ನಾಳೆಯಿಂದ ಲಾಕ್‌ಡೌನ್‌ ತೆರವು; ಪರಿಶೀಲನೆಗಾಗಿ ಸಿಟಿ ರೌಂಡ್ಸ್‌ ಹೊರಟ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್

ವಿರೋಧ ಪಕ್ಷಗಳು ಕೊರೋನಾ ನಿಯಂತ್ರಿಸುವ ಸಲುವಾಗಿ ಕನಿಷ್ಠ 15 ದಿನಗಳಾದರೂ ಲಾಕ್‌ಡೌನ್‌ ಹೇರುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದವು. ಆದರೆ, ರಾಜ್ಯ ಸರ್ಕಾರ ಇನ್ನೂ ಯಾವುದೇ ಕಾರಣಕ್ಕೂ ಬೆಂಗಳೂರಿನಲ್ಲಿ ಲಾಕ್‌ಡೌನ್ ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. 

ಪೊಲೀಸ್ ಆಯುಕ್ತ​​ ಭಾಸ್ಕರ್ ರಾವ್

ಪೊಲೀಸ್ ಆಯುಕ್ತ​​ ಭಾಸ್ಕರ್ ರಾವ್

  • Share this:
ಬೆಂಗಳೂರು (ಜುಲೈ 21); ರಾಜ್ಯ ಸರ್ಕಾರ ಕೊರೋನಾ ನಿಯಂತ್ರಣಕ್ಕಾಗಿ ಬೆಂಗಳೂರಿನಲ್ಲಿ ಒಂದು ವಾರಗಳ ಕಾಲ ಲಾಕ್‌ಡೌನ್‌ ಘೋಷಣೆ ಮಾಡಿತ್ತು. ಈ ಅವಧಿ ಇಂದಿಗೆ ಮುಕ್ತಾಯವಾಗಿದ್ದು, ನಾಳೆಯಿಂದ ಲಾಕ್‌ಡೌನ್ ತೆರವು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಈಗಾಗಲೇ ತಿಳಿಸಿದ್ದಾರೆ. ಹೊಸ ಲಾಕ್‌ಡೌನ್ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಇಂದು ರಾತ್ರಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್ ಪರಿಶೀಲನೆಗಾಗಿ ಇಂದು ಬೆಂಗಳೂರು ಸಿಟಿ ರೌಂಡ್ಸ್‌ ಹೊರಟಿದ್ದಾರೆ ಎಂದು ತಿಳಿದುಬಂದಿದೆ.

ನಾಳೆಯಿಂದ ಲಾಕ್‌ಡೌನ್‌ ತೆರವಾಗಲಿದ್ದು, ವ್ಯಾಪಾರ ವಹಿವಾಟು, ಟ್ರಾಫಿಕ್ ಅನ್ನು ಹೇಗೆ ನಿಯಂತ್ರಿಸಬೇಕು? ಮತ್ತು ಅಂಗಡಿಗಳು ಓಪನ್ ಆದರೆ, ಅದನ್ನು ಹೇಗೆ ನಿಭಾಯಿಸಬೇಕು? ಎಂದು ಪರಿಶೀಲನೆ ನಡೆಸುವ ಸಲುವಾಗಿ ಭಾಸ್ಕರ್‌ ರಾವ್ ಇಂದು ಸಿಟಿ ರೌಂಡ್ಸ್‌ ಮಾಡಿದ್ದಾರೆ ಎನ್ನಲಾಗುತ್ತಿದೆ

ಮಾರ್ಕೆಟ್, ಜಯನಗರ ಸೇರಿ ಹಲವೆಡೆ ಪರಿಶೀಲನೆ ಮಾಡಲಾಗಿದೆ ಎಂದು ಸ್ವತಃ ಭಾಸ್ಕರ್‌ ರಾವ್ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅವರು, "ಲಾಕ್‌ಡೌನ್‌ ತೆರವಿನ ಬಳಿಕ ಸರ್ಕಾರದ ಆದೇಶ ಪಾಲನೆ ಮಾಡ್ತೀವಿ. ನಮ್ಮ ಸಿಬ್ಬಂದಿ ಎಂದಿನಂತೆ ಕೆಲಸ ಮಾಡ್ತಾರೆ. ಕೆಲವು ಪ್ರಮುಖ ರಸ್ತೆಗಳನ್ನು ಮಾತ್ರ ಬಂದ್ ಮಾಡಲಿದ್ದೇವೆ. ಉಳಿದಂತೆ ನಗರದ ಎಲ್ಲಾ ರಸ್ತೆಗಳು ಎಂದಿನಂತೆ ತೆರೆದಿರಲಿವೆ.

ಹಾಗೆಂದು ಜನ ಸುಖಸುಮ್ಮನೆ ಓಡಾಡಬಾರದು ಅತ್ಯಂತ ಜಾಗ್ರತೆಯಿಂದ, ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಅಂಗಡಿ, ವ್ಯಾಪಾರಗಳು ಎಂದಿನಂತೆ ತೆರೆದಿರುತ್ತವೆ. ಆದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸರ್ಕಾರ ಹೊರಡಿಸುವ ಮಾರ್ಗಸೂಚಿ ಅನ್ವಯ ಕೆಲಸ ಮಾಡಬೇಕು. ಇಲ್ಲದಿದ್ದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು" ಎಂದು ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ.

ವಿರೋಧ ಪಕ್ಷಗಳು ಕೊರೋನಾ ನಿಯಂತ್ರಿಸುವ ಸಲುವಾಗಿ ಕನಿಷ್ಠ 15 ದಿನಗಳಾದರೂ ಲಾಕ್‌ಡೌನ್‌ ಹೇರುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದವು. ಆದರೆ, ರಾಜ್ಯ ಸರ್ಕಾರ ಇನ್ನೂ ಯಾವುದೇ ಕಾರಣಕ್ಕೂ ಬೆಂಗಳೂರಿನಲ್ಲಿ ಲಾಕ್‌ಡೌನ್ ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ : Lockdown - ಇಂದು ರಾತ್ರಿ ಲಾಕ್​ಡೌನ್ ಮುಕ್ತಾಯ, ಮಾರ್ಗಸೂಚಿ ಸಂಜೆಗೆಸೋಮವಾರದ ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿ ನಿನ್ನೆ 3,648 ಕೊರೋನಾ ಕೇಸುಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 67,420ಕ್ಕೆ ಏರಿಕೆಯಾಗಿದೆ. ರಾಜ್ಯಾದ್ಯಂತ ಕೊರೋನಾಗೆ 72 ಜನ ಬಲಿಯಾಗಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆಯೂ 1403ಕ್ಕೆ ಏರಿಕೆಯಾಗಿದೆ.
Published by:MAshok Kumar
First published: