ಬೆಂಗಳೂರು (ಏಪ್ರಿಲ್ 07); ಕೊರೋನಾ ಹರಡುವುದನ್ನು ತಡೆಯುವ ಸಲುವಾಗಿ ದೇಶದಾದ್ಯಂತ ಲಾಕ್ಡೌನ್ ಘೋಷಿಸಲಾಯಿತು. ಆದರೆ, ಬೆಂಗಳೂರಿನಲ್ಲಿ ಮಾತ್ರ ಲಾಕ್ಡೌನ್ ಆಶಯ ಫಲಿಸುವಂತಹ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಜನ ಎಗ್ಗಿಲ್ಲದ ಓಡಾಡುತ್ತಿದ್ದಾರೆ. ಹೀಗಾಗಿ ಜನ ಸಂದಣಿ ಜಾಗದಲ್ಲಿ ಹದ್ದಿನ ಕಣ್ಣಿಡುವ ಸಲುವಾಗಿ ಬೆಂಗಳೂರು ಪೊಲೀಸರು ಡ್ರೋನ್ ಕ್ಯಾಮೆರಾದ ಮೊರೆಹೋಗಿದ್ದಾರೆ.
ನಗರ ಪೊಲೀಸ್ ಇಲಾಖೆ ಮತ್ತು ಇಂಡಿಯನ್ ಇನ್ಸ್ಟ್ಯೂಟ್ ಆಫ್ ಸೈನ್ ಸಹಯೋದಲ್ಲಿ ಡ್ರೋನ್ ಕ್ಯಾಮೆರಾ ಅಭಿವೃದ್ಧಿಪಡಿಸಲಾಗಿದೆ. ಮೂರು ಕೆ.ಜಿ ತೂಕದ ಈ ಡ್ರೋನ್ನಲ್ಲಿ ಜಿಪಿಎಸ್ ಅಳಡಿಸಲಾಗಿದೆ. ಅಲ್ಲದೆ, ವಿಶೇಷ ಕ್ಯಾಮೆರಾ ಜೊತೆಗೆ ಸೌಂಡ್ ಬಾಕ್ಸ್ ಅನ್ನೂ ಇದರಲ್ಲಿ ಜೋಡಿಸಲಾಗಿದೆ. ಇದರ ಸಹಾಯದಿಂದ ಒಂದೇ ಕಡೆ ಕುಳಿತು ಪೊಲೀಸರು ಒಂದೂವರೆ ಕಿ.ಮೀ ವ್ಯಾಪ್ತಿಯ ಜಾಗದ ಮೇಲೆ ಕಣ್ಣಿಡಬಹುದಾಗಿದೆ.
ಜನಸಂದಣಿ ಕಂಡುಬಂದ್ರೆ ದೃಶ್ಯಾವಳಿ ಸೆರೆಹಿಡಿಯಲಿರೋ ಡ್ರೋಣ್ ,ಪೊಲೀಸರಿಗೆ ಮಾಹಿತಿ ನೀಡಲಿದೆ. ಅಲ್ಲದೆ. ಕುಳಿತಲ್ಲೇ ಮೈಕ್ ಮೂಲಕ ಪೊಲೀಸ್ ಸಿಬ್ಬಂದಿಗಳು ಜನರಿಗೆ ಎಚ್ಚರಿಕೆ ಸಂದೇಶವನ್ನೂ ರವಾನಿಸಲು ಈ ಡ್ರೋನ್ ಸಹಕಾರಿಯಾಗಿರಲಿದೆ.
ಇಷ್ಟೊಂದು ವಿಶೇಷತೆಗಳನ್ನು ಹೊಂದಿರುವ ಈ ನೂತನ ಡ್ರೋನ್ ಅನ್ನು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಇಂದು ತಮ್ಮ ಕಚೇರಿಯಲ್ಲಿ ಉದ್ಘಾಟಿಸಿದ್ದಾರೆ. ಮೊದಲ ಹಂತದಲ್ಲಿ ಈ ಡ್ರೋನ್ ಅನ್ನು ಹೆಚ್ಚು ಜನ ಸಂದಣಿ ಇರುವ ಕೋರಮಂಗಲ, ಶಿವಾಜಿನಗರ ಸುತ್ತ ಮುತ್ತ ಪ್ರದೇಶದಲ್ಲಿ ಪ್ರಯೋಗಿಸಿ ಪರಿಶೀಲನೆ ನಡೆಸಲು ಚಿಂತನೆ ನಡೆಸಲಾಗಿದ್ದು, ಶೀಘ್ರದಲ್ಲೇ ನಗರದಾದ್ಯಂತ ಇದನ್ನು ಬಳಸಲು ಚಿಂತನೆ ನಡೆಸಲಾಗಿದೆ.
ಹೀಗಾಗಿ ಪೊಲೀಸರ ಕಣ್ತಪ್ಪಿಸಿ ಎಲ್ಲಂದರಲ್ಲಿ ಓಡಾಡಬಹುದು, ಗುಂಪಾಗಿ ಕುಳಿತುಕೊಂಡು ಹರಟೆ ಹೊಡೆಯಬಹುದು ಎಂದುಕೊಂಡಿರುವ ವ್ಯಕ್ತಿಗಳು ಇನ್ನೂ ಎಚ್ಚರಾಗಿರುವುದು ಉತ್ತಮ.
ಇದನ್ನೂ ಓದಿ : ತಾತನ ಹೆಸರಿಂದ ಅಧಿಕಾರಕ್ಕೆ ಬಂದವರಿಗೆ ಆ ಸ್ಥಾನದ ಬೆಲೆ ಗೊತ್ತಿರಲ್ಲ; ಪ್ರಜ್ವಲ್ ರೇವಣ್ಣ ವಿರುದ್ಧ ಪ್ರೀತಂ ಗೌಡ ವಾಗ್ದಾಳಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ