HOME » NEWS » Coronavirus-latest-news » BASANAGOUDA PATIL YATNAL SAYS CM BSY WORK NOT SATISFIER IN COVID MANAGEMENT SESR

ಕೋವಿಡ್​ ನಿರ್ವಹಣೆಯಲ್ಲಿ ಸಿಎಂ ಕಾರ್ಯ ತೃಪ್ತಿ ತಂದಿಲ್ಲ; ಬಿಎಸ್​ವೈ ವಿರುದ್ಧ ಮತ್ತೆ ತಿರುಗಿಬಿದ್ದ ಯತ್ನಾಳ್​

ಮುಖ್ಯಮಂತ್ರಿಗಳು ಕೇವಲ ಕಾವೇರಿಯಲ್ಲಿ ನಾಲ್ಕು ಚೇರ್ ಹಾಕಿ ಸಭೆ ಮಾಡುತ್ತಾರೆ. ಕೆಲ ಮಾಧ್ಯಮಗಳು ದೊಡ್ಡ ಸಭೆ ಅಂತ ಸುದ್ದಿ ಮಾಡುತ್ತಾರೆ. ಕೊರೊನಾ ನಿಯಂತ್ರಣದಲ್ಲಿ ಮುಖ್ಯ ಮಂತ್ರಿಗಳ ಕೆಲಸ ತೃಪ್ತಿ ತಂದಿಲ್ಲ

news18-kannada
Updated:May 17, 2021, 4:04 PM IST
ಕೋವಿಡ್​ ನಿರ್ವಹಣೆಯಲ್ಲಿ ಸಿಎಂ ಕಾರ್ಯ ತೃಪ್ತಿ ತಂದಿಲ್ಲ; ಬಿಎಸ್​ವೈ ವಿರುದ್ಧ ಮತ್ತೆ ತಿರುಗಿಬಿದ್ದ ಯತ್ನಾಳ್​
ಬಸನಗೌಡ ಪಾಟೀಲ್ ಯತ್ನಾಳ
  • Share this:
ಬೆಂಗಳೂರು (ಮೇ. 17): ಕೊರೋನಾ ನಿಯಂತ್ರಣ ವಿಚಾರದಲ್ಲಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರ ಕಾರ್ಯ ನಮಗೆ ತೃಪ್ತಿ ತಂದಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇರವಾಗಿ ಆರೋಪಿಸಿದ್ದಾರೆ. ಆರೋಗ್ಯ ಸಚಿವರ ಭೇಟಿ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಆಕ್ಸಿಜನ್​, ಲಸಿಕೆ ಸಮಸ್ಯೆ ಕುರಿತು ರಾಜ್ಯದ ಪರ ಸಂಸದರು ಧ್ವನಿ ಎತ್ತದ ವಿಚಾರ ‌ಕುರಿತು ಮಾತನಾಡಿದ ಅವರು, ಮುಖ್ಯಮಂತ್ರಿಗಳು ಎಲ್ಲರನ್ನು ಕರೆದುಕೊಂಡು ಹೋಗಿ ಪ್ರಧಾನಿಗಳನ್ನು ಭೇಟಿ ಮಾಡಬೇಕಿತ್ತು. ನಮ್ಮ ಸಿಎಂ ಪಿಎಂರನ್ನ ಭೇಟಿನೇ‌ ಮಾಡಿಲ್ಲ.ರಾಜ್ಯ ಸರ್ಕಾರ ಜವಾಬ್ದಾರಿಯಿಂದ ನುಣಿಚಿಕೊಂಡಿದೆ. ಪ್ರಧಾನಿಗಳ ನಿರ್ದೇಶನದಂತೆ ಇಲ್ಲಿ ಕೆಲಸ ಆಗುತ್ತಿಲ್ಲ. ಎಷ್ಟು ಬಾರಿ ಯಡಿಯೂರಪ್ಪ ಪ್ರಧಾನಿ ಭೇಟಿ ಆಗಿದ್ದಾರೆ ಹೇಳಿ ಎಂದು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿಗಳು ಕೇವಲ ಕಾವೇರಿಯಲ್ಲಿ ನಾಲ್ಕು ಚೇರ್ ಹಾಕಿ ಸಭೆ ಮಾಡುತ್ತಾರೆ. ಕೆಲ ಮಾಧ್ಯಮಗಳು ದೊಡ್ಡ ಸಭೆ ಅಂತ ಸುದ್ದಿ ಮಾಡುತ್ತಾರೆ. ಕೊರೊನಾ ನಿಯಂತ್ರಣದಲ್ಲಿ ಮುಖ್ಯ ಮಂತ್ರಿಗಳ ಕೆಲಸ ತೃಪ್ತಿ ತಂದಿಲ್ಲ ಎಂದು ಸಿಎಂ ಕಾರ್ಯವೈಖರಿ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು.

ರಾಜ್ಯದಲ್ಲಿ ಲಸಿಕೆ ಅಭಿಯಾನ ವಿಫಲವಾಗಿದ್ದಕ್ಕೆ ಬುದ್ದಿ ಜೀವಿಗಳು, ವಿಪಕ್ಷಗಳೇ ಕಾರಣ.ಅವರು ಇಲ್ಲ ಸಲ್ಲದ ಅಪ ಪ್ರಚಾರ ಮಾಡಿದರು. ಈ ಬಗ್ಗೆ ಮುಖ್ಯಮಂತ್ರಿಗಳು ಜನರಿಗೆ ಅರಿವು ಮೂಡಿಸಬೇಕಿತ್ತು. ಆದರೆ, ಅದನ್ನು ಅವರು ಮಾಡಲಿಲ್ಲ. ಕೇವಲ ಪ್ರಚಾರಕ್ಕೆ ಸಿಎಂ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿದರು. ಆದರೆ, ಅದನ್ನ ಸರಿಯಾಗಿ ವಿತರಣೆ ಮಾಡೋ ಕೆಲಸ ಮಾಡಿಲ್ಲ. ಸಿಎಂ ಪ್ರಚಾರಕ್ಕೆ ಮಾತ್ರ ಲಸಿಕೆ ಅಭಿಯಾನ ಉದ್ಘಾಟನೆ ಮಾಡಿದರು ಎಂದು ಬಿಎಸ್​ ಯಡಿಯೂರಪ್ಪ ಅವರ ವಿರುದ್ಧ ಟೀಕಿಸಿದರು.

ಆರೋಗ್ಯ ಸಚಿವರ ಭೇಟಿ ಕುರಿತು ಮಾತನಾಡಿದ ಅವರು, ವಿಜಯಪುರ ಜಿಲ್ಲೆಗೆ ಮೂಲಭೂತ ಸೌಕರ್ಯಗಳನ್ನು ಪೂರೈಸಬೇಕಿದೆ. ಇನ್ನು ಬೆಡ್‌ಗಳು ಬೇಕಿದೆ. ವ್ಯಾಕ್ಸಿನೇಷನ್‌ ಬಗ್ಗೆ ಹೆಚ್ಚು ಒತ್ತುಕೊಟ್ಟಿದ್ದೇವೆ. ವಿಜಯಪುರದಲ್ಲಿ ಮನೆ ಮನೆಗೆ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಆಶಾ ಕಾರ್ಯಕರ್ತೆಯರಿಗೆ 5 ಸಾವಿರ ರೂ ಬಹುಮಾನ ರೂಪದಲ್ಲಿ ಕೊಟ್ಟಿದ್ದೇವೆ. ಇಡೀ ಜಿಲ್ಲೆಗೆ ವ್ಯಾಕ್ಸಿನೇಷನ್‌ ಆಗಬೇಕು ಎಂದಿದ್ದೇವೆ.
Youtube Video

ಮೂಲಭೂತ ಸೌಕರ್ಯಗಳ ಬಗ್ಗೆ ಸಚಿವರ ಗಮನ ಸೆಳೆದಿದ್ದೇವೆ. ಕೊರೊನಾ ನಿಯಂತ್ರಣಕ್ಕೆ ಅಗತ್ಯ ಸಹಕಾರ ನೀಡಬೇಕು ಅಂತ ಕೇಳಿದ್ದೇವೆ. ಲಸಿಕೆ ಅಭಿಯಾನಕ್ಕೆ ನಾವು ಚಾಲನೆ ನೀಡಲಾಗಿದೆ. ಪ್ರತಿ ಮನೆ ಮನೆಗೆ ಲಸಿಕೆ ಕೊಡೊ ಕೆಲಸ ಆಗುತ್ತಿದೆ. ಅತಿ ಹೆಚ್ಚು ಲಸಿಕೆ ಕೊಡುತ್ತಿರುವ ಕ್ಷೇತ್ರ ನನ್ನದು. ಶೇ 100% ಲಸಿಕೆ ಗುರಿ ಇದೆ ನಮಗೆ ಎರಡನೇ ಡೋಸ್‌ಗೆ 12-16 ದಿನದಲ್ಲಿ ಪಡೆಯಬಹುದು ಎಂದು ಸಚಿವರು ಹೇಳಿದ್ದಾರೆ. ಮೊದಲ ಡೋಸ್ 100% ರೀಚ್ ಆದ್ರೆ ಮುಂದಿನ ದಿನದಲ್ಲಿ ಕೊರೋನಾದಿಂದ ದೂರ ಮಾಡಲು ಸಾಧ್ಯವಾಗುತ್ತದೆ. ಮೂರನೇ ಅಲೆಯ ದೊಡ್ಡ ಭಯ ಇದೆ. ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಸರ್ಕಾರಕ್ಕೆ ನಾವು ಮನವಿ ಮಾಡಿಕೊಳ್ತಿದ್ದೇವೆ.

ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಎರಡನೇ ಡೋಸ್ ಗೆ ಅವಧಿ ಹೆಚ್ಚಳ ಮಾಡಿದ್ದಾರೆ. ವಿಜಯಪುರದಲ್ಲಿ ಬೆಡ್ ಕೊರತೆ ಇದೆ. ಇದನ್ನ ಸರಿ ಮಾಡಿಕೊಡುವಂತೆ ಮನವಿ ಮಾಡಿದ್ದೇವೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 100 ಬೆಡ್ ಹೆಚ್ಚಳ ಮಾಡಬೇಕು ಅಂತ ಕೇಳಿದ್ದೇವೆ. 100 ಬೆಡ್ ಆಕ್ಸಿಜನ್ ಯುಕ್ತ ಆಸ್ಪತ್ರೆ ನಿರ್ಮಾಣಕ್ಕೆ ಕಾಮಗಾರಿ ನಡೆಯುತ್ತಿದೆ. ಇದನ್ನ ಶೀಘ್ರವೇ ಮುಗಿಸುವಂತೆ ಮನವಿ ಮಾಡಲಾಗಿದೆ. ಆರೋಗ್ಯ ಸಿಬ್ಬಂದಿ ಕೊರತೆ ಇದೆ‌.‌ಇದನ್ನ ಸರಿ ಮಾಡಿವಂತೆ ಮನವಿ ಮಾಡಿದ್ದೇವೆ. ರೆಮಿಡಿಸಿವರ್ ಬೇಕು ಅಂತ ಮನವಿ ಮಾಡಿದ್ದೇವು. ಅದನ್ನ ಸರ್ಕಾರ ಒದಗಿಸಿದೆ.ಆಕ್ಸಿಜನ್ ಕೊರತೆ ಬಗ್ಗೆ ಮನವಿ ಮಾಡಿದ್ದೇವೆ. ಸಚಿವರು ಸಮಸ್ಯೆ ಶೀಘ್ರವೇ ಪರಿಹಾರ ಮಾಡಿ ಕೊಡುವುದಾಗಿ ಭರವಸೆ ಕೊಟ್ಟಿದ್ದಾರೆ. ಮುಂದಿನ ವಾರ ಜಿಲ್ಲೆಗೆ ಭೇಟಿ ಮಾಡುತ್ತೇವೆ ಎಂದು ಸಚಿವರು ಭರವಸೆ ಕೊಟ್ಟಿದ್ದಾರೆ.
Published by: Seema R
First published: May 17, 2021, 4:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories