ಕೊರೋನಾದಿಂದ ಸಾವನ್ನಪ್ಪಿದವರನ್ನು ಸ್ವಯಂಪ್ರೇರಿತವಾಗಿ ಅಂತ್ಯಕ್ರಿಯೆ ಮಾಡುತ್ತಿದೆ ಬೆಂಗಳೂರಿನ ತಂಡ

Bangalore Coronavirus: ಬೆಂಗಳೂರಿನಲ್ಲಿ ಕೊರೋನಾದಿಂದ ಸಾವನ್ನಪ್ಪಿದವರನ್ನು ಆರು ಮಂದಿ ಸ್ವಯಂಪ್ರೇರಿತವಾಗಿ ಅಂತ್ಯಕ್ರಿಯೆ ಮಾಡುತ್ತಿದ್ದಾರೆ. ಮರ್ಸಿ ಏಂಜಲ್ಸ್ ಎಂಬ ಎನ್​ಜಿಓ ಸರ್ಕಾರದ ಆದೇಶದ ಮೇರೆಗೆ, ಬಿಬಿಎಂಪಿ ಅನುಮತಿ ಪಡೆದು ಅಂತ್ಯಕ್ರಿಯೆ ಮಾಡುತ್ತಿದೆ.

news18-kannada
Updated:July 1, 2020, 1:58 PM IST
ಕೊರೋನಾದಿಂದ ಸಾವನ್ನಪ್ಪಿದವರನ್ನು ಸ್ವಯಂಪ್ರೇರಿತವಾಗಿ ಅಂತ್ಯಕ್ರಿಯೆ ಮಾಡುತ್ತಿದೆ ಬೆಂಗಳೂರಿನ ತಂಡ
ಪ್ರಾತಿನಿಧಿಕ ಚಿತ್ರ.
  • Share this:
ಬೆಂಗಳೂರು (ಜು. 1): ಇಡೀ ದೇಶಾದ್ಯಂತ ಕೊರೋನಾ‌ ಭೀತಿಯ ವಾತಾವರಣವಿದೆ. ಈ ನಡುವೆ ಯಾರಿಂದ ಯಾರಿಗೆ ವೈರಸ್ ಬರುತ್ತೆ ಅನ್ನೋದು ಊಹೆ ಮಾಡೋಕೂ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿರುವವರಲ್ಲಿ ಮುಂಚೂಣಿಯಲ್ಲಿರುವುದು ವೈದ್ಯರು. ಇಂದು ವಿಶ್ವ ವೈದ್ಯರ  ದಿನಾಚರಣೆ. ಎಲ್ಲರಿಗೂ ಗೊತ್ತಿರುವಂತೆ, ದಾವಣಗೆರೆ ಮತ್ತು ಬಳ್ಳಾರಿಯಲ್ಲಿ ಕೋವಿಡ್- 19 ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಮೃತದೇಹವನ್ನು ಕಸದಂತೆ ಎಸೆಯಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್ ಆಗಿದ್ದು, ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.

ಈ ಸಂದರ್ಭದಲ್ಲಿ ಬೆಂಗಳೂರಿನ ಎಚ್ ಬಿಎಸ್ ಆಸ್ಪತ್ರೆ ವೈದ್ಯ ತಹ ಮಾಟೀನ್ ಸಹ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾವನ್ನಪ್ಪಿದ ರೋಗಿಯ ಅಂತ್ಯಕ್ರಿಯೆ ಮಾಡಬೇಕಾದರೆ ಪ್ರೋಟೋಕಾಲ್ ಅನುಸರಿಸಬೇಕು. ಮೃತದೇಹಗಳನ್ನು‌ ಆಯಾ ಧರ್ಮಕ್ಕೆ ಅನುಗುಣವಾಗಿ ಅಂತ್ಯಕ್ರಿಯೆ ಮಾಡಬೇಕು. ಅದು ನಮ್ಮ‌ ಸಂಸ್ಕೃತಿ. ಬೆಂಗಳೂರಿನಲ್ಲಿ ಕೊರೋನಾದಿಂದ ಸಾವನ್ನಪ್ಪಿದವರನ್ನು ಆರು ಮಂದಿ ಸ್ವಯಂಪ್ರೇರಿತವಾಗಿ ಅಂತ್ಯಕ್ರಿಯೆ ಮಾಡುತ್ತಿದ್ದಾರೆ. ಮರ್ಸಿ ಏಂಜಲ್ಸ್ ಎಂಬ ಎನ್​ಜಿಓ  ತಂಡ ಸರ್ಕಾರದ ಆದೇಶದ ಮೇರೆಗೆ, ಬಿಬಿಎಂಪಿ ಅನುಮತಿ ಪಡೆದು ಅಂತ್ಯಕ್ರಿಯೆ ಮಾಡುತ್ತಿದೆ.


ಇದುವರೆಗೂ ನೂರಕ್ಕೂ ಹೆಚ್ಚು ಕೊರೋನಾ ಹಾಗೂ ಕೊರೋನಾ ಸೋಂಕಿಲ್ಲದ ಮೃತ ದೇಹಗಳಿಗೆ ಮುಕ್ತಿ ನೀಡಲಾಗಿದೆ. ಆಸ್ಪತ್ರೆಯಲ್ಲಿ ಮೃತಪಟ್ಟರೆ ಅದಕ್ಕೆ ಸ್ಯಾನಿಟೈಸ್ ಮಾಡಿ ಫೂರ್ತಿ ಕಿಟ್ ಮೂಲಕ ಕವರ್ ಮಾಡಲಾಗುತ್ತದೆ. ಅದರಿಂದ ಯಾವುದೇ ಸೊಂಕು ಹರಡುವುದಿಲ್ಲ. ಎಲ್ಲರೂ ಮುಂಜಾಗ್ರತೆ ವಹಿಸಿ ಎಚ್ಚರದಿಂದಿರಬೇಕು ಎಂದು ಹೇಳಿದ್ದಾರೆ. ಜೊತೆಗೆ ಸ್ವಯಂಪ್ರೇರಿತವಾಗಿ ಯಾರಾದರೂ ಬಂದರೂ ತಂಡದಲ್ಲಿ ಸೇರಿಸಿಕೊಳ್ಳಲಾಗುತ್ತದೆ. ಧೈರ್ಯದಿಂದ ಹಾಗೂ ಉತ್ಸಾಹದಲ್ಲಿ ಕೆಲಸ ಮಾಡುವ ಯುವಕರು ನಮ್ಮ ಜೊತೆಯಲ್ಲಿದ್ದಾರೆ. ಸರ್ಕಾರ ಸವಲತ್ತುಗಳನ್ನ ಕೊಟ್ಟರೆ ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಮಾಡುತ್ತೇವೆ ಎಂದಿದ್ದಾರೆ..
First published:July 1, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading