• ಹೋಂ
  • »
  • ನ್ಯೂಸ್
  • »
  • Corona
  • »
  • Padarayanapura Violence: ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು, ಮತ್ತಷ್ಟು ಆರೋಪಿಗಳಿಗಾಗಿ ಶೋಧ

Padarayanapura Violence: ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು, ಮತ್ತಷ್ಟು ಆರೋಪಿಗಳಿಗಾಗಿ ಶೋಧ

ಪಾದರಾಯನಪುರ ಗಲಾಟೆ ದೃಶ್ಯ.

ಪಾದರಾಯನಪುರ ಗಲಾಟೆ ದೃಶ್ಯ.

Padarayanapura Riots: ಪಾದರಾಯನಪುರ ವಾಡ್‌ನಲ್ಲಿ ಈಗಾಗಲೇ ಪ್ರತಿ ಗಲ್ಲಿಗೆ 15 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ಒಟ್ಟು ಪಾದರಾಯನಪುರ ವಾರ್ಡ್ ಭದ್ರತೆಗೆ 800 ಮಂದಿ ಪೊಲೀಸರನ್ನು ನೇಮಕ ಮಾಡಲಾಗಿದೆ. ಪರಿಣಾಮ ಅನಾವಶ್ಯಕವಾಗಿ ಓಡಾಡೋರ ಸಂಖ್ಯೆಯಲ್ಲಿ ಇಳಿಮುಖವಾಗಿದೆ.‌ ಪೊಲೀಸರ ಭಯದಲ್ಲಿ ಮನೆಯಿಂದ ಹೊರಬರೋಕೆ ಜನ ಹಿಂದೇಟು ಹಾಕುತ್ತಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರು (ಏಪ್ರಿಲ್ 21); ಇಡೀ ರಾಜ್ಯವನ್ನೇ ತಲ್ಲಣಕ್ಕೆ ದೂಡಿರುವ ಪಾದರಾಯನಪುರ ಗಲಾಟೆಯ ಕುರಿತ ಶೋಧವನ್ನು ಪೊಲೀಸ್‌ ಇಲಾಖೆ ತೀವ್ರಗೊಳಿಸಿದ್ದು ಮತ್ತಷ್ಟು ಆರೋಪಿಗಳಿಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ.


ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೆಂದು ಮುಖರ್ಜಿ ನೇತೃತ್ವದ ವಿಶೇಷ ತಂಡ ರಚಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 54 ಜನರನ್ನು ಬಂಧಿಸಲಾಗಿದೆ. ಆದರೆ, ಆರೋಪಿಗಳು ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ತಿಳಿದುಬಂದಿದೆ. ಈ ನಡುವೆ ಪ್ರಮುಖ ಆರೋಪಿಗಳಾದ ಇರ್ಫಾನ್ ಮತ್ತು ಉಳಿದ ಆರೋಪಿಗಳ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ.


ಪೊಲೀಸರ ಟಫ್ ರೂಲ್ಸ್ ಗೆ ಬೆಚ್ಚಿಬಿದ್ದ ಪಾದರಾಯನಪುರ ಜನ:


ಕೊರೋನಾ ಹಾಟ್‌ಸ್ಪಾಟ್‌ ಎಂದು ಘೋಷಿಸಿದ್ದ ಸಂದರ್ಭದಲ್ಲೂ ಪಾದರಾಯನಪುರ ವಾಡ್‌ನಲ್ಲಿ ಜನ ಎಗ್ಗಿಲ್ಲದೆ ಓಡಾಡುತ್ತಿದ್ದರು. ಆದರೆ, ಭಾನುವಾರದ ಗಲಾಟೆಯಯ ನಂತರ ಜನ ಮನೆಯಿಂದ ಹೊರಬರಲೂ ಸಹ ಹೆದರುವ ಸ್ಥಿತಿ ಉಂಟಾಗಿದೆ.


ವಾಡ್‌ನಲ್ಲಿ ಈಗಾಗಲೇ ಪ್ರತಿ ಗಲ್ಲಿಗೆ 15 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ಒಟ್ಟು ಪಾದರಾಯನಪುರ ವಾರ್ಡ್ ಭದ್ರತೆಗೆ 800 ಮಂದಿ ಪೊಲೀಸರನ್ನು ನೇಮಕ ಮಾಡಲಾಗಿದೆ. ಪರಿಣಾಮ ಅನಾವಶ್ಯಕವಾಗಿ ಓಡಾಡೋರ ಸಂಖ್ಯೆಯಲ್ಲಿ ಇಳಿಮುಖವಾಗಿದೆ.‌ ಪೊಲೀಸರ ಭಯದಲ್ಲಿ ಮನೆಯಿಂದ ಹೊರಬರೋಕೆ ಜನ ಹಿಂದೇಟು ಹಾಕುತ್ತಿದ್ದಾರೆ.


ಏರಿಯಾದ ಬಹುತೇಕ ಕಡೆಗಳಲ್ಲಿ ಬಿಗಿ ಪೊಲೀಸ್ ಬಂದೊಬಸ್ತ್ ಕೈಗೊಳ್ಳಲಾಗಿದ್ದು ಡಿಸಿಪಿ ರಮೇಶ್ ಬಾನೂತ್‌ ಇಂದು ಜೆಜೆ ನಗರ ಪೊಲೀಸ್‌ ಠಾಣೆಗೆ ಆಗಮಿಸಿ ಪರಿಸ್ಥಿತಿಯ ಕುರಿತು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : Padarayanapura Riot: ರಾಜ್ಯವನ್ನೇ ನಡುಗಿಸಿದ ಪಾದರಾಯನಪುರ ಗಲಾಟೆ, ಕಂಬಿ ಹಿಂದೆ ಆರೋಪಿಗಳು; ಇಲ್ಲಿದೆ ಘಟನೆಯ ಕಂಪ್ಲೀಟ್ ಡೀಟೈಲ್ಸ್‌!

top videos
    First published: