• Home
  • »
  • News
  • »
  • coronavirus-latest-news
  • »
  • ಪಾದರಾಯನಪುರ ಗಲಭೆ ಪ್ರಕರಣ; 54 ಆರೋಪಿಗಳು ಇಂದು ರಾಮನಗರ ಜೈಲಿಗೆ ಶಿಫ್ಟ್​

ಪಾದರಾಯನಪುರ ಗಲಭೆ ಪ್ರಕರಣ; 54 ಆರೋಪಿಗಳು ಇಂದು ರಾಮನಗರ ಜೈಲಿಗೆ ಶಿಫ್ಟ್​

ಪಾದರಾಯನಪುರ ಗಲಭೆಯ ದೃಶ್ಯ

ಪಾದರಾಯನಪುರ ಗಲಭೆಯ ದೃಶ್ಯ

Padarayanapura Violence: ಬೆಂಗಳೂರಿನ ಪರಪ್ಪನ ಅಗ್ರಹಾರದ ಬದಲಿಗೆ ರಾಮನಗರ ಜೈಲಿಗೆ ಶಿಫ್ಟ್ ಮಾಡುವಂತೆ ಕಾರಾಗೃಹ ಡಿಜಿಪಿ ಅಲೋಕ್ ಮೋಹನ್ ಆದೇಶಿಸಿದ್ದಾರೆ.

  • Share this:

ರಾಮನಗರ (ಏ. 21): ಬೆಂಗಳೂರಿನ ಪಾದರಾಯನಪುರದಲ್ಲಿ ಭಾನುವಾರ ರಾತ್ರಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ 54 ಆರೋಪಿಗಳನ್ನು ಇಂದು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗುವುದು.

ಬೆಂಗಳೂರಿನ ಪರಪ್ಪನ ಅಗ್ರಹಾರದ ಬದಲಿಗೆ ರಾಮನಗರ ಜೈಲಿಗೆ ಶಿಫ್ಟ್ ಮಾಡುವಂತೆ ಕಾರಾಗೃಹ ಡಿಜಿಪಿ ಅಲೋಕ್ ಮೋಹನ್ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾ ಕಾರಾಗೃಹದ 177 ವಿಚಾರಣಾಧೀನ ಆರೋಪಿಗಳು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರವಾಗಲಿದ್ದಾರೆ. ಹೀಗಾಗಿ, ರಾಮನಗರ ಜೈಲ್ ಬಳಿ ಬಿಗಿ ಭದ್ರತೆ ಒದಗಿಸಲಾಗಿದೆ. ಬ್ಯಾರಿಕೇಡ್​ಗಳನ್ನು ಹಾಕಿ ಪೊಲೀಸರು ಜೈಲಿನ ಬಳಿ ಭದ್ರತೆ ಒದಗಿಸಿದ್ದಾರೆ. ಪೊಲೀಸರ ಬಿಗಿ ಭದ್ರತೆಯಲ್ಲಿ ಮೂರು ಬ್ಯಾಚ್ ಗಳ ಮೂಲಕ ವಿಚಾರಣಾಧೀನ ಆರೋಪಿಗಳ ಸ್ಥಳಾಂತರ ಮಾಡಲಾಗುವುದು.

ಇದನ್ನೂ ಓದಿ: ಕೊರೋನಾ ನಿಮ್ಮ ಧರ್ಮ ಮತ್ತು ಜಾತಿ ಕೇಳಿ ಬರೋದಿಲ್ಲ: ಪಾದರಾಯನಪುರ ಗಲಭೆಗೆ ಸಂಸದ ತೇಜಸ್ವಿ ಸೂರ್ಯ ಖಂಡನೆ

ರಾಮನಗರದ ಜೈಲಿನಲ್ಲಿನ ಆರೋಪಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್​ ಮಾಡಿದ ಬಳಿಕ ಪಾದರಾಯನಪುರದ ಗಲಭೆಕೋರರನ್ನು ರಾಮನಗರಕ್ಕೆ ಕರೆತರಲಾಗುವುದು. ಬಂಧಿತ ಆರೋಪಿಗಳಿಗೆ ಕೊರೋನಾ ಸೋಂಕು ಹರಡಿರುವ ಅನುಮಾನ ಇರುವುದರಿಂದ ರಾಮನಗರ ಜೈಲನ್ನೇ ಕ್ವಾರಂಟೈನ್ ಕೇಂದ್ರವಾಗಿ ಮಾಡಿ 54 ಜನ ಆರೋಪಿಗಳನ್ನು ಶಿಫ್ಟ್ ಮಾಡಲಾಗುತ್ತಿದೆ.

ಕೊರೋನಾ ವೈರಸ್​ ತೀವ್ರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಪಾದರಾಯನಪುರವನ್ನು ಈಗಾಗಲೇ ಸೀಲ್​ಡೌನ್ ಮಾಡಲಾಗಿದೆ. ಈ ಪ್ರದೇಶದಲ್ಲಿ ಕೊರೋನಾ ಸೋಂಕಿತರ ಜೊತೆ ಸಂಪರ್ಕ ಹೊಂದಿದ್ದವರನ್ನು ಕ್ವಾರಂಟೈನ್‌ನಲ್ಲಿ ಇರಿಸಲು ಭಾನುವಾರ ರಾತ್ರಿ ಪೊಲೀಸರು, ಬಿಬಿಎಂಪಿ ಅಧಿಕಾರಿಗಳು ಮತ್ತು ವೈದ್ಯಕೀಯ ಸಿಬ್ಬಂದಿಗಳು ತೆರಳಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಕೊರೋನಾ ಸೋಂಕಿತರ ಜೊತೆ ದ್ವಿತೀಯ ಸಂಪರ್ಕ ಹೊಂದಿದ್ದ 58 ಜನರನ್ನು ಕ್ವಾರಂಟೈನ್​ನಲ್ಲಿರಿಸಲು ತೆರಳಿದ್ದರು. ಈ ವೇಳೆ ಸ್ಥಳೀಯರು ಪೊಲೀಸರು ಮತ್ತು ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು.

ಇದನ್ನೂ ಓದಿ: ಪಾದರಾಯನಪುರ ಗಲಾಟೆ; ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು, ಮತ್ತಷ್ಟು ಆರೋಪಿಗಳಿಗಾಗಿ ಶೋಧ

(ವರದಿ: ಎ.ಟಿ. ವೆಂಕಟೇಶ್)

First published: