ಮನುಷ್ಯನನ್ನು ಕೊರೋನಾ ಹೇಗೆ ಹಿಡಿಯುತ್ತೆ? ರಸ್ತೆಗಿಳಿದ ಬೈಕ್ ಸವಾರರಿಗೆ ಬೆಂಗಳೂರು ಪೊಲೀಸರಿಂದ ಪ್ರಾತ್ಯಕ್ಷಿಕೆ

live video of Corona Virus catching a man: ಕೊರೋನಾ ವೈರಸ್​ ಹೇಗೆಲ್ಲ ಹರಡುತ್ತದೆ ಎಂದು ವೈದ್ಯರು ಜನರಲ್ಲಿ ಅರಿವು ಮೂಡಿಸುತ್ತಲೇ ಇದ್ದಾರೆ. ವೈರಸ್​ ಹಡದಂತೆ ತಡೆಯಲು ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆಯೂ ತಿಳಿಸಲಾಗುತ್ತಿದೆ. ಆದರೂ ಕೊರೋನಾ ವೈರಸ್​ ಹೇಗೆ ಮನುಷ್ಯನನ್ನು ಹಿಡಿಯುತ್ತದೆ ಅನ್ನೋ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಬೆಂಗಳೂರು ಸಂಚಾರಿ ಪೊಲೀಸರು

ಬೆಂಗಳೂರು ಸಂಚಾರಿ ಪೊಲೀಸರು

  • Share this:
ಕೊರೋನಾ ವೈರಸ್​ನಿಂದಾಗಿ ಇಡೀ ದೇಶವೇ ಸ್ತಬ್ಧವಾಗಿದೆ. ಲಾಕ್​ಡೌನ್​ ಮೂಲಕ ಜನರು ಮನೆಯಿಂದ ಹೊರಬಾರದಂತೆ ನಿರ್ಬಂಧಿಸಲಾಗಿದೆ. ಕೊರೋನಾ ವೈರಸ್​ನಿಂದಾಗಿ ಹರಡುತ್ತಿರುವ ಸೋಂಕನ್ನು ತಡೆಯಲು ವೈದ್ಯರು, ಪೊಲೀಸರು ಸೇರಿದಂತೆ ಸಾಕಷ್ಟು ಜನರು ಹರಸಾಹಸ ಪಡುತ್ತಿದ್ದಾರೆ.

ಕೊರೋನಾ ವೈರಸ್​ ಹೇಗೆಲ್ಲ ಹರಡುತ್ತದೆ ಎಂದು ವೈದ್ಯರು ಜನರಲ್ಲಿ ಅರಿವು ಮೂಡಿಸುತ್ತಲೇ ಇದ್ದಾರೆ. ವೈರಸ್​ ಹರಡದಂತೆ ತಡೆಯಲು ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆಯೂ ತಿಳಿಸಲಾಗುತ್ತಿದೆ. ಆದರೂ ಕೊರೋನಾ ವೈರಸ್​ ಹೇಗೆ ಮನುಷ್ಯನನ್ನು ಹಿಡಿಯುತ್ತದೆ ಅನ್ನೋ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Bangalore Traffic police making a live video of Corona Virus catching a man
ಸಾಂದರ್ಭಿಕ ಚಿತ್ರ


ಪೊಲೀಸ್​ ಇಲಾಖೆ ಹಗಲಿರುಳು ಈ ಕೆಲಸದಲ್ಲಿ ತೊಡಗಿದೆ. ಸುಖಾ ಸುಮ್ಮನೆ ರಸ್ತೆಗಿಳಿಯುವವರಿಗೆ ಬುದ್ಧಿ ಹೇಳಿ ಹೇಳಿ ಸಾಕಾಗಿರುವ ಸಂಚಾರಿ ಪೊಲೀಸರು ಜಾಗೃತಿ ಮೂಡಿಸಲು ವಿನೂತನ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಅದರಲ್ಲಿ ಇದೂ ಒಂದು.ಶಂಖ ಹಾಗೂ ಜಾಗಟೆ ಹಿಡಿದು ಬೆಂಗಳೂರಿನ ಟ್ರಿನಿಟಿ ಸರ್ಕಲ್​ನಲ್ಲಿ ಸಂಚಾರಿ ಪೊಲೀಸರು ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಕೊರೋನಾ ವೈರಸ್​ನಂತಿರುವ ಹೆಲ್ಮೆಟ್​ ತೊಟ್ಟು ರಸ್ತೆಗಿಳಿದಿರುವ ಸಂಚಾರಿ ಪೊಲೀಸರು ಬೈಕ್​ ಸವಾರನೋರ್ವನನ್ನು ವೈರಸ್​ ಹೇಗೆ ಹಿಡಿಯುತ್ತದೆ ಎಂದು ಪ್ರಾಯೋಗಿಕವಾಗಿ ತೋರಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.ಇಂತಹ ಕೆಲವು ವಿಡಿಯೋಗಳನ್ನು ಮಾಡುತ್ತಿರುವ ಪೊಲೀಸರು ಅದನ್ನು ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಳ್ಳುತ್ತಿದ್ದಾರೆ.ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಹಾಗೂ ವೈರಸ್​ ಹರಡದಂತೆ ವಹಿಸಬೇಕಾದ ಕ್ರಮಗಳ ಕುರಿತಾಗಿ ಬೆಂಗಳೂರು ಸಂಚಾರಿ ಪೊಲೀಸರು ಮಾಡುತ್ತಿರುವ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

 HBD Ramcharan: 35ನೇ ವಸಂತಕ್ಕೆ ಕಾಲಿಟ್ಟ ರಾಮ್​ಚರಣ್​ರ ಅಪರೂಪದ ಚಿತ್ರಗಳು..! 
First published: