ರಸ್ತೆಗಿಳಿವ ಮುನ್ನ ಎಚ್ಚರ!; ಲಾಕ್​ಡೌನ್​ ಬಳಿಕ ಬೆಂಗಳೂರಲ್ಲಿ 41,731 ವಾಹನಗಳು ಸೀಜ್

Bangalore Lockdown: ಬೆಂಗಳೂರಿನಲ್ಲಿ ಅನಗತ್ಯವಾಗಿ ರಸ್ತೆಗಿಳಿಯುವ ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ. ನಿನ್ನೆ ಒಂದೇ ದಿನ ಬೆಂಗಳೂರಿನಲ್ಲಿ 2,015 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಏ. 23): ಲಾಕ್​ಡೌನ್​ ಇದ್ದರೂ ಎಷ್ಟೋ ಜನರಿಗೆ ಮನೆಯೊಳಗೆ ಕುಳಿತಿರುವುದೆಂದರೆ ಕಿರಿಕಿರಿ. ಹೀಗಾಗಿ, ಒಂದು ರೌಂಡ್​ ಓಡಾಡಿಕೊಂಡು ಬರೋಣ ಎಂದು ಬೈಕ್, ಕಾರುಗಳನ್ನು ಏರಿಕೊಂಡು ನಗರ ಸಂಚಾರಕ್ಕೆ ಹೊರಡುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಇಂಥವರನ್ನು ನಿಯಂತ್ರಿಸಲೆಂದೇ ಬೆಂಗಳೂರು ಪೊಲೀಸರು ಪಾಸ್​ ವ್ಯವಸ್ಥೆ ಮಾಡಿದ್ದರು. ಆದರೆ, ಪಾಸ್​ ದುರ್ಬಳಕೆ ಮಾಡಿಕೊಂಡು, ಕುಂಟು ನೆಪವೊಡ್ಡಿ ಅನೇಕ ಜನರು ವಾಹನಗಳಲ್ಲಿ ಓಡಾಡುತ್ತಿದ್ದಾರೆ. ಅವರೆಲ್ಲರಿಗೂ ಬಿಸಿ ಮುಟ್ಟಿಸುತ್ತಿರುವ ಬೆಂಗಳೂರು ಪೊಲೀಸರು ಇದುವರೆಗೂ 41,731 ವಾಹನಗಳನ್ನು ಸೀಜ್ ಮಾಡಿದ್ದಾರೆ!

ಬೆಂಗಳೂರಿನಲ್ಲಿ ಅನಗತ್ಯವಾಗಿ ರಸ್ತೆಗಿಳಿಯುವ ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ. ನಿನ್ನೆ ಒಂದೇ ದಿನ ಬೆಂಗಳೂರಿನಲ್ಲಿ 2,015 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಲಾಕ್ ಡೌನ್ ಬಳಿಕ ಬೆಂಗಳೂರಿನಲ್ಲಿ ಬರೋಬ್ಬರಿ 41,731 ವಾಹನಗಳನ್ನು ಸೀಜ್ ಮಾಡಲಾಗಿದೆ. ಕೆಲವೆಡೆ ಜನರು ತುರ್ತು, ಅಗತ್ಯ ಸೇವೆ ನೆಪದಲ್ಲಿ‌ ಪಾಸ್ ಪಡೆದು ದುರ್ಬಳಕೆ ಮಾಡಿಕೊಂಡಿದ್ದಾರೆ. ಪಾಸ್ ದುರ್ಬಳಕೆ ಮಾಡಿಕೊಂಡ ವಾಹನಗಳನ್ನು ಸೀಜ್ ಮಾಡಿ, ಪಾಸ್ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಇದನ್ನೂ ಓದಿ: ಲಾಕ್​ಡೌನ್​ ಸಡಿಲ ಹಿನ್ನೆಲೆ ಬೆಂಗಳೂರಲ್ಲಿ ಪೊಲೀಸ್​ ಕಣ್ಗಾವಲು; ಯಶವಂತಪುರ ಮಾರ್ಕೆಟ್ ಓಪನ್

ಇಂದಿನಿಂದ ಲಾಕ್​ಡೌನ್​ ಸಡಿಲಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ನಿನ್ನೆಗಿಂತಲೂ ಹೆಚ್ಚಿನ ವಾಹನ ಸಂಚಾರವಿದೆ. ಹೀಗಾಗಿ, ಹೆಚ್ಚಿನ ಎಚ್ಚರ ವಹಿಸಿರುವ ಪೊಲೀಸರು ವಾಹನಗಳನ್ನು ಅಡ್ಡಹಾಕಿ ಪಾಸ್​ಗಳ ತಪಾಸಣೆ ಮಾಡುತ್ತಿದ್ದಾರೆ. ಇಂದಿನಿಂದ ರಾಜ್ಯದಲ್ಲಿ ಲಾಕ್​ಡೌನ್​ ಸಡಿಲಗೊಳಿಸಿರುವುದರಿಂದ ವಾಹನ ಸಂಚಾರ ಇನ್ನಷ್ಟು ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ, ಮೈಸೂರು ರಸ್ತೆಯಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯಿಂದ ತಪಾಸಣೆ‌ ನಡೆಸಲಾಗುತ್ತಿದೆ. ಒನ್ ವೇ ಆಗಿದ್ದ ಮೈಸೂರು ರಸ್ತೆಯನ್ನು ಈಗ ಟುವೇ ಮಾಡಲಾಗಿದೆ.

ಇದನ್ನೂ ಓದಿ: ಡ್ರೋನ್​​​ ಕ್ಯಾಮರದಲ್ಲಿ ಸೆರೆಯಾಯ್ತು ಬೆಂಗಳೂರು ನಗರಿ; ಹೇಗಿದೆ ನೋಡಿ ಸುಂದರ ರಾಜಧಾನಿ

ನಗರದ್ಯಾಂತ ಪೊಲೀಸರು ಪ್ರತಿಯೊಂದು ವಾಹನಗಳನ್ನು ತಡೆದು ಪರಿಶೀಲನೆ ಮಾಡುತ್ತಿದ್ದಾರೆ. ಅನವಶ್ಯಕವಾಗಿ ರಸ್ತೆಗಿಳಿಯುತ್ತಿರುವವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ರಸ್ತೆಯಲ್ಲಿ ಓಡಾಡುತ್ತಿರುವ ಪ್ರತಿಯೊಬ್ಬರ ಪಾಸ್ ತಪಾಸಣೆ ಮಾಡಲಾಗುತ್ತಿದೆ. ಪಾಸ್ ದುರ್ಬಳಕೆ ಕಂಡು ಬಂದರೆ ಕೂಡಲೇ ವಾಹನ್ ಸೀಜ್ ಮಾಡಲಾಗುತ್ತಿದೆ. ಟ್ರಾಫಿಕ್ ಪೊಲೀಸರು ಇಂದು ಬೆಳಗ್ಗೆಯಿಂದ ಓಡಾಡುತ್ತಿರುವ ಪ್ರತಿಯೊಂದು ವಾಹನದ ಸಂಖ್ಯೆ, ಪಾಸ್ ಸಂಖ್ಯೆ ನೋಂದಣಿ ಮಾಡಿಕೊಂಡು, ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದಾರೆ.
First published: