ಕೊರೋನಾದಿಂದ ಪೊಲೀಸ್‌ ಸಿಬ್ಬಂದಿ ಸಾವು; ಯಾವುದೇ ಭಯ ಬೇಡ, ಸರ್ಕಾರ ನಮ್ಮ ಬೆನ್ನಿಗಿದೆ; ಭಾಸ್ಕರ್‌ ರಾವ್

ಮೃತರಾದವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಕೊರೋನಾದಿಂದಾಗಿ ಆಸ್ಪತ್ರೆಯಲ್ಲಿ ಉಳಿದ ಸಿಬ್ಬಂದಿಗಳು ಕೂಡ ಆದಷ್ಟು ಬೇಗ ಗುಣಮುಖರಾಗಲಿ‌. ಪೊಲೀಸರಿಗೆ ಯಾವುದೇ ಭಯ ಬೇಡ, ಸರ್ಕಾರ ನಮ್ಮ ಬೆನ್ನಿಗಿದೆ. ಮುಖ್ಯಮಂತ್ರಿಗಳು ಕೂಡ ಮೃತರ ಬಗ್ಗೆ ಕನಿಕರ ವ್ಯಕ್ತಪಡಿಸಿದ್ದಾರೆ ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್ ತಿಳಿಸಿದ್ದಾರೆ.

news18-kannada
Updated:July 3, 2020, 3:37 PM IST
ಕೊರೋನಾದಿಂದ ಪೊಲೀಸ್‌ ಸಿಬ್ಬಂದಿ ಸಾವು; ಯಾವುದೇ ಭಯ ಬೇಡ, ಸರ್ಕಾರ ನಮ್ಮ ಬೆನ್ನಿಗಿದೆ; ಭಾಸ್ಕರ್‌ ರಾವ್
ಪೊಲೀಸ್ ಆಯುಕ್ತ​​ ಭಾಸ್ಕರ್ ರಾವ್
  • Share this:
ಬೆಂಗಳೂರು (ಜುಲೈ 03); ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅತ್ಯುತ್ತಮ ಕೆಲಸ ನಿರ್ವಹಿಸುತ್ತಿದ್ದು, ಪೊಲೀಸರಿಗೆ ಯಾವುದೇ ಭಯ ಬೇಡ, ಸರ್ಕಾರ ನಮ್ಮ ಬೆನ್ನಿಗಿದೆ ಎಂದು ಬೆಂಗಳೂರು ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್ ತಿಳಿಸಿದ್ದಾರೆ.

ಕೊರೋನಾ ಸೋಂಕಿನಿಂದಾಗಿ ಬೆಂಗಳೂರಿನಲ್ಲಿ ಓರ್ವ ಪೊಲೀಸ್‌ ಪೇದೆ ಇಂದು ಮೃತರಾಗಿದ್ದಾರೆ. ಇವರ ಶ್ರದ್ದಾಂಜಲಿ ಬಳಿಕ ಮಾತನಾಡಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, "ಕೋವಿಡ್ ವಿರುದ್ಧ ಹೋರಾಡುತ್ತಾ ನಮ್ಮ ಸಹದ್ಯೋಗಿಗಳು ಸಾವನ್ನಪ್ಪಿದ್ದಾರೆ. ರೋಗ ನಿರೋಧಕ ಶಕ್ತಿ ಇಲ್ಲದ ಪರಿಣಾಮ ಅವರು ಸಾವನ್ನಪ್ಪಿದ್ದಾರೆ.

ಮೃತರಾದವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಕೊರೋನಾದಿಂದಾಗಿ ಆಸ್ಪತ್ರೆಯಲ್ಲಿ ಉಳಿದ ಸಿಬ್ಬಂದಿಗಳು ಕೂಡ ಆದಷ್ಟು ಬೇಗ ಗುಣಮುಖರಾಗಲಿ‌. ಪೊಲೀಸರಿಗೆ ಯಾವುದೇ ಭಯ ಬೇಡ, ಸರ್ಕಾರ ನಮ್ಮ ಬೆನ್ನಿಗಿದೆ. ಮುಖ್ಯಮಂತ್ರಿಗಳು ಕೂಡ ಮೃತರ ಬಗ್ಗೆ ಕನಿಕರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಭಯ ಹುಟ್ಟಿಸುತ್ತಿರುವ ಕೊರೋನಾ ಸಾವು; ಸ್ವಯಂ ಪ್ರೇರಿತ ಗ್ರಾಮ ಬಂದ್‌ಗೆ ಕರೆ ಕೊಟ್ಟ ಗ್ರಾಮಸ್ಥರು

ಈಗಾಗಲೇ ಮೂವರಿಗೆ ಅವರಿಗೆ ತಲುಪಬೇಕಾದ ಕೋವಿಡ್ ಪರಿಹಾರ ನಿಧಿಯಿಂದ ಹಣ ಸಂದಾಯವಾಗಿದೆ. ನಮ್ಮ ಪೊಲೀಸ್ ಇಲಾಖೆಯಲ್ಲಿಯೇ ಹೆಚ್ಚು ಸೋಂಕುಗಳಾಗುತ್ತಿದೆ. ಭದ್ರತೆಗೆ ಸಿಬ್ಬಂದಿ ಸಿಗದಿದ್ರೂ, ನಾವು,‌ ನಮ್ಮ ಪೊಲೀಸ್ ಸಿಬ್ಬಂದಿ ಭಯಪಡದೆ ಧೈರ್ಯದಿಂದ ಕೆಲಸಗಳನ್ನ ಮಾಡುತ್ತಿದ್ದೇವೆ" ಎಂದು ಹೇಳಿದ್ದಾರೆ.
First published: July 3, 2020, 3:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading