BBMP: ಬೆಂಗಳೂರಿನ ಮಳೆಯನ್ನೂ ಭ್ರಷ್ಟಾಚಾರಕ್ಕೆ ಬಳಸಿಕೊಳ್ಳುತ್ತಿದೆ ಬಿಬಿಎಂಪಿ!

Bangalore Rains: ಬಿಬಿಎಂಪಿಯ ಅಧಿಕಾರಿಗಳು, ಗುತ್ತಿಗೆದಾರರ ಜೊತೆಗೆ ಪರ್ಸಂಟೇಜ್ ವ್ಯವಹಾರ ಫಿಕ್ಸ್ ಮಾಡಿಕೊಂಡು ಮಳೆಗಾಲದ ನಿರ್ವಹಣೆ-ನಿಯಂತ್ರಣ-ರಾಜಕಾಲುವೆಗಳ ಹೂಳು.. ಹೀಗೆ ಕೆಲವೊಂದು ನೆಪಗಳನ್ನು ಇಟ್ಟುಕೊಂಡು ಹಣವನ್ನು ಕೋಟಿ ಕೋಟಿಗಳಲ್ಲಿ ಲೂಟಿ ಮಾಡುತ್ತಿದ್ದಾರೆ.

news18-kannada
Updated:May 29, 2020, 8:04 PM IST
BBMP: ಬೆಂಗಳೂರಿನ ಮಳೆಯನ್ನೂ ಭ್ರಷ್ಟಾಚಾರಕ್ಕೆ ಬಳಸಿಕೊಳ್ಳುತ್ತಿದೆ ಬಿಬಿಎಂಪಿ!
ಬಿಬಿಎಂಪಿ ಕಚೇರಿ
  • Share this:
ಬೆಂಗಳೂರು (ಮೇ 29):  ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ಮಳೆ ನೋಡುವುದೇ ಒಂದು ವಿನೂತನ ಅನುಭವದಂತಿತ್ತು. ಕವಿಗಳ ಪಾಲಿಗೆ ಮಳೆ ಒಂದು ದೃಶ್ಯಕಾವ್ಯಕ್ಕೆ ಸಮಾನವಾಗಿತ್ತು. ಕವಿ ನಿಸಾರ್ ಅಹಮದ್ ನಿತ್ಯೋತ್ಸವ ಕವಿತೆ ಬರೆಯಲು ಶಿವಮೊಗ್ಗದ ಜೋಗ  ಜಲಪಾತ ನೀಡಿದಷ್ಟೇ ಪ್ರೇರಣೆಯನ್ನು ಬೆಂಗಳೂರಿನ ಲಾಲ್​ಬಾಗ್​ನಲ್ಲಿ ಸುರಿಯುತ್ತಿದ್ದ ಮಳೆಯೂ ಸ್ಪೂರ್ತಿಯಾಗಿತ್ತೆಂದು ಹೇಳಿಕೊಂಡಿದ್ದರು. ಆದರೆ, ಇವತ್ತಿನ ಮಳೆಯೆಂದರೆ ಪ್ರಳಯ.. ಸಾವು-ನೋವು.. ಆಸ್ತಿ ನಷ್ಟ ಎನ್ನುವಂತಾಗಿದೆ.

ಬೆಂಗಳೂರಲ್ಲಿ  ಹಿಂದೆ  ಎಷ್ಟು ಪ್ರಮಾಣದ ಮಳೆ  ಆಗುತ್ತಿತ್ತು ಎಂಬುದನ್ನು ಕೇಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. 103 ಮಿಲಿ ಮೀಟರ್​ನಷ್ಟು ಮಳೆ ಬೆಂಗಳೂರಿನಲ್ಲಾದ ಉದಾಹರಣೆಗಳಿತ್ತು. ಅಷ್ಟು ಪ್ರಮಾಣದ ಮಳೆಯಾದರೂ ಬೆಂಗಳೂರು ಜನ ಅದನ್ನು ಎಂಜಾಯ್ ಮಾಡುತ್ತಿದ್ದರು. ಆದರೆ, ಕಾಲಾನುಕ್ರಮದಲ್ಲಿ ಹೆಚ್ಚಾದ ನಗರೀಕರಣದಿಂದ ಮಳೆ  ಪ್ರಮಾಣ ಗಣನೀಯವಾಗಿ ಕಡಿಮೆಯಾಯ್ತು. ಮೊದಲು ಸುರಿಯುತ್ತಿದ್ದ ಮಳೆಯಲ್ಲಿ ಅರ್ಧದಷ್ಟು ಮಳೆಯಾದರೂ ಬೆಂಗಳೂರಿನ ಚಿತ್ರಣವೇ ಅಲ್ಲೋಲ ಕಲ್ಲೋಲವಾಗುತ್ತದೆ, ಜನಜೀವನ ಅಸ್ತವ್ಯಸ್ತವಾಗುತ್ತದೆ.

ಇದನ್ನೂ ಓದಿ: ಜೂನ್ 1ರಿಂದ ದೇವಸ್ಥಾನಗಳು ಓಪನ್; ಲಾಕ್​ಡೌನ್​ನಿಂದ ಕೊನೆಗೂ ದೇವರಿಗೆ ಮುಕ್ತಿ

ಅಂದಹಾಗೆ, ಇದೆಲ್ಲಾ ಪ್ರಕೃತಿ ನಿರ್ಮಿತವಲ್ಲ. ಮಾನವ ನಿರ್ಮಿತ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು. ಇವತ್ತು ಮಳೆಯನ್ನು ವಿದ್ವಂಸಕಾರಿ ಎನ್ನುವಂತೆ ಬಿಂಬಿಸಲು ಕಾರಣವೇ ನಮ್ಮ ಆಡಳಿತ ವ್ಯವಸ್ಥೆಗಳು. ಅದರಲ್ಲೂ ಸ್ಥಳೀಯ ಆಡಳಿತವಾಗಿ ಬೆಂಗಳೂರು ಮಹಾನಗರ ಪಾಲಿಕೆ ವ್ಯವಸ್ಥೆಯನ್ನು ನಿಭಾಯಿಸುವಲ್ಲಿ ವಿಫಲವಾಗುತ್ತಿರುವುದರಿಂದ ಮಳೆ  ಎಂಬುದು ಮಾರಣಾಂತಿಕ ಎನ್ನುವಂತಾಗಿದೆ. ಮಳೆಯನ್ನು ವ್ಯವಸ್ಥಿತವಾಗಿ ನಿಭಾಯಿಸಿ ಗೆದ್ದ ಎಷ್ಟೋ ರಾಜ್ಯಗಳ ಆಡಳಿತ ವ್ಯವಸ್ಥೆಗಳು ಸಫಲವಾಗಿ ಇವತ್ತೂ ಮಳೆಯನ್ನು ಸಂಪನ್ಮೂಲವಾಗಿ ಬಳಸಿಕೊಳ್ಳುತ್ತಿವೆ. ಅಂತಹ ಸಾಧನೆ-ಯಶಸ್ಸು ಎಲ್ಲಾ ಸಂಪನ್ಮೂಲಗಳಿದ್ದ ಹೊರತಾಗಿಯೂ ಬೆಂಗಳೂರು ಹಾಗೂ ಬಿಬಿಎಂಪಿಗೆ ಏಕೆ ಆಗುತ್ತಿಲ್ಲ ಎಂಬುದು ಎಲ್ಲರನ್ನೂ ಕಾಡುವ ಪ್ರಶ್ನೆ.

ಇದನ್ನೂ ಓದಿ: Bangalore Rains: ಗುಡುಗು, ಬಿರುಗಾಳಿಸಹಿತ ಭಾರೀ ಮಳೆಗೆ ಬೆಚ್ಚಿದ ಬೆಂಗಳೂರು

ಮಳೆಗಾಲವನ್ನು ಬಿಬಿಎಂಪಿ ಸಮರ್ಥವಾಗಿ ನಿಭಾಯಿಸಿದ್ದರೆ ಪರಿಸ್ಥಿತಿ ಇಷ್ಟು ಗಂಭೀರವಾಗುತ್ತಲೇ ಇರಲಿಲ್ಲ. ಯುದ್ಧ ಕಾಲೇ ಶಸ್ತ್ರಭ್ಯಾಸ ಎನ್ನುವಂಥ ಮನಸ್ಥಿತಿಯಲ್ಲಿದೆ ಇಲ್ಲಿನ ಆಡಳಿತ ವ್ಯವಸ್ಥೆ.ಮಳೆಗಾಲಕ್ಕೆ ಮುನ್ನ ಕಾರ್ಯತಂತ್ರ ರೂಪಿಸೋದನ್ನು ಬಿಟ್ಟು ಮಳೆ ಆರಂಭವಾದ ಮೇಲೆ ಲಭೋ ಲಭೋ ಎಂದು ಬಾಯಿ ಬಡಿದುಕೊಳ್ಳುವಂಥ ಸ್ಥಿತಿ  ಬಿಬಿಎಂಪಿಯದು. ಮಳೆಗಾಲದ ವೇಳೆ ಅನಾಹುತ ಸಂಭವಿಸಿದ ಮೇಲೆ ಎಚ್ಚೆತ್ತುಕೊಂಡು ಪರಿಸ್ಥಿತಿಯನ್ನು ನಿಭಾಯಿಸಲು ಮುಂದಾಗುತ್ತಿರುವುದರಿಂದಲೇ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಇದಿಷ್ಟೇ ಆಗಿದ್ದರೆ ಪರ್ವಾಗಿಲ್ಲ. ಮಳೆಯನ್ನು ಅಕ್ರಮದ ಸರಕನ್ನಾಗಿಸಿಕೊಂಡಿರುವುದು ನಮ್ಮ ದೌರ್ಭಾಗ್ಯ.

ಬಿಬಿಎಂಪಿಯ ಅಧಿಕಾರಿಗಳು, ಗುತ್ತಿಗೆದಾರರ ಜೊತೆಗೆ ಪರ್ಸಂಟೇಜ್ ವ್ಯವಹಾರ ಫಿಕ್ಸ್ ಮಾಡಿಕೊಂಡು ಮಳೆಗಾಲದ ನಿರ್ವಹಣೆ-ನಿಯಂತ್ರಣ-ರಾಜಕಾಲುವೆಗಳ ಹೂಳು.. ಹೀಗೆ ಕೆಲವೊಂದು ನೆಪಗಳನ್ನು ಇಟ್ಟುಕೊಂಡು ಹಣವನ್ನು ಕೋಟಿ ಕೋಟಿಗಳಲ್ಲಿ ಲೂಟಿ ಮಾಡುತ್ತಿದ್ದಾರೆ. ಇದೆಲ್ಲಾ ಗೊತ್ತಿದ್ದರೂ ಬಿಬಿಎಂಪಿ ಆಡಳಿತ ವ್ಯವಸ್ಥೆ ಮಾತ್ರ ಏನೂ ಮಾಡಲಾಗದೆ ಕೈಕಟ್ಟಿ ಕೂತಿದೆ. ಇದೆಲ್ಲದರ ಪರಿಣಾಮವನ್ನು ಅಮಾಯಕ ಬೆಂಗಳೂರಿಗರು ಎದುರಿಸಬೇಕಾಗಿದೆ.
First published: May 29, 2020, 8:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading