ಬೆಂಗಳೂರು(ಏ.22): ಪ್ರಧಾನಿ ನರೇಂದ್ರ ಮೋದಿ ಕರೆಯಂತೆ ಮೇ 3ರವರೆಗೂ ಲಾಕ್ಡೌನ್ ವಿಸ್ತರಣೆಸಿ ಬೆಂಗಳೂರಿನಲ್ಲಿ ಕಟ್ಟುನಿಟ್ಟಿನ ಕಠಿಣ ಕ್ರಮಗಳನ್ನು ಪೊಲೀಸ್ ಇಲಾಖೆ ಜಾರಿಗೊಳಿಸಿದೆ. ಮೇ 3ರವರೆಗೆ ಲಾಕ್ಡೌನ್ನ್ನು ಮತ್ತಷ್ಟು ಬಿಗಿಗೊಳಿಸಿ ನಗರದಲ್ಲಿ ಸುಮ್ಮನೆ ಬೇಕಾಬಿಟ್ಟಿ ಓಡಾಡುವ ಜನರ ಮೇಲೆ ನಿಗಾ ಇರಿಸಲಾಗಿದೆ.
ವಾಕಿಂಗ್ ನೆಪದಲ್ಲಿ ಓಡಾಡುವ ಜನರ ಮೇಲೂ ಪೊಲೀಸ್ ಇಲಾಖೆ ಕಣ್ಣಿಟ್ಟಿದೆ. ಜನರು ವಾಕಿಂಗ್ ಹೆಸರಿನಲ್ಲಿ ನಾಯಿ ಹಿಡಿದು ಸುತ್ತಾಡುತ್ತಿದ್ದು, ಒಂದು ಏರಿಯಾದಿಂದ ಇನ್ನೊಂದು ಏರಿಯಾಗೆ ಹೋಗಿ ಬರುತ್ತಿದ್ದಾರೆ. ಹೀಗಾಗಿ ಇಂತಹವರನ್ನು ನಿಯಂತ್ರಿಸಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ.
ಇನ್ನು, ಅನವಶ್ಯಕವಾಗಿ ಸುತ್ತಾಡುವ ಜನರನ್ನು ನಿಯಂತ್ರಿಸಲು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ರಾವ್ ಸೂಚನೆ ನೀಡಿದ್ದಾರೆ. ಏಪ್ರಿಲ್ 20ರವರೆಗೆ ಲಾಕ್ಡೌನ್ ಬಿಗಿಗೊಳಿಸಲು ಪೊಲೀಸ್ ಕಮಿಷನರ್ ಸೂಚಿಸಿದ್ದಾರೆ. ಆದ್ದರಿಂದ ಪೊಲೀಸ್ ಇಲಾಖೆ ಇಂದಿನಿಂದ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿ ಮಾಡಲು ಮುಂದಾಗಿದೆ.
ಇದನ್ನೂ ಓದಿ: ಬಿಗಿಯಾದ ಲಾಕ್ಡೌನ್ನಿಂದ ಸುಧಾರಣೆ ಕಂಡ ಬೆಂಗಳೂರು: ಕಳೆದ 3 ದಿನಗಳಿಂದ ದಾಖಲಾಗಿಲ್ಲ ಒಂದೇ ಒಂದು ಹೊಸ ಕೋವಿಡ್-19 ಪ್ರಕರಣ
ಹೀಗೆ ಲಾಕ್ಡೌನ್ ಜಾರಿ ಮಾಡಿದ್ದರಿಂದಲೇ ಸದಾ ಯಾವಾಗಲೂ ಟ್ರಾಫಿಕ್, ಹೊಗೆ, ಧೂಳು, ಕಸ, ಜನಜಂಗುಳಿ, ಕರ್ಕಶ ಶಬ್ಧದಿಂದ ಬಸವಳಿದ್ದಿದ್ದ ಬೆಂಗಳೂರಿಗೆ ಈಗ ಮುಕ್ತಿ ಸಿಕ್ಕಿದಂತಾಗಿದೆ. ಬೆಂಗಳೂರಿನ ನೆಲ ಈಗ ಮುಕ್ತವಾಗಿ ಉಸಿರಾಡುತ್ತಿದೆ. ಬೆಂಗಳೂರಿನ ವಿಹಂಗಮ ನೋಟವನ್ನು ಬಿಬಿಎಂಪಿ ಡ್ರೋನ್ ಮೂಲಕ ಸೆರೆಹಿಡಿದಿದೆ. ವಿಡಿಯೋದಲ್ಲಿ ನೀವು ಎಂದೂ ನೋಡಿರಲಾರದ ಸುಂದರವಾದ ಸಿಲಿಕಾನ್ ಸಿಟಿ ನೋಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ