ನೌಕರರನ್ನು ಸೋಂಕಿನಿಂದ ಕಾಪಾಡಲು ಕೆಲ ಶಾಖೆಗಳನ್ನು ಮುಚ್ಚಲು ಬ್ಯಾಂಕುಗಳ ನಿರ್ಧಾರ

1.3 ಬಿಲಿಯನ್ ಜನರಿರುವ ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಇನ್ನೂ ನಗದು ವ್ಯವಹಾರದ ಮೇಲೆ ಅವಲಂಬಿತವಾಗಿರುವುದರಿಂದ ಅವುಗಳನ್ನು ಅಗತ್ಯ ಸೇವೆ ಎಂದು ಪರಿಗಣಿಸಲಾಗಿದೆ. ಹಾಗಾಗಿ ಈ ವಾರದಿಂದ ಪ್ರಾರಂಭವಾದ 21 ದಿನಗಳ ಲಾಕ್​ಡೌನ್​ನಿಂದ ಬ್ಯಾಂಕುಗಳಿಗೆ ವಿನಾಯಿತಿ ನೀಡಲಾಗಿದೆ.

news18-kannada
Updated:March 26, 2020, 5:08 PM IST
ನೌಕರರನ್ನು ಸೋಂಕಿನಿಂದ ಕಾಪಾಡಲು ಕೆಲ ಶಾಖೆಗಳನ್ನು ಮುಚ್ಚಲು ಬ್ಯಾಂಕುಗಳ ನಿರ್ಧಾರ
ಪ್ರಾತಿನಿಧಿಕ ಚಿತ್ರ.
  • Share this:
ನವದೆಹಲಿ / ಮುಂಬೈ: ಭಾರತದ ಸೆಂಟ್ರಲ್ ಬ್ಯಾಂಕ್ ಮತ್ತು ಪ್ರಮುಖ ಬ್ಯಾಂಕ್ ಗಳು ದೇಶದ ಲಾಕ್ ಡೌನ್ ಸಮಯದಲ್ಲಿ ಹೆಚ್ಚಿನ ಶಾಖೆಗಳನ್ನು ಮುಚ್ಚುವ ಯೋಚನೆಯಲ್ಲಿವೆ. ಇಂತಹ ಸಮಯದಲ್ಲಿ ಬ್ಯಾಂಕಿನ ಸಾವಿರಾರು ಉದ್ಯೋಗಿಗಳು  ಸೋಂಕಿಗೆ ಬಲಿಯಾಗುವುದನ್ನು ತಡೆಗಟ್ಟುವ ಉದ್ದೇಶದಿಂದ ಈ ನಿರ್ಧಾರ ಮಾಡಲಾಗಿದೆ ಎಂದು ಮೂಲಗಳು ರಾಯಿಟರ್ಸ್​ಗೆ ತಿಳಿಸಿವೆ.

1.3 ಬಿಲಿಯನ್ ಜನರಿರುವ ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಇನ್ನೂ ನಗದು ವ್ಯವಹಾರದ ಮೇಲೆ ಅವಲಂಬಿತವಾಗಿರುವುದರಿಂದ ಅವುಗಳನ್ನು ಅಗತ್ಯ ಸೇವೆ ಎಂದು ಪರಿಗಣಿಸಲಾಗಿದೆ. ಹಾಗಾಗಿ ಈ ವಾರದಿಂದ ಪ್ರಾರಂಭವಾದ 21 ದಿನಗಳ ಲಾಕ್​ಡೌನ್​ನಿಂದ ಬ್ಯಾಂಕುಗಳಿಗೆ ವಿನಾಯಿತಿ ನೀಡಲಾಗಿದೆ.

ಈ ಯೋಜನೆಯಡಿಯಲ್ಲಿ, ಪ್ರಮುಖ ನಗರಗಳಲ್ಲಿ ಪ್ರತಿ ಐದು ಕಿಲೋಮೀಟರ್​ಗೆ ಕೇವಲ ಒಂದು ಬ್ಯಾಂಕ್ ಶಾಖೆ ಮಾತ್ರ ತೆರೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಶೇ. 70% ರಷ್ಟು ಭಾರತೀಯರು ವಾಸಿಸುವ ಮತ್ತು ಹೆಚ್ಚಾಗಿ ಹಣದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವ ಗ್ರಾಮೀಣ ಪ್ರದೇಶಗಳಲ್ಲಿ, ಬ್ಯಾಂಕುಗಳು ಪರ್ಯಾಯ ದಿನಗಳಲ್ಲಿ ಬಡವರಿಗಾಗಿ ಕಾರ್ಯನಿರ್ವಹಿಸುತ್ತವೆ ಎಂದು ಮೂಲಗಳು ತಿಳಿಸಿವೆ.

ಸಾಮಾನ್ಯ ಮಾರ್ಗಸೂಚಿ ಏನೆಂದರೆ, ಡಿಜಿಟಲ್ ವಹಿವಾಟಿನ ಪರಿಚಯವಿಲ್ಲದ ಜನರಿಗೆ ಸಹಾಯವಾಗಲು ಹೆಚ್ಚಾಗಿ ಹಳ್ಳಿಗಳಲ್ಲಿ ಶಾಖೆಗಳನ್ನು ತೆರೆದಿರಬೇಕು ಎಂದು ಸರ್ಕಾರಿ ಬ್ಯಾಂಕಿನ ಹಿರಿಯ ಬ್ಯಾಂಕರೊಬ್ಬರು ರಾಯಿಟರ್ಸ್​ಗೆ ತಿಳಿಸಿದ್ದಾರೆ.

ಸರ್ಕಾರವು ಬಡವರಿಗೆ ನೇರವಾಗಿ ತಮ್ಮ ಖಾತೆಗಳಿಗೆ ಹಣವನ್ನು ಹಾಕುತ್ತದೆ ಎಂದು ವಿತ್ತ ಸಚಿವೆ ಘೋಷಿಸಿರುವ ಹಿನ್ನೆಲೆಯಲ್ಲಿ ನಗದು ಪಡೆಯಲು ಜನಜಂಗುಳಿ ಸೇರುವ ಸಾಧ್ಯತೆ ಇದೆ. ಹಾಗಾಗಿ ಬ್ಯಾಂಕ್ ಗಳು ಪರಸ್ಪರ ಸಹಾಯಕ್ಕಾಗಿ ಮಾತನಾಡಿಕೊಂಡಿವೆ. ಕೇಂದ್ರ ಸರ್ಕಾರವು ಗುರುವಾರ 1.7 ಟ್ರಿಲಿಯನ್ ರೂಪಾಯಿಗಳ (22.6 ಬಿಲಿಯನ್) ಆರ್ಥಿಕ ಪ್ಯಾಕೇಜ್ ಅನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಬಡವರಿಗೆ ನೇರವಾಗಿ ಹಣ ಪಾವತಿ ಮಾಡುವುದು ಸಹ ಒಳಗೊಂಡಿದೆ.

ಕೆಲವು ಬ್ಯಾಂಕುಗಳು ಈಗಾಗಲೇ ಕೆಲವು ಪ್ರದೇಶಗಳಲ್ಲಿ ಯೋಜಿತ ವಿಧಾನವನ್ನು ಪರೀಕ್ಷಿಸಲು ಪ್ರಾರಂಭಿಸಿವೆ. ಆದರೆ ಪೂರ್ಣ ಪ್ರಮಾಣದಲ್ಲಿ ಯಾವಾಗ ಆರಂಭಿಸುತ್ತವೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಭಾರತೀಯ ಬ್ಯಾಂಕುಗಳ ಸಂಘವು ಪ್ರತಿಕ್ರಿಯೆಯ ಕೋರಿಕೆಗಳಿಗೆ ಇನ್ನು ಸ್ಪಂದಿಸಿಲ್ಲ.ಹೆಚ್ಚು ಜನರು ಬ್ಯಾಂಕ್ ಗೆ ಬರದಂತೆ ತಡೆಯಲು ಬ್ಯಾಂಕಿಂಗ್ ಅಸೋಸಿಯೇಷನ್ ತನ್ನ 255 ಸದಸ್ಯ ಬ್ಯಾಂಕುಗಳಿಗೆ ಮುಂದಿನ ಸೂಚನೆ ಬರುವವರೆಗೂ ಮುಖ್ಯವಲ್ಲದ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಿದೆ. ಹೆಚ್ಚಿನ ಬ್ಯಾಂಕ್ ಗಳು ಈಗಾಗಲೇ ವ್ಯವಹಾರದ ಸಮಯವನ್ನು ಕಡಿಮೆಗೊಳಿಸಿದ್ದಾರೆ ಮತ್ತು ಡಿಜಿಟಲ್ ಸೇವೆಗಳನ್ನು ಬಳಸಲು ಗ್ರಾಹಕರನ್ನು ಒತ್ತಾಯಿಸಿದ್ದಾರೆ.

ಇದನ್ನು ಓದಿ: ಕೊರೋನಾ ವಿರುದ್ಧ ಹೋರಾಟಕ್ಕೆ ದೇಶ ಲಾಕ್​ಡೌನ್; ನಿರ್ಮಲಾ ಸೀತಾರಾಮನ್ ಘೋಷಣೆಯ ಪ್ರಮುಖಾಂಶಗಳು

ಸುಮಾರು ಒಂದು ವಾರದಿಂದ ಯೋಜನೆಗಳು ನಡೆಯುತ್ತಿದೆ ಎಂದು ಮೂಲವೊಂದು ತಿಳಿಸಿದೆ. ಎಲ್ಲಾ ಕೇಂದ್ರ ಬ್ಯಾಂಕುಗಳ ಡಿಜಿಟಲ್ ಬ್ಯಾಂಕಿಂಗ್ ಪರಿಸ್ಥಿತಿಯನ್ನು ಹಿರಿಯ ಕೇಂದ್ರ ಬ್ಯಾಂಕ್ ಅಧಿಕಾರಿಗಳು ಬುಧವಾರ ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವರದಿ: ಸಂಧ್ಯಾ ಎಂ
First published:March 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading