HOME » NEWS » Coronavirus-latest-news » BANGALORE RURAL DISTRICT PEOPLE DONT COME OUT THE INFECTED ARE NOT GETTING BED ANYWHERE IN THE DISTRICT MAK

CoronaVirus: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರೇ ಹುಷಾರ್; ಸೋಂಕಿತರಿಗೆ ಎಲ್ಲೂ ಸಿಗುತ್ತಿಲ್ಲ ಬೆಡ್!

ಬೆಂಗಳೂರು ಗ್ರಾಮೀಣ ಭಾಗಕ್ಕೆ ಸಚಿವ ಆರ್​. ಅಶೋಕ್ ಅವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಆದರೆ, ರೋಗಿಗಳಿಗೆ ಬೆಡ್ ಒದಗಿಸುವ ಜವಬ್ದಾರಿ ಹೊತ್ತ ಸಚಿವರ ಜಿಲ್ಲೆಯಲ್ಲೇ ಬೆಡ್‌ಗಾಗಿ ಜನ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

news18-kannada
Updated:May 6, 2021, 5:46 PM IST
CoronaVirus: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರೇ ಹುಷಾರ್; ಸೋಂಕಿತರಿಗೆ ಎಲ್ಲೂ ಸಿಗುತ್ತಿಲ್ಲ ಬೆಡ್!
ಪ್ರಾತಿನಿಧಿಕ ಚಿತ್ರ.
  • Share this:
ಬೆಂಗಳೂರು (ಮೇ 06); ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಅದರಲ್ಲೂ ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ಸೋಂಕಿತರ ಸಂಖ್ಯೆ ದಿನನಿತ್ಯ ಸಾವಿರಗಳ ಗಡಿ ದಾಟುತ್ತಿದೆ. ಹೀಗಾಗಿ ಕೊರೋನಾ ಪೀಡಿತರಿಗೆ ಬೆಡ್​ ಹೊಂದಿಸುವುದೇ ದೊಡ್ಡ ಹರಸಾಹಸದ ಕೆಲಸ ಎಂಬಂತಾಗಿದೆ. ಬೆಂಗಳೂರು ನಗರ ಭಾಗದಲ್ಲಿ ಇತ್ತೀಚೆಗೆ ಪೊಲೀಸರು ಕೊರೋನಾ ವಾರ್​ ರೂಂಗಳ ಮೇಲೆ ದಾಳಿ ನಡೆಸಿ ಬೆಡ್​ ಬ್ಲಾಕಿಂಗ್ ಹಗರಣವನ್ನು ಬಯಲಿಗೆ ಎಳೆದಿದ್ದಾರೆ. ಹೀಗಾಗಿ ನಗರ ಭಾಗದಲ್ಲಿ ನಿನ್ನೆಯಿಂದ ಸೋಂಕಿತರಿಗೆ ಬೆಡ್​ ಲಭ್ಯವಾಗುತ್ತಿದೆ. ಆದರೆ, ಬೆಂಗಳೂರು ಗ್ರಾಮೀಣ ಭಾಗದಲ್ಲಿ ನಿಜಕ್ಕೂ ಸೋಂಕಿತರ ಸಂಖ್ಯೆ ಅಧಿಕವಾಗಿರುವ ಕಾರಣ ಆಸ್ಪತ್ರೆಯಲ್ಲಿ ಬೆಡ್​ ಲಭ್ಯವಾಗುತ್ತಿಲ್ಲ. ಇದರಿಂದ ಸಾಮಾನ್ಯವಾಗಿ ರೋಗಿಗಳು ಮತ್ತು ಅವರ ಸಂಬಂಧಿಕರು ಬೇಸತ್ತಿದ್ದಾರೆ.

ಬೆಂಗಳೂರು ಗ್ರಾಮೀಣ ಭಾಗಕ್ಕೆ ಸಚಿವ ಆರ್​. ಅಶೋಕ್ ಅವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಆದರೆ, ರೋಗಿಗಳಿಗೆ ಬೆಡ್ ಒದಗಿಸುವ ಜವಬ್ದಾರಿ ಹೊತ್ತ ಸಚಿವರ ಜಿಲ್ಲೆಯಲ್ಲೇ ಬೆಡ್‌ಗಾಗಿ ಜನ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಖಾಸಗಿ ಸರ್ಕಾರಿ ಆಸ್ಪತ್ರೆ ಸೇರಿ 11 ಕೋವಿಡ್ ಆಸ್ಪತ್ರೆಗಳಿವೆ. ಸರಿಸುಮಾರು 50 ಖಾಸಗಿ ಆಸ್ಪತ್ರೆಗಳಿದ್ದರೂ ಯಾವ ಆಸ್ಪತ್ರೆಯಲ್ಲೂ ಬೆಡ್​ ಲಭ್ಯವಾಗುತ್ತಿಲ್ಲ

ಬೆಡ್‌ ಸಿಗದ ಕಾರಣ ಗ್ರಾಮೀಣ ಭಾಗದ ಜನ ನಿತ್ಯ ಬೆಂಗಳೂರಿನ ಆಸ್ಪತ್ರೆಗಳನ್ನ ಅಲೆಯುತ್ತಿದ್ದಾರೆ. ಸ್ವತಃ ತಹಶಿಲ್ದಾರ್ ಪ್ರಯತ್ನ ಪಟ್ಟರು ಸಹ ಸೋಂಕಿತರಿಗೆ ಕನಿಷ್ಟ ಒಂದೂ ಆಕ್ಸಿಜನ್ ಬೆಡ್​ ಸಿಗುತ್ತಿಲ್ಲ. ಮುಂಜಾನೆಯಿಂದ ನೆಲಮಂಗಲದ ಸೋಂಕಿತೆಗಾಗಿ ತಹಶೀಲ್ದಾರ್ ಕೆ. ಮಂಜುನಾಥ್  ಆಕ್ಸಿಜನ್ ಬೆಡ್ ಹುಡುಕುತ್ತಿದ್ದಾರೆ. ಆದರೆ, ಬೆಡ್ ಲಭ್ಯವಾಗಿಲ್ಲ ಎಂದರೆ ಇನ್ನೂ ಸಾಮಾನ್ಯ ಜನರ ಪರಿಸ್ಥಿತಿಯನ್ನು ಊಹಿಸಬಹುದು.

ಇನ್ನೂ ವೆಂಟೀಲೇಟರ್ ಹಾಗೂ ಐಸಿಯು ಬೆಡ್​ಗಳಿಗಾಗಿ ಯಾರ ಬಳಿ ಮಾಹಿತಿ ಕೇಳಬೇಕು ಅನ್ನೋ ಗೊಂದಲವೂ ಸೋಂಕಿತರಲ್ಲಿದೆ. ಕೋವಿಡ್ ಸಹಾಯವಾಣಿ ಇಲ್ಲದೆ  ಜನ ಪರದಾಡುತ್ತಿದ್ದಾರೆ. ಹೀಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನ ಈಗಲೇ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ನಿಮ್ಮ ಜೀವ ನಿಮ್ಮ ಕೈಯಲ್ಲಿದೆ! ಮನೆಯಿಂದ ಹೊರಹೋಗಿ ಸೋಂಕು ಹರಡಿಸಿಕೊಳ್ಳೋ ಮುನ್ನ ಎಚ್ಚರಿಕೆಯಿಂದಿರುವುದು ಉತ್ತಮ.

ಭಾರತದಲ್ಲಿ ದಾಖಲೆ ಬರೆದ ಕೊರೋನಾ:

ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಕೊರೋನಾ ಸೋಂಕು ಹರಡುವಿಕೆ ಶರವೇಗವನ್ನು ಪಡೆದುಕೊಂಡಿದೆ.‌ ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ‌.‌ ಏಪ್ರಿಲ್ 4ರಿಂದ ದಿನ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು, ಏಪ್ರಿಲ್ 14ರಿಂದ ದಿನ ಒಂದರಲ್ಲಿ ಎರಡು ಲಕ್ಷಕ್ಕೂ ‌ಹೆಚ್ಚು‌ ಜನರು ಹಾಗೂ ಏಪ್ರಿಲ್ 17ರಿಂದ ದಿನ‌ ಒಂದರಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದರು. ಈಗ ದೇಶದ ಕೊರೊನಾ ಪೀಡಿತರ ಸಂಖ್ಯೆ ಎರಡು ಕೋಟಿಯನ್ನೂ ದಾಟಿದೆ. ಅಲ್ಲದೆ ಇದೇ ಮೊದಲ ಬಾರಿಗೆ ನಾಲ್ಕು ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಗೋಚರಿಸಲು ಆರಂಭಿಸಿವೆ.

ಇದನ್ನೂ ಓದಿ: Corona Death: ಬೆಂಗಳೂರಿನಲ್ಲಿ ಕೊರೋನಾ ಮರಣ ಮೃದಂಗ; ಶವ ಸಂಸ್ಕಾರಕ್ಕೆ ಸೌದೆ ಅಭಾವ!ಬುಧವಾರ 4,12,262 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಗುಣ ಆಗಿರುವವರು 3,29,113 ಜನ ಮಾತ್ರ. ಇದರಿಂದ ದೇಶದಲ್ಲಿ ಈವರೆಗೆ ಕೊರೋನಾ ಸೋಂಕು ಪೀಡಿತರಾದವರ ಸಂಖ್ಯೆ ಎರಡು ಕೋಟಿ ದಾಟಿದ್ದು 2,10,77,410ಕ್ಕೆ ಏರಿಕೆ ಆಗಿದೆ.‌ ಇದಲ್ಲದೆ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ‌ ಹೆಚ್ಚಾಗಿದ್ದು ದೇಶದಲ್ಲಿ ಇದೀಗ ದಿನ ಒಂದರಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನ‌ ಸಾವನ್ನಪ್ಪುತ್ತಿದ್ದಾರೆ. ಬುಧವಾರ 3,980 ಜನರು ಬಲಿ ಆಗಿದ್ದು ಈವರೆಗೆ ಮಹಾಮಾರಿ ಕೊರೋನಾಗೆ ಬಲಿ ಆದವರ ಸಂಖ್ಯೆ 23,01,68ಕ್ಕೆ ಏರಿಕೆ ಆಗಿದೆ.
Youtube Video

ದೇಶದಲ್ಲಿ ಮೊತ್ತ ಮೊದಲ ಬಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು 2020ರ ಜನವರಿ 30ರಂದು; ಕೇರಳದಲ್ಲಿ. ಅದಾದ ಬಳಿಕ ಅದು ಲಕ್ಷದ ಗಡಿ ಬಳಿ ಬರಲು ಹೆಚ್ಚು ಕಡಿಮೆ ಎಂಟು ತಿಂಗಳು ಹಿಡಿದವು. ಆಗಲೂ ದಿನ ಒಂದರಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಒಂದು ಲಕ್ಷ ದಾಟಿರಲಿಲ್ಲ. 2020ರ ಸೆಪ್ಟೆಂಬರ್ 17ರಂದು 98,795 ಕೇಸ್ ಕಂಡುಬಂದಿದ್ದೇ ಈವರೆಗಿನ ದಾಖಲೆ ಆಗಿತ್ತು.
Published by: MAshok Kumar
First published: May 6, 2021, 5:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories