ಪಾದರಾಯನಪುರ ಹೆಸರಿಗಷ್ಟೇ ಹಾಟ್ ಸ್ಫಾಟ್ ಏರಿಯಾ; ಯಾವುದಕ್ಕೂ ಕ್ಯಾರೇ ಅನ್ನದ ಜನ

ಪಾದರಾಯನಪುರದಲ್ಲಿ ಈಗಾಗಲೇ ಸಾಕಷ್ಟು ಜನ ಕೊರೋನಾ ಸೋಂಕಿತರನ್ನು ಪತ್ತೆ ಹಚ್ಚಲಾಗಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಜನ ಲಾಕ್‌ಡೌನ್ ನಡುವೆಯೂ ಹೀಗೆ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದನ್ನು ನೋಡಿದರೆ, ಈ ಭಾಗದಲ್ಲಿ ಕೊರೋನಾ ಪ್ರಭಾವ ಮತ್ತಷ್ಟು ಹೆಚ್ಚಾಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಬೆಂಗಳೂರು (ಏಪ್ರಿಲ್ 19); ಅತಿಹೆಚ್ಚು ಸಂಖ್ಯೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಪಾದರಾಯನಪುರ ವಾರ್ಡ್ ಅನ್ನು ಹಾಟ್‌ಸ್ಪಾಟ್ ಏರಿಯಾ ಎಂದು ಗುರುತಿಸಲಾಗಿದೆ. ಜನ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದೂ ಮನವಿ ಮಾಡಲಾಗಿದೆ. ಆದರೆ, ಇಲ್ಲಿನ ಜನ ಮಾತ್ರ ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲ.

  ಪಾದರಾಯನಪುರ ಹಸರಿಗಷ್ಟೆ ಹಾಟ್ ಸ್ಫಾಟ್ ಏರಿಯಾ. ಆದರೆ, ಇಲ್ಲಿ ಬೈಕ್ ಸವಾರರು ರೇಸ್‌ಗೆ ಹೋಗುವಂತೆ ವಾಹನ ಚಾಲನೆ ಮಾಡುತ್ತಿದ್ದಾರೆ. ಟ್ರಾಫಿಕ್ ಹಾಗೂ ಲಾ ಅಂಡ್ ಆರ್ಡರ್ ಪೊಲೀಸರು ಎಷ್ಟೇ ಮನವಿ ಮಾಡಿದರೂ ಇಲ್ಲಿನ ಜನ ಮನೆಯಲ್ಲಿ ಕೂರುವ ಯಾವುದೇ ಲಕ್ಷಣ ತೋರುತ್ತಿಲ್ಲ. ಪಾಸ್ ಇಲ್ಲದಿದ್ದರೂ ಇಲ್ಲಿನ ಬೈಕ್ ಸವಾರರು ನಗರ ಸಂಚಾರಕ್ಕೆ ಅಡ್ಡಿ ಇಲ್ಲ. ಇನ್ನೂ ಸಾಮಾಜಿಕ ಅಂತರ ಅಂದರೆ ಏನೆಂದೇ ಇಲ್ಲಿನ ಜನರಿಗೆ ತಿಳಿದಿಲ್ಲವೇನೋ? ಎಂಬಂತಿದೆ ಈ ವಾರ್ಡ್‌‌ನ ಅಸಲಿ ಸ್ಥಿತಿ.

  ಪಾದರಾಯನಪುರದಲ್ಲಿ ಈಗಾಗಲೇ ಸಾಕಷ್ಟು ಜನ ಕೊರೋನಾ ಸೋಂಕಿತರನ್ನು ಪತ್ತೆ ಹಚ್ಚಲಾಗಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಜನ ಲಾಕ್‌ಡೌನ್ ನಡುವೆಯೂ ಹೀಗೆ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದನ್ನು ನೋಡಿದರೆ, ಈ ಭಾಗದಲ್ಲಿ ಕೊರೋನಾ ಪ್ರಭಾವ ಮತ್ತಷ್ಟು ಹೆಚ್ಚಾಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ.

  ಇದನ್ನೂ ಓದಿ : ಕೊರೋನಾ ಸಾವಿನಲ್ಲಿ ಚೀನಾ ನಂಬರ್‌-1, ಅಲ್ಲಿನ ಸರ್ಕಾರ ನೀಡಿರುವ ಅಂಕಿಅಂಶದಲ್ಲಿ ಅನುಮಾನವಿದೆ; ಟ್ರಂಪ್
  First published: