HOME » NEWS » Coronavirus-latest-news » BANGLADESH REPORTED ITS FIRST DEATH AS ONE OF THE FIERCEST CYCLONES GNR

Cyclone Amphan: ಅಂಪನ್​​ ಸೂಪರ್​​ ಸೈಕ್ಲೋನ್​​ಗೆ ಬಾಂಗ್ಲಾದೇಶದಲ್ಲಿ ಮೊದಲ ಬಲಿ

ಒಡಿಶಾದ ಪಾರಾದೀಪ್, ಬಾಲಾಸೋರ್, ಚಂಡೀಪುರ್ ಸೇರಿದಂತೆ ಹಲವು ಕಡೆ ಬೆಳಗ್ಗೆ 4ರಿಂದಲೇ ಮಳೆ ಪ್ರಾರಂಭವಾಗಿದೆ. ಅಂಪನ್ ಚಂಡಮಾರುತದ ಪೂರ್ವಭಾವಿಯಂತೆ ಪ್ರಬಲ ಗಾಳಿಯೂ ಬೀಸುತ್ತಿದೆ. ಸಮುದ್ರದ ಅಲೆಗಳು ಉಕ್ಕೇರುತ್ತಿವೆ.

news18-kannada
Updated:May 20, 2020, 3:51 PM IST
Cyclone Amphan: ಅಂಪನ್​​ ಸೂಪರ್​​ ಸೈಕ್ಲೋನ್​​ಗೆ ಬಾಂಗ್ಲಾದೇಶದಲ್ಲಿ ಮೊದಲ ಬಲಿ
ಅಂಪನ್ ಸೂಪರ್​​ ಚಂಡಮಾರುತ
  • Share this:
ನವದೆಹಲಿ(ಮೇ.20): ಅಂಪನ್‌ ಸೂಪರ್​​ ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದರ ಪರಿಣಾಮ ಇಡೀ ದೇಶಾದ್ಯಂತ ಗುಡುಗು, ಮಿಂಚು ಸಹಿತ ಭಾರೀ ಗಾಳಿ ಮಳೆಯಾಗುತ್ತಿದೆ. ದೇಶದ ಪ್ರಮುಖ ರಾಜ್ಯಗಳಾದ ಒರಿಸ್ಸಾ ಮತ್ತು ಪಶ್ಚಿಮ ಬಂಗಾಳದ ದಿಘಾದಿಂದ ದಕ್ಷಿಣಕ್ಕೆ ಅಂಪಾನ್​​ ಸುಮಾರು 170 ಕಿ.ಮೀ ದೂರದಲ್ಲಿದೆ. ಇನ್ನೇನು ಸುಂದರ್‌ಬನ್ಸ್​ಗೆ ಅಪ್ಪಳಿಸುವ ಸಾಧ್ಯತೆ ಇದೆ. ಹೀಗಿರುವಾಗಲೇ ಬಾಂಗ್ಲಾದೇಶದಲ್ಲಿ ಈ ಸೈಕ್ಲೋನ್​​​ ಮೊದಲ ಬಲಿ ಪಡೆದುಕೊಂಡಿದೆ ಎಂದು ವರದಿಯಾಗಿದೆ. ಇದು ಭಾರತೀಯರಲ್ಲೂ ಭಾರೀ ಆಂತಕ ಸೃಷ್ಟಿಸಿದೆ.

ಬಂಗಾಳ ಕೊಲ್ಲಿ ಕಡಲ ತೀರವನ್ನು ಅಪ್ಪಳಿಸಲು ಅಂಪನ್ ಚಂಡಮಾರುತ 150 ಕಿಮೀ ವೇಗದಲ್ಲಿ ದಾಂಗುಡಿ ಇಡುತ್ತಿದೆ. ಇಂದು ಮಧ್ಯಾಹ್ನ ಅಥವಾ ಸಂಜೆ ಪಶ್ಚಿಮ ಬಂಗಾಳದ ಡೀಘಾ ಬಳಿ ಅಡಿ ಇಡುವ ನಿರೀಕ್ಷೆ ಇದೆ. ಒಡಿಶಾ ಮತ್ತು ಪಶ್ಚಿಮ ಬಂಗಾಳದ ಹಲವೆಡೆ ಈಗಾಗಲೇ ಭಾರೀ ಮಳೆ, ಬಿರುಗಾಳಿ ಆರ್ಭಟಿಸಲು ಪ್ರಾರಂಭಿಸಿವೆ. ಈ ಎರಡೂ ರಾಜ್ಯಗಳಲ್ಲಿ ತೀರ ಪ್ರದೇಶದಲ್ಲಿರುವ ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ.

ಒಡಿಶಾದ ಪಾರಾದೀಪ್, ಬಾಲಾಸೋರ್, ಚಂಡೀಪುರ್ ಸೇರಿದಂತೆ ಹಲವು ಕಡೆ ಬೆಳಗ್ಗೆ 4ರಿಂದಲೇ ಮಳೆ ಪ್ರಾರಂಭವಾಗಿದೆ. ಅಂಪನ್ ಚಂಡಮಾರುತದ ಪೂರ್ವಭಾವಿಯಂತೆ ಪ್ರಬಲ ಗಾಳಿಯೂ ಬೀಸುತ್ತಿದೆ. ಸಮುದ್ರದ ಅಲೆಗಳು ಉಕ್ಕೇರುತ್ತಿವೆ.

ಇದನ್ನೂ ಓದಿ: ಕರ್ನಾಟಕ ರಾಜ್ಯಾದ್ಯಂತ ಅರ್ಧ ದಿನದಲ್ಲಿ 63 ಹೊಸ ಕೇಸ್; ಹಾಸನದಲ್ಲಿ ಅತ್ಯಧಿಕ; ಒಟ್ಟು ಪ್ರಕರಣ 1,458ಕ್ಕೇರಿಕೆ

ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಎನ್​ಡಿಆರ್​ಎಫ್ ಪಡೆಯನ್ನು ನಿಯೋಜಿಸಲಾಗಿದೆ. ಬಂಗಾಳದಲ್ಲಿ ಈಗಾಗಲೇ 3 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ವಿವಿಧ ಕರಾವಳಿ ಜಿಲ್ಲೆಗಳಲ್ಲಿ ನೂರಾರು ಪ್ರವಾಹ ಶಿಬಿರಗಳನ್ನು ನಿರ್ಮಿಸಿ ಅಲ್ಲಿ ಜನರನ್ನು ಸೇರಿಸಲಾಗುತ್ತಿದೆ. ಕೊರೋನಾ ವೈರಸ್ ಬಿಕ್ಕಟ್ಟು ಈಗ ಇನ್ನಷ್ಟು ರಕ್ಷಣಾ ಕಾರ್ಯಾಚರಣೆಯನ್ನು ಕ್ಲಿಷ್ಟಗೊಳಿಸಿದೆ. ದೇಶದ ವಿವಿಧೆಡೆಯಿಂದ ವಾಪಸಾದ ವಲಸೆ ಕಾರ್ಮಿಕರನ್ನು ಪ್ರವಾಹ ಕೇಂದ್ರಗಳಲ್ಲೇ ಕ್ವಾರಂಟೈನ್​ಗೆ ಇಡಲಾಗಿದೆ. ಈಗ ಸೈಕ್ಲೋನ್ ಬಾಧಿತ ಪ್ರದೇಶಗಳಲ್ಲಿನ ಜನರನ್ನು ಶಾಲೆ, ಹಾಸ್ಟೆಲ್ ಮತ್ತಿತರ ಸ್ಥಳಗಳನ್ನ ಆರಿಸಲಾಗುತ್ತಿದೆ.
First published: May 20, 2020, 3:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories