ಮದುವೆಯಾಗಲು ಬೆಂಗಳೂರಿನಿಂದ ವಿಜಯಪುರಕ್ಕೆ ಬಂದ ಕಾನ್​ಸ್ಟೇಬಲ್ ಸೇರಿದ್ದು ಕೊರೊನಾ ಆಸ್ಪತ್ರೆಗೆ!

ಈ ಪೊಲೀಸ್ ಕಾನ್​​ಸ್ಟೇಬಲ್ ಕೊರೊನಾ ಎಮರ್ಜೆನ್ಸಿ ಮತ್ತು ಭಾರತ ಲಾಕಡೌನ್ ಮಧ್ಯೆ ಸಮರ್ಥವಾಗಿ ಕರ್ತವ್ಯ ನಿರ್ವಹಿಸಿದ್ದರು. ಆದರೆ, ನಿರ್ವಹಿಸಿ ಬಾಳ ಸಂಗಾತಿ ವರಿಸಲು ಬಂದಾಗ ಕೊರೋನಾ ವಕ್ಕರಿಸಿದ್ದು ಮಾತ್ರ ವಿಪರ್ಯಾಸವೇ ಸರಿ.

news18-kannada
Updated:June 30, 2020, 1:25 PM IST
ಮದುವೆಯಾಗಲು ಬೆಂಗಳೂರಿನಿಂದ ವಿಜಯಪುರಕ್ಕೆ ಬಂದ ಕಾನ್​ಸ್ಟೇಬಲ್ ಸೇರಿದ್ದು ಕೊರೊನಾ ಆಸ್ಪತ್ರೆಗೆ!
ವಿಜಯಪುರ ಜಿಲ್ಲಾಸ್ಪತ್ರೆ
  • Share this:
ವಿಜಯಪುರ ಜೂ. 30- ಅವರೊಬ್ಬ ಆರಕ್ಷಕ.  ರಾಜಧಾನಿಯಲ್ಲಿ ಸರ್ಕಾರಿ ನೌಕರಿಯಲ್ಲಿದ್ದ ಅವರು ಇಷ್ಟಪಟ್ಟ ಹುಡುಗಿಯನ್ನು ಕೈ ಹಿಡಿಯಲು ತವರೂರಿಗೆ ಓಡೋಡಿ ಬಂದಿದ್ದರು.  ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಂದು ಅವರು ಹುಡುಗಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿತ್ತು.  ಆದರೆ, ಆಗಿದ್ದೇ ಬೇರೆ.

ಕೊರೋನಾದಿಂದ ಜನಸಾಮಾನ್ಯರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಇದು ಕೂಡ ಅಂಥದ್ದೇ ಒಂದು ಕಥೆ.  ಬೆಂಗಳೂರಿನಲ್ಲಿ ಪೊಲೀಸ್ ಕಮಿಷನರೇಟ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಕಾನ್​ಸ್ಟೇಬಲ್​ಗೆ ಇಂದು ಮದುವೆ ಫಿಕ್ಸ್ ಆಗಿತ್ತು.  ಅದಕ್ಕಾಗಿ ಅವರು ರಜೆ ಹಾಕಿ ಗುಮ್ಮಟ ನಗರಿ ವಿಜಯಪುರಕ್ಕೆ ಬಂದಿದ್ದರು.  ಆದರೆ, ಎರಡು ದಿನಗಳ ಹಿಂದೆ ಇವರಿಗೆ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿದ್ದು, ಮದುವೆಯನ್ನು ಮುಂದೂಡಲಾಗಿದೆ.  ಸಪ್ತಪದಿ ತುಳಿಯಲು ಮದುವೆ ಮಂಪಟಕ್ಕೆ ಹೋಗುವ ಬದಲು ಆಸ್ಪತ್ರೆಗೆ ದಾಖಲಾಗುವಂತಾಗಿದೆ.

ಮದುವೆ ದಿನಾಂಕ ನಿಗದಿಯಾದ ಕಾರಣ ವಿಜಯಪುರಕ್ಕೆ ಬಂದಿದ್ದ ಈ ಕಾನಸ್ಟೇಬಲ್ ನಲ್ಲಿ ಕೊರೊನಾ ಲಕ್ಷಣ ಕಂಡು ಬಂದಿತ್ತು.  ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಡಳಿತ ಈ ಕಾನಸ್ಚೇಬಲ್​ನ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿತ್ತು.  ಎರಡು ದಿನಗಳ ಹಿಂದೆ ವರದಿ ಬಂದಿದ್ದು, ಈ ಕಾನಸ್ಟೇಬಲ್​ನಲ್ಲಿ ಕೊರೋನಾ ಸೋಂಕು ಇರುವುದು ದೃಢವಾಗಿದೆ.  ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಡಳಿತ ಮದುವೆಯನ್ನು ಮುಂದೂಡವಂತೆ ಸೂಚಿಸಿತ್ತು.


ವಿಜಯಪುರ ಜಿಲ್ಲಾಡಳಿತ ಸೂಚನೆ ಹಿನ್ನೆಲೆಯಲ್ಲಿ ಕಾನಸ್ಟೇಬಲ್ ಕುಟುಂಬಸ್ಥರು ಮದುವೆಯನ್ನು ಮುಂದೂಡಿದ್ದಾರೆ.  ಅಷ್ಟೇ ಅಲ್ಲ, ಮದುಮಗನನ್ನು ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ.  ಈ ಮದುಮಗನ ಸಂಪರ್ಕಕ್ಕೆ ಬಂದಿರುವ ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಗೆ ಜಿಲ್ಲಾಡಳಿತ ಸೂಚಿಸಿದೆ.  ಅಲ್ಲದೇ, ಮದುಮಗನಾಗಿದ್ದ ಪೊಲೀಸನ ಸಂಪರ್ಕಕ್ಕೆ ಬಂದ 30 ಜನರ ಗಂಟಲು ದ್ರವದ ಮಾದರಿಯನ್ನು ಆರೋಗ್ಯ ಇಲಾಖೆ ಈಗ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದೆ.

ಈ ಪೊಲೀಸ್ ಕಾನ್​​ಸ್ಟೇಬಲ್ ಕೊರೊನಾ ಎಮರ್ಜೆನ್ಸಿ ಮತ್ತು ಭಾರತ ಲಾಕಡೌನ್ ಮಧ್ಯೆ ಸಮರ್ಥವಾಗಿ ಕರ್ತವ್ಯ ನಿರ್ವಹಿಸಿದ್ದರು. ಆದರೆ, ನಿರ್ವಹಿಸಿ ಬಾಳ ಸಂಗಾತಿ ವರಿಸಲು ಬಂದಾಗ ಕೊರೋನಾ ವಕ್ಕರಿಸಿದ್ದು ಮಾತ್ರ ವಿಪರ್ಯಾಸವೇ ಸರಿ.
First published:June 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading