ಇಂದಿನಿಂದ ಓಪನ್‌ ಆಗಲಿವೆ ಬಾರ್‌ ಅಂಡ್‌ ರೆಸ್ಟೋರೆಂಟ್‌; ಸರ್ಕಾರದಿಂದ ಕೋವಿಡ್‌ ಮಾರ್ಗಸೂಚಿ ಬಿಡುಗಡೆ

ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯ ಪ್ರಕಾರ, ಇಂದಿನಿಂದ ಬಾರ್ ಅಂಡ್ ರೆಸ್ಟೋರೆಂಟ್ ಪಬ್‌ಗಳು ಬಾಗಿಲು ತೆರೆಯಲಿವೆ. ಆಹಾರದ ಜೊತೆಗೆ ಮದ್ಯ ಕುಡಿಯಲು ಅವಕಾಶ ನೀಡಲಾಗಿದೆ. ಆದರೆ, ಶೇ.50 ರಷ್ಟು ಗ್ರಾಹಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದಕ್ಕಿಂತ ಹೆಚ್ಚಿನ ಗ್ರಾಹಕರಿಗೆ ಒಳಗೆ ಅನುಮತಿ ನೀಡುವಂತಿಲ್ಲ ಎಂದು ಸೂಚಿಸಲಾಗಿದೆ.

news18-kannada
Updated:September 1, 2020, 9:15 AM IST
ಇಂದಿನಿಂದ ಓಪನ್‌ ಆಗಲಿವೆ ಬಾರ್‌ ಅಂಡ್‌ ರೆಸ್ಟೋರೆಂಟ್‌; ಸರ್ಕಾರದಿಂದ ಕೋವಿಡ್‌ ಮಾರ್ಗಸೂಚಿ ಬಿಡುಗಡೆ
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು (ಆಗಸ್ಟ್‌ 31); ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನ್‌ಲಾಕ್-04 ಮಾರ್ಗಸೂಚಿ ನಾಳೆಯಿಂದ ಅನ್ವಯವಾಗಲಿದ್ದು, ಬಾರ್‌ ಮತ್ತು ರೆಸ್ಟೋರೆಂಟ್‌ಗಳು ರಾಜ್ಯಾದ್ಯಂತ ಮತ್ತೆ ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಕಳೆದ ವಾರವೇ ರಾಜ್ಯ ಸರ್ಕಾರ ಮಾಹಿತಿ ನೀಡಿತ್ತು. ಅದರಂತೆ ಇಂದಿನಿಂದ ಬಾರ್‌ ಮತ್ತು ರೆಸ್ಟೋರೆಂಡ್‌ಗಳು ಆರು ತಿಂಗಳ ನಂತರ ಬಾಗಿಲು ತೆರೆಯಲಿವೆ. ಈ ಮೂಲಕ ಸಮಾಜದಲ್ಲಿ ಮತ್ತಷ್ಟು ಹಣ ಸಂಚಯವಾಗಲಿದೆ ಎನ್ನಲಾಗುತ್ತಿದೆ. ಆದರೆ, ಬಾರ್‌ ಮತ್ತು ರೆಸ್ಟೋರೆಂಟ್‌ ಆರಂಭವಾದರೂ ಸಹ ರಾಜ್ಯ ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ಇಂದು ಬಿಡುಗಡೆ ಮಾಡಿದ್ದು, ಅದನ್ನು ಖಡ್ಡಾಯವಾಗಿ ಪಾಲಿಸಬೇಕು ಎಂದು ಸೂಚನೆ ನೀಡಿದೆ.

ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯ ಪ್ರಕಾರ, "ಇಂದಿನಿಂದ ಬಾರ್ ಅಂಡ್ ರೆಸ್ಟೋರೆಂಟ್ ಪಬ್‌ಗಳು ಬಾಗಿಲು ತೆರೆಯಲಿವೆ. ಆಹಾರದ ಜೊತೆಗೆ ಮದ್ಯ ಕುಡಿಯಲು ಅವಕಾಶ ನೀಡಲಾಗಿದೆ. ಆದರೆ, ಶೇ.50 ರಷ್ಟು ಗ್ರಾಹಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದಕ್ಕಿಂತ ಹೆಚ್ಚಿನ ಗ್ರಾಹಕರಿಗೆ ಒಳಗೆ ಅನುಮತಿ ನೀಡುವಂತಿಲ್ಲ" ಎಂದು ಸೂಚಿಸಲಾಗಿದೆ.

"ಈ ಹಿಂದೆ ಪಾರ್ಸೆಲ್ ಗೆ ಮಾತ್ರ ಅನುಮತಿ ನೀಡಲಾಗಿತ್ತು. ಈಗ ಆ ಆದೇಶ ವಾಪಸ್ಸು ಪಡೆದು ಅಲ್ಲೇ ಮದ್ಯ ಕುಡಿಯಲು ಅವಕಾಶ ನೀಡಲಾಗಿದೆ. ಆದರೆ, ಕಂಟೈನ್ಮೆಂಟ್ ವಲಯಗಳಲ್ಲಿ ನಿರ್ಬಂಧ ಮಂದುವರಿಯಲಿದೆ. ಕಂಟೈನ್ಮೆಂಟ್ ವಲಯಗಳಾಚೆಗೆ ಮಾತ್ರ ಅನುಮತಿ. ಇದಲ್ಲದೆ, ಬಾರ್‌ ಮತ್ತು ಪಬ್‌ಗಳ ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ಬಾರ್ ಮತ್ತು ರೆಸ್ಟೋರೆಂಟ್ ಕೆಲಸಗಾರರು ಗ್ರಾಹಕರ ಕೈಗೆ ಮದ್ಯ ಕೊಡುವಂತಿಲ್ಲ. ಇದರ ಜೊತೆಗೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದು ತಿಳಿಸಲಾಗಿದೆ.

ಇದನ್ನೂ ಓದಿ : ಕೇಂದ್ರದ ಬೆನ್ನಿಗೆ ರಾಜ್ಯದಿಂದ ಅನ್‌ಲಾಕ್‌-4 ಮಾರ್ಗಸೂಚಿ ಬಿಡುಗಡೆ; ಆರ್ಥಿಕತೆಗೆ ಮತ್ತಷ್ಟು ವಿನಾಯಿತಿ

ಮಾರಣಾಂತಿಕ ಕೊರೋನಾ ವೈರಸ್‌ ಸಾಮೂದಾಯಿಕವಾಗಿ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಮಾರ್ಚ್‌.25 ರಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಾದ್ಯಂತ ಸುದೀರ್ಘ ಅವಧಿಯ ಲಾಕ್‌ಡೌನ್‌ ಹೇರಿದ್ದರು. ಹೀಗಾಗಿ ಬಾರ್‌ ಮತ್ತು ರೆಸ್ಟೋರೆಂಟ್, ಪಬ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು.

ಈ ನಡುವೆ ಅನ್‌ಲಾಕ್‌ ಪ್ರಕ್ರಿಯೆ ಆರಂಭವಾಗಿದ್ದರೂ ಸಹ ಮಧ್ಯದ ಅಂಗಡಿಗಳಲ್ಲಿ ಮಧ್ಯವನ್ನು ಪಾರ್ಸೆಲ್‌ ನೀಡಲು ಅವಕಾಶ ನೀಡಲಾಗಿತ್ತೆ ವಿನಃ ಬಾರ್‌ ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯಲು ಅವಕಾಶ ನೀಡಲಾಗಿರಲಿಲ್ಲ. ಆದರೆ, ಅನ್‌ಲಾಕ್‌-04ರಲ್ಲಿ ಷರತ್ತು ಬದ್ಧವಾಗಿ ಬಾರ್‌ ಮತ್ತು ರೆಸ್ಟೋರೆಂಟ್‌ ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ಇಂದಿನಿಂದ ರೆಸ್ಟೋರೆಂಟ್ ಮತ್ತು ಪಬ್‌ಗಳು ಬಹಳ ದಿನಗಳ ನಂತರ ಬಾಗಿಲು ತೆರೆಯುವುದು ಖಚಿತವಾಗಿದೆ.
Published by: MAshok Kumar
First published: August 31, 2020, 7:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading