸಭೆಗೆ ಹಾಜರಾಗಿರುವ ಶಂಕೆ ವ್ಯಕ್ತವಾಗಿದೆ.

news18-kannada
Updated:April 1, 2020, 2:46 PM IST
‘ನಿಜಾಮುದ್ದೀನ್ ಧಾರ್ಮಿಕ ಸಭೆಗೆ ಹೋಗಿದ್ದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ; ಜನರಿಗೆ ಆತಂಕ ಬೇಡ‘ - ಬೊಮ್ಮಾಯಿ
ಗೃಹ ಸಚಿವ ಬಸವರಾಜ ಬೊಮ್ಮಾಯಿ
  • Share this:
ಬೆಂಗಳೂರು(ಏ.01): ಕೊರೋನಾ ತಡೆಗೆ ದೇಶದಾದ್ಯಂತ ಲಾಕ್​​​ಡೌನ್​​ ಜಾರಿ ಮಾಡಿದ ಬೆನ್ನಲ್ಲೇ ದೆಹಲಿಯ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯೀಗ ಇಡೀ ಭಾರತಕ್ಕೆ ವೈರಸ್ ಹಬ್ಬಿಸಿರುವ ಭಯ ಹುಟ್ಟಿಸಿದೆ. ಈ ಸಭೆಯಲ್ಲಿ ಭಾಗಿಯಾಗಿದ್ದ ಕರ್ನಾಟಕದ 300 ಜನರ ಪೈಕಿ 12 ಜನರ ವರದಿ ನೆಗೆಟಿವ್ ಬಂದಿದೆ. ಇವರಲ್ಲಿ 40 ಜನರನ್ನು ಪತ್ತೆ ಹಚ್ಚಿ ಕ್ವಾರಂಟೈನ್​ ಮಾಡಲಾಗುತ್ತಿದೆ. ಈ ಬೆನ್ನಲ್ಲೀಗ ದೆಹಲಿಯ ನಿಜಾಮುದ್ದೀನ್ ಜಮಾತ್ ಧಾರ್ಮಿಕ ಸಭೆಗೆ ಹೋಗಿರುವವರ ಕುರಿತಾದ ಮಾಹಿತಿಯನ್ನು ಗೃಹ ಸಚಿವ ಬಸವರಾಜು ಬೊಮ್ಮಾಯಿ ನ್ಯೂಸ್ 18 ಕನ್ನಡದ ಜತೆಗೆ ಹಂಚಿಕೊಂಡಿದ್ದಾರೆ.

ನಮ್ಮ ರಾಜ್ಯದಲ್ಲಿ ಕರೋನಾ ಪ್ರಕರಣ ಹತೋಟಿಯಲ್ಲಿ ಇತ್ತು. ಆದರೀಗ ನಿಜಾಮುದ್ದೀನ್ ಪ್ರಕರಣದಿಂದ ರಾಜ್ಯಕ್ಕೆ ಕರೋನಾ ಸ್ವಲ್ಪ ಸವಾಲ್ ಆಗಿದೆ. ಈ ಪ್ರಕರಣದಿಂದ ರಾಜ್ಯದಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ಹೆಚ್ಚಾಗುವ ಆತಂಕ ಎದುರಾಗಿದೆ. ಇನ್ನು ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ 50ಕ್ಕೂ ಹೆಚ್ಚು ಜನ ಬೆಂಗಳೂರಿಗೆ ಬಂದಿದ್ದಾರೆ. ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ ಎಂದರು ಗೃಹ ಸಚಿವ ಬಸವರಾಜು ಬೊಮ್ಮಾಯಿ.

ಇನ್ನು, ದೆಹಲಿ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದವರು ಒಟ್ಟು 62 ಮಂದಿ, ಇದರಲ್ಲಿ 12 ವಿದೇಶಿಗರು. ಈ ಪೈಕಿ ರಾಜ್ಯದ 50 ಮಂದಿಯನ್ನು ಕ್ವಾರಂಟೈನ್​​ನಲ್ಲಿ ಇಡಲಾಗಿದೆ. ಜತೆಗೆ ಅವರಿಗೆ ಹೆಲ್ತ್ ಚೆಕ್​​ ಮಾಡಲಾಗಿದೆ. ಕರ್ನಾಟಕದ ಮೂಲದವರು ಬೇರೆಬೇರೆ ಜಿಲ್ಲೆಗಳಿಂದ 342 ಮಂದಿ ದೆಹಲಿಗೆ ಹೋಗಿದ್ದರು. ಆ 342 ಜನರ ಮಾಹಿತಿ ನಮ್ಮ ಬಳಿ ಇದೆ , ಈಗ ಅವರ ಟ್ರಾವಲ್ ಹಿಸ್ಟರಿ ಪಡೆಯಲಾಗ್ತಿದೆ. ಇವತ್ತು ರಾತ್ರಿಯೊಳಗೆ ಈ ಪ್ರಕರಣ ಒಂದು ಹಂತಕ್ಕೆ ಬರುತ್ತೆ ಎಂದರು.

ಹೀಗೆ ಮುಂದುವರೆದ ಅವರು, ನಿಜಾಮುದ್ದೀನ್ ಪ್ರಕರಣದಿಂದ ರಾಜ್ಯದ ಜನರು ಭಯಪಡುವ ಅಗತ್ಯವಿಲ್ಲ. ಜನರು ಸಂಯಮದಿಂದ ಇರಬೇಕು ಸರ್ಕಾರ ಕೂಡಲೇ ಕ್ರಮ ಕೈಗೊಂಡಿದೆ. ಸಭೆಗೆ ಹೋಗಿದ್ದವರು ದಯವಿಟ್ಟು ನೀವೇ ಬಂದು ಚೆಕ್ ಮಾಡಿಸಿಕೊಳ್ಳಲಿ. ಸಮುದಾಯದ ಮುಖಂಡರು ಇದಕ್ಕೆ ಸಹಕಾರ ಕೊಡಬೇಕು. ಕೇಂದ್ರ ಸರ್ಕಾರ ನಿಜಾಮುದ್ದೀನ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ನಿಜಾಮುದ್ದೀನ್ ಸಭೆಗೆ ಹೋಗಿದ್ದವರನ್ನ ಹೋಮ್ ಕ್ವಾರಂಟೈನ್ ಮಾಡುವಂತೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಸೂಚಿಸಿದೆ ಎಂದು ಹೇಳಿದರು.

ಇದನ್ನೂ ಓದಿ: ಭಾರತದಲ್ಲಿ ಮುಂದುವರೆದ ಕೊರೋನಾ ಆರ್ಭಟ; 1,637 ಮಂದಿಗೆ ಸೋಂಕು, 38ಕ್ಕೇರಿದ ಸಾವಿನ ಸಂಖ್ಯೆ

ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ನಡೆದ ಪ್ರಾರ್ಥನೆಯಲ್ಲಿ ದೇಶ ಹಾಗೂ ವಿದೇಶಗಳಿಂದ ಸುಮಾರು 4 ಸಾವಿರ ಮಂದಿ ಭಾಗವಹಿದ್ದರು. ಇಲ್ಲಿ ಕೊರೋನಾ ತಗುಲಿರುವ ಪರಿಣಾಮ ನಿನ್ನೆ ದೆಹಲಿಯೊಂದರಲ್ಲೇ ತೆಲಂಗಾಣದ 6 ಮಂದಿ ಸೇರಿ 10 ಮಂದಿ ಸಾವನ್ನಪ್ಪಿದ್ದರು. ಕರ್ನಾಟಕದ ಶಿರಾದಲ್ಲಿ ಕೊರೋನಾ ಸೋಂಕು ಸಾವನ್ನಪ್ಪಿದ ವ್ಯಕ್ತಿಯೂ ಸಹ ದೆಹಲಿಯಲ್ಲಿ ನಡೆದ ಆ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದ ಎಂದು ದೃಢಪಟ್ಟಿದೆ.

ಇನ್ನು, ಈ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ತಮಿಳುನಾಡಿನ 50 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. 19 ಜನರು ಕಿರ್ಗಿಸ್ತಾನ್, 20 ಜನರು ಇಂಡ್ಯೋನೇಷ್ಯಾ, 4 ಜನರು ದಕ್ಷಿಣ ಆಫ್ರಿಕಾ, 3 ಜನರು ಗ್ಯಾಂಬಿಯಾ ಹಾಗೂ ಅಮೇರಿಕ, ಯು.ಕೆ, ಪ್ರಾನ್ಸ್, ಕೀನ್ಯಾದ ತಲಾ ಒಬ್ಬರನ್ನು ಕ್ವಾರಂಟೈನ ಗೆ ಒಳಪಡಿಸಲಾಗಿದೆ. ಇದರಲ್ಲಿ ಕೆಲವರು ದೆಹಲಿಯ ನಿಜಾಮುದ್ದೀನ್​ನಲ್ಲಿ ನಡೆದ ಮರ್ಕಾಜ್ ಧಾರ್ಮಿಕ ಸಭೆಗೆ ಹಾಜರಾಗಿರುವ ಶಂಕೆ ವ್ಯಕ್ತವಾಗಿದೆ.
First published:April 1, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading